Monday, September 15, 2025

ಸತ್ಯ | ನ್ಯಾಯ |ಧರ್ಮ

ಏಷ್ಯಾ ಕಪ್ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸುಲಭ ಜಯ

ದುಬೈ : ಏಷ್ಯಾ ಕಪ್ ನ ಆರನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ ಸುಲಭವಾಗಿ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತಕ್ಕೆ ಕೇವಲ 128 ರನ್ ಗಳ ಸುಲಭದ ಗುರಿ ನೀಡಿತ್ತು. ಆದರೆ ಭಾರತ 3 ವಿಕೆಟ್ ಕಳೆದುಕೊಂಡು ಕೇವಲ 15.5 ಓವರುಗಳಲ್ಲಿ ಗುರಿ ಮುಟ್ಟಿತು.‌ ಇದರೊಂದಿಗೆ ಈ ಬಾರಿಯ ಏಷ್ಯಾ ಕಪ್ ನಲ್ಲಿ ಸಮಿಫೈನಲ್ ಗೇರಿದ ಮೊದಲ ತಂಡ ಎನಿಸಿಕೊಂಡಿತು.

ಸಂಘಟಿತ ಆಟದ ನೆರವಿನಿಂದ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಏಷ್ಯಾ ಕಪ್ ನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 7 ವಿಕೆಟ್ ಗಳಿಂದ ಪರಾಭವಗೊಳಿಸಿದೆ. ಸ್ಪಿನ್ ಬೌಲಿಂಗ್ ಗೆ ನೆರವು ನೀಡುತ್ತಿದ್ದ ಪಿಚ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ಅದಕ್ಕೆ ತಕ್ಕ ಬೆಲೆ ತೆರುವಂತಾಯಿತು. ಇದೀಗ ಸತತ ಎರಡು ಗೆಲುವಿನ ಮೂಲಕ ಭಾರತ ತಂಡ ಎ ಬಣದಿಂದ ಸೂಪರ್ 4 ಹಂತಕ್ಕೆ ಮೊದಲ ತಂಡವಾಗಿ ಅರ್ಹತೆ ಪಡೆದಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತಂಡವು ಭಾರತದ ದಿಟ್ಟ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ 20 ಓವರ್ ಗಳಲ್ಲಿ ಕೇವಲ 9 ವಿಕೆಟ್ ಕಳೆದುಕೊಂಡು 127 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಭಾರತ ತಂಡ ಕೇವಲ 15.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page