Thursday, September 11, 2025

ಸತ್ಯ | ನ್ಯಾಯ |ಧರ್ಮ

ತಲೆಗೆ 1 ಕೋಟಿ ಬಹುಮಾನವಿದ್ದ ಮಾವೋವಾದಿ ಸೇರಿ 10 ನಕ್ಸಲರ ಎನ್ಕೌಂಟರ್

ಛತ್ತೀಸ್‌ಗಢದ (Chhattisgarh) ಗರಿಯಾಬಂದ್ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಶಬ್ದ (Encounter) ಕೇಳಿ ಬಂದಿದ್ದು, ನಕ್ಸಲ್ (Anti naxal operation) ಸಂಘಟನೆಯ ಹಿರಿಯ ನಾಯಕ ಸೇರಿದಂತೆ 10 ಜನರನ್ನು ಭದ್ರತಾ ಪಡೆ  ಹೊಡೆದುರುಳಿಸಿದೆ.

ಮೈನ್‌ಪುರ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಉಪಸ್ಥಿತಿಯ ಗುಪ್ತಚರ ಮಾಹಿತಿಯ ಮೇರೆಗೆ, ಇ -30, ಎಸ್‌ಟಿಎಫ್ ಮತ್ತು ಕೋಬ್ರಾ ಜಂಟಿ ತಂಡಗಳು ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.

ಬೆಳಗ್ಗೆಯಿಂದಾಗಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಕಾರ್ಯಚರಣೆಯಲ್ಲಿ ಹಿರಿಯ ನಾಯಕ ಮೋಡೆಮ್ ಬಾಲಕೃಷ್ಣ ಎಂದೂ ಕರೆಯಲ್ಪಡುವ ಸಿಸಿ ಸದಸ್ಯ ಮನೋಜ್ ಸೇರಿದಂತೆ ಹತ್ತು ಜನ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಹಲವು ವರ್ಷಗಳಿಂದ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಮನೋಜ್ ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು. ಇದೀಗ ಆತನನ್ನು ಭದ್ರತಾ ಪಡೆ ಎನ್ಕೌಂಟರ್ ಮೂಲಕ ಹೊಡೆದುರುಳಿಸಿದ್ದಾರೆ. 

ಎನ್‌ಕೌಂಟರ್ ಇನ್ನೂ ನಡೆಯುತ್ತಿರುವುದರಿಂದ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಯ್‌ಪುರ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಮರೇಶ್ ಮಿಶ್ರಾ, ಈ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ಎನ್‌ಕೌಂಟರ್ ಸಂಭವಿಸಿದೆ ಎಂದು ಹೇಳಿದರು.

ಇನ್ನು ಕಾರ್ಯಾಚರಣೆ ಮುಗಿದ ನಂತರ, ಭೂ ಪರಿಶೀಲನೆ ಪೂರ್ಣಗೊಂಡ ನಂತರ ವಿವರವಾದ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಕಾರ್ಯಾಚರಣೆಯು ಗರಿಯಾಬಂದ್ ಜಿಲ್ಲೆಯಲ್ಲಿ ನಡೆಯುತ್ತಿರುವ ತೀವ್ರಗೊಂಡ ನಕ್ಸಲ್ ನಿರ್ಮೂಲನಾ ಅಭಿಯಾನದ ಭಾಗವಾಗಿದೆ. ಪ್ರತ್ಯೇಕ ಘಟನೆಯಲ್ಲಿ.. ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ ಮಾವೋವಾದಿ ನಾಯಕನೊಬ್ಬ ಮೃತಪಟ್ಟಿದ್ದಾನೆ.

ಭಾನುವಾರ ತಡರಾತ್ರಿಯಿಂದ ಇಂದು ಬೆಳಗ್ಗಿನವರೆಗೆ ಪೊಲೀಸರೊಂದಿಗೆ ನಡೆದ ಈ ಎನ್‌ಕೌಂಟರ್‌ನಲ್ಲಿ ಮನೀಶ್ ಯಾದವ್ ಸಾವನ್ನಪ್ಪಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಪಲಮು ಉಪ ಮಹಾನಿರೀಕ್ಷಕ ವೈ.ಎಸ್. ರಮೇಶ್ ಈ ಬಗ್ಗೆ ವಿವರಣೆ ನೀಡಿದ್ದು, ಮಹುವಾದನ್ರ್ ಪೊಲೀಸ್ ಠಾಣೆ ಪ್ರದೇಶದ ದೌನಾ ಮತ್ತು ಕರಮ್‌ಖಾಡ್ ನಡುವಿನ ಕಾಡಿನಲ್ಲಿ ನಕ್ಸಲೈಟ್ ಕಮಾಂಡರ್ ಮನೀಶ್ ಯಾದವ್ ಮತ್ತು ಆತನ ತಂಡವು ಚಲನವಲನಗಳ ಬಗ್ಗೆ ಲತೇಹಾರ್ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಪಡೆದ ನಂತರ, ಪೊಲೀಸ್ ತಂಡವು ನಕ್ಸಲೀಯರನ್ನು ಸುತ್ತುವರಿದಿದ್ದು, ಪೊಲೀಸರು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದು ಯಾದವ್ ಸಾವನ್ನಪ್ಪಿದ್ದಾನೆ. ಈತನ ತಲೆಗೆ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page