Saturday, June 15, 2024

ಸತ್ಯ | ನ್ಯಾಯ |ಧರ್ಮ

ರುವಾ ಶಾ ತಂದೆಗೆ ಅನಾರೋಗ್ಯ: ಆಸ್ಪತ್ರೆಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳಿಗೆ ಮನವಿ

ರುವಾ ಶಾ ಅವರು ತಮ್ಮ ತಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಶೀಘ್ರವೇ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರಿ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ಮಾಹಿತಿಯನ್ನು ಟ್ವೀಟ್‌ ಮೂಲಕ ಹಂಚಿಕೊಂಡಿರುವ ರುವಾ ಶಾ ಅವರು, ನ್ಯುಮೋನಿಯಾ, ಅನಿಯಂತ್ರಿತ ಮಧುಮೇಹ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ತೀವ್ರವಾಗಿ ಅಸ್ವಸ್ಥರಾಗಿರುವ ನನ್ನ ತಂದೆ ಅವರು ಪ್ರಸ್ತುತ ಆಮ್ಲಜನಕದ ಬೆಂಬಲದಿಂದ ಜೈಲಿನ ಐಸಿಯು ನಲ್ಲಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗೆ ಸರಿಯಾದ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರಿ ಜೈಲು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.

@PMOIndia ಮತ್ತು @HMOIndia ದಯವಿಟ್ಟು ನನ್ನ ತಂದೆಗೆ ಸರಿಯಾದ ವೈದ್ಯಕೀಯ ಆರೈಕೆಯನ್ನು ಪಡೆಯಲು ಅವಕಾಶ ಮಾಡಿಕೊಡಲು ಮತ್ತು ಇದನ್ನು ಇನ್ನಷ್ಟು ವಿಳಂಬ ಮಾಡಬೇಡಿ. ಇದು ಕುಟುಂಬದವರ ಪ್ರಾಮಾಣಿಕ ವಿನಂತಿ. ವಿಚಾರಣೆಯಂತೆಯೇ ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಬಹುದು ಆದರೆ ತಡವಾಗುವ ಮೊದಲು ಅವರಿಗೆ ವೈದ್ಯಕೀಯ ಆರೈಕೆಯನ್ನು ಕೊಡಿ ಎಂದು ಕೋರಿದ್ದಾರೆ.

ಇದನ್ನೂ ನೋಡಿ: https://www.youtube.com/watch?v=U_g8oYiWJP4&list=UU-xt7Mk2bvdfuq9QVofcWCw&index=6

Related Articles

ಇತ್ತೀಚಿನ ಸುದ್ದಿಗಳು