Thursday, September 25, 2025

ಸತ್ಯ | ನ್ಯಾಯ |ಧರ್ಮ

ರಾಜ್ಯದ 39 ನಿಗಮ-ಮಂಡಳಿಗಳಿಗೆ ನೂತನ ಅಧ್ಯಕ್ಷರ ನೇಮಕ: ವಿನಯ್ ಕುಲಕರ್ಣಿ ಪತ್ನಿಗೂ ಸ್ಥಾನ

ಬೆಂಗಳೂರು: ಹಲವು ದಿನಗಳಿಂದ ಖಾಲಿ ಉಳಿದಿದ್ದ ರಾಜ್ಯದ ಒಟ್ಟು 39 ನಿಗಮಗಳು, ಮಂಡಳಿಗಳು ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರ ನೇಮಕಾತಿ ಪಟ್ಟಿಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಬಿಡುಗಡೆ ಮಾಡಿದೆ. ಈ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದ್ದಾರೆ.

ಈ ಪಟ್ಟಿಯಲ್ಲಿ ಗಮನಾರ್ಹವಾದ ವಿಷಯವೆಂದರೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (KUWSDB) ಈ ಹಿಂದೆ ಅಧ್ಯಕ್ಷರಾಗಿದ್ದ ಶಾಸಕ ವಿನಯ್ ಕುಲಕರ್ಣಿ ಅವರ ಸ್ಥಾನಕ್ಕೆ ಅವರ ಪತ್ನಿ ಶಿವಲೀಲಾ ವಿನಯ್ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ, ವಿನಯ್ ಕುಲಕರ್ಣಿ ಅವರು ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ.

ಇನ್ನುಳಿದ ಪ್ರಮುಖ ನೇಮಕಾತಿಗಳಲ್ಲಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (KSIIDC) ಅಧ್ಯಕ್ಷರಾಗಿ ನೇಮಿಸಲಾಗಿದೆ. ಹಾಗೆಯೇ, ಮತ್ತೊಬ್ಬ ಮಾಜಿ ಶಾಸಕ ಎನ್. ಸಂಪಂಗಿ ಅವರು ವೇರ್‌ಹೌಸಿಂಗ್ ಕಾರ್ಪೊರೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೆ, ವಿವಿಧ ಜಾತಿಗಳ ಅಭಿವೃದ್ಧಿ ನಿಗಮಗಳಿಗೂ ಅಧ್ಯಕ್ಷರ ನೇಮಕಾತಿ ನಡೆದಿದೆ.

ವಿವಿಧ ನಿಗಮಗಳ ಅಧ್ಯಕ್ಷರ ಪಟ್ಟಿ

  • ಲಾವಣ್ಯ ಬಲ್ಲಾಳ್‌ ಜೈನ್‌ -ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆ
  • ಪಿ.ರಘು – ಸಫಾಯಿ ಕರ್ಮಚಾರಿ ಆಯೋಗ
  • ಅರುಣ್‌ ಪಾಟೀಲ್‌ – ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ
  • ಶಿವಲೀಲಾ ವಿನಯ್‌ ಕುಲಕರ್ಣಿ – ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
  • ವಡ್ನಾಳ್‌ ಜಗದೀಶ್‌ – ಜೀವವೈವಿಧ್ಯ ಮಂಡಳಿ
  • ಮುರಳಿ ಅಶೋಕ್‌ – ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
  • ಡಾ.ಮೂರ್ತಿ – ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ
  • ಮಲ್ಲಿಕಾರ್ಜುನ್‌ – ಮಾಜಿ ಸೈನಿಕರ ಕಲ್ಯಾಣ ಮಂಡಳಿ
  • ಡಾ.ಬಿ.ಸಿ.ಮುದ್ದುಗಂಗಾಧರ್‌ – ಮಾವು ಅಭಿವೃದ್ಧಿ ನಿಗಮ
  • ಶರ್ಲೆಟ್‌ ಪಿಂಟೋ – ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
  • ಮರಿಯೋಜಿ ರಾವ್‌ – ಮರಾಠ ಅಭಿವೃದ್ಧಿ ನಿಗಮ
  • ಎಂ.ಎ.ಗಫೂರ್‌ – ಕರಾವಳಿ ಅಭಿವೃದ್ಧಿ ಪ್ರಾಧಿಕಾರ
  • ಕೆ. ಹರೀಶ್‌ ಕುಮಾರ್‌ – ಮೆಸ್ಕಾಂ
  • ಎನ್‌. ಸಂಪಂಗಿ – ಕರ್ನಾಟಕ ವೇರ್‌ಹೌಸಿಂಗ್‌ ಕಾರ್ಪೊರೇಷನ್‌
  • ವೈ. ಸಯೀದ್‌ ಅಹ್ಮದ್‌ -ದೇವರಾಜ ಅರಸು ಟ್ರಕ್‌ ಟರ್ಮಿನಲ್‌
  • ಮಹೇಶ್‌ – ಕಾಡುಗೊಲ್ಲಅಭಿವೃದ್ಧಿ ನಿಗಮ
  • ಮಂಜಪ್ಪ – ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ
  • ಧರ್ಮಣ್ಣ ಉಪ್ಪಾರ – ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
  • ಅಗಾ ಸುಲ್ತಾನ್‌ – ಕೇಂದ್ರ ಪರಿಹಾರ ಸಮಿತಿ
  • ಎಸ್‌.ಜಿ. ನಂಜಯ್ಯನಮಠ – ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
  • ಆಂಜನಪ್ಪ – ಬೀಜ ಅಭಿವೃದ್ಧಿ ನಿಗಮ ನಿಯಮಿತ
  • ನೀಲಕಂಠ ಮುಳ್ಗೆ – ಕಲ್ಯಾಣ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
  • ಬಾಬು ಹೊನ್ನಾ ನಾಯ್ಕ್‌ – ಕಾಡಾ, ಭೀಮರಾಯನಗುಡಿ, ಕಲಬುರಗಿ
  • ಯುವರಾಜ್‌ ಕದಂ – ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ, ಬೆಳಗಾವಿ
  • ಅನಿಲ್‌ ಕುಮಾರ್‌ ಜಾಮಬಾರ್‌ – ತೊಗರಿಬೇಳೆ ಅಭಿವೃದ್ಧಿ ನಿಗಮ, ಕಲಬುರಗಿ
  • ಪ್ರವೀಣ್‌ ಹರ್ವಾಲ್‌ – ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ)
  • ಮಂಜುನಾಥ ಪೂಜಾರಿ – ನಾರಾಯಣ ಗುರು ಅಭಿವೃದ್ಧಿ ನಿಗಮ
  • ಸೈಯದ್‌ ಮೊಹಮೂದ್‌ ಚಿಸ್ಟಿ – ಬೇಳೆಕಾಳುಗಳ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ
  • ಎಂ.ಎಸ್‌. ಮುತ್ತುರಾಜ್‌ – ಸವಿತಾ ಸಮಾಜ ಅಭಿವೃದ್ಧಿ ನಿಗಮ
  • ನಂಜಪ್ಪ – ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
  • ವಿಶ್ವಾಸ್‌ ದಾಸ್‌ – ಗಾಣಿಗ ಅಭಿವೃದ್ಧಿ ನಿಗಮ
  • ಆರ್‌.ಎಸ್‌. ಸತ್ಯನಾರಾಯಣ – ರಾಜ್ಯ ಮದ್ಯಪಾನ ಸಂಯಮ ಮಂಡಳಿ
  • ಗಂಗಾಧರ್‌ – ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್‌
  • ಶಿವಪ್ಪ -ಹಾಸನ ನಗರಾಭಿವೃದ್ಧಿ ಪ್ರಾಧಿಕಾರ
  • ಬಿ.ಎಸ್‌. ಕವಲಗಿ -ನಿಂಬೆ ಅಭಿವೃದ್ಧಿ ಮಂಡಳಿ
  • ಡಾ. ಶ್ರೀನಿವಾಸ ವೇಲು – ಕುಂಬಾರ ಅಭಿವೃದ್ಧಿ ನಿಗಮ
  • ಟಿ.ಎಂ. ಶಹೀದ್‌ ಥೆಕ್ಕಿಲ್‌ – ರಾಜ್ಯ ಕನಿಷ್ಠ ವೇತನ ಮಂಡಳಿ
  • ಚೇತನ್‌ ಕೆ. ಗೌಡ – ಕೈಮಗ್ಗ ಅಭಿವೃದ್ಧಿ (ಪವರ್‌ಲೂಮ್‌) ಮಂಡಳಿ
  • ಶರಣಪ್ಪ ಸಲಾದ್‌ಪುರ್‌ -ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಅಭಿವೃದ್ಧಿ ಮಂಡಳಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page