Monday, September 22, 2025

ಸತ್ಯ | ನ್ಯಾಯ |ಧರ್ಮ

“ಕಾಂತಾರ – 1” ತಂಡದಿಂದ ಮಾಂಸಾಹಾರಿಗಳ ಬಗ್ಗೆ ಬೇಜವಾಬ್ದಾರಿ ಹೇಳಿಕೆ ; ಮಾಂಸ ತಿಂದು ಬರುವವರಿಗೆ ಸಿನಿಮಾ ನಿರ್ಬಂಧವಂತೆ!?

ಅಕ್ಟೋಬರ್‌ 2ರ ಗಾಂಧಿ ಜಯಂತಿಯಂದು ಬಿಡುಗಡೆ ಭಾಗ್ಯ ಕಾಣುತ್ತಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಈಗ ವಿವಾದದ ವಸ್ತುವಾಗುವತ್ತ ಹೆಜ್ಜೆ ಇಟ್ಟಿದೆ. ಸಿನೆಮಾ ನೋಡಲು ಬರುವವರು ಮಾಂಸಾಹಾರ ಸೇವಿಸದೇ ಬರಬೇಕು ಎಂಬ ಪೋಸ್ಟರ್ ಒಂದು ಈಗ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಂತಾರ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಕೇವಲ ಮೂರೇ ಗಂಟೆಗಳಲ್ಲಿ 17 ಲಕ್ಷ ವೀಕ್ಷಕರನ್ನು ತಲುಪಿದೆ. ಸಹಜವಾಗಿ 2022 ರಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಎಬ್ಬಿಸಿದ ಕ್ರೇಜ್ ಗೆ ಎರಡನೇ ಸಿನಿಮಾ ಬಗ್ಗೆಯೂ ವೀಕ್ಷಕರ ನಿರೀಕ್ಷೆ ಹೆಚ್ಚಿದೆ. ಹೀಗಾಗಿ ಟ್ರೈಲರ್ ವೀಕ್ಷಣೆ ದಾಖಲೆ ನಿರ್ಮಿಸಿದೆ.

ಆದರೆ ಟ್ರೈಲರ್ ಬಿಡುಗಡೆ ಬೆನ್ನಲ್ಲೇ ಮಾಂಸಾಹಾರ ಸೇವಿಸದೇ ಬರಬೇಕು ಎಂಬ ಫತ್ವಾ ಹೊರಡಿಸಿದ್ದ ಬಗ್ಗೆ ಈಗ ಸಣ್ಣ ಮಟ್ಟದ ಆಕ್ರೋಶ ಹೊರಬಿದ್ದಿದೆ.

ಪೋಸ್ಟರ್ ನಲ್ಲಿ ಧೂಮಪಾನ, ಮದ್ಯಪಾನ ಮತ್ತು ಮಾಂಸಾಹಾರ ತ್ಯಜಿಸಿ ಬರಬೇಕು ಎಂಬ ಅಂಶಗಳನ್ನು ಸೇರಿಸಿದ್ದಾರೆ. ಧೂಮಪಾನ ಮದ್ಯಪಾನ ಸರಿ, ಆದರೆ ಮಾಂಸಾಹಾರವನ್ನು ಯಾಕೆ ಉಲ್ಲೇಖಿಸಿದ್ದಾರೆ ಎಂಬುದು ಈಗ ಚರ್ಚೆ ಶುರುವಾಗಿದೆ. ಮಾಂಸಾಹಾರ ಕೆಟ್ಟ ಅಭ್ಯಾಸವೇ ಎಂಬ ಪ್ರಶ್ನೆ ಎದುರಾಗಿದೆ.

ಕಾಂತಾರ ಮೊದಲ ಸಿನಿಮಾದಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿಯುವ, ಯತೇಚ್ಛವಾಗಿ ಧೂಮಪಾನ ಮದ್ಯಪಾನ ಮಾಡುವ, ಹಂದಿ ಮಾಂಸ ತಿನ್ನುವ, ಪ್ರಾಣಿ ಬೇಟೆಯ ಶಿಕಾರಿ ಮಾಡುವ, ಹೆಣ್ಣು ಮಕ್ಕಳ ಚುಡಾಯಿಸುವ, ಹೆಣ್ಣಿನ ಜೊತೆ ಅಸಭ್ಯವಾಗಿ ನಡೆದುಕೊಳ್ಳುವ, ಮೂರನೇ ದರ್ಜೆಯ ಡೈಲಾಗ್ ಹೇಳುವ ಅಂಶಗಳಿದ್ದರೂ ಸಿನಿಮಾ ನೋಡಿದ್ದರು. ಒಂದರ್ಥದಲ್ಲಿ ಆ ಅಂಶಗಳೂ ಸಿನಿಮಾ ಸಕ್ಸಸ್ ಗೆ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಇಲ್ಲಿ ಯಾಕೆ ಈ ನಿರ್ಬಂಧ ಎಂಬ ಪ್ರಶ್ನೆಯನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಎತ್ತಿದ್ದಾರೆ.

ಎಲ್ಲ ವರ್ಗದವರೂ, ಎಲ್ಲ ಧರ್ಮದವರೂ ಕಾಯುತ್ತಿರುವ ಕಾಂತಾರ ಚಿತ್ರದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದು ವೈರಲ್‌ ಆಗಿದ್ದು, ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅಷ್ಟೇ ಅಲ್ಲದೆ ನಗೆಪಾಟಲಿಗೆ ಎಡೆ ಮಾಡಿಕೊಟ್ಟಿದೆ.

ಮೇಲ್ನೋಟಕ್ಕೆ ಹೇಳುವುದಾದರೆ ಈ ಪೋಸ್ಟರ್ ಗೂ ಸಿನಿಮಾ ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಈ ಸಂದೇಶ ಸಸ್ಯಾಹಾರ ಹಾಗೂ ಮಾಂಸಹಾರ ಸೇವಿಸುವವರ ನಡುವೆ ಇರುವ ಕಂದಕ ಮತ್ತಷ್ಟು ಹೆಚ್ಚಿಸುವ ಹಾಗೂ ನಡುವೆ ಕಿಡಿ ಹೊತ್ತಿಸುವ ಯತ್ನ ನಡೆದಿರುವ ಅನುಮಾನಗಳಿಗೂ ಸಹ ಈ ಪೋಸ್ಟ್‌ ಎಡೆ ಮಾಡಿಕೊಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page