Thursday, September 25, 2025

ಸತ್ಯ | ನ್ಯಾಯ |ಧರ್ಮ

ಜಾತಿ ಜನಗಣತಿ ತಡೆಗೆ ಹೈಕೋರ್ಟ್ ನಕಾರ; ಸರ್ಕಾರ ನಿರಾಳ

ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಪ್ರಶ್ನಿಸಿ ಹೈಕೋರ್ಟಿಗೆ ಸಲ್ಲಿಸಿದ್ದ ಪಿಐಎಲ್‌ಗೆ ಹೈಕೋರ್ಟ್ ವಿಭಾಗಿಯ ಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಯಿತು. ಸಮೀಕ್ಷೆಗೆ ತಡೆ ನೀಡಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ.

ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆರಂಭವಾಗಿದೆ. ಇದಕ್ಕೆ ತಡೆ ಕೋರಿದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠವು ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

ಜಾತಿ ಗಣತಿಯನ್ನು ಪ್ರಶ್ನೆ ಮಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ , ರಾಜ್ಯ ಒಕ್ಕಲಿಗರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದೆ. ಇನ್ನೂ ಇದೇ ವೇಳೆ ನ್ಯಾಯಪೀಠ ಯಾವುದೇ ಕಾರಣಕ್ಕೂ ನೀವು ಸಾರ್ವಜನಿಕರಿಗೆ ಒತ್ತಡ ಹಾಕುವ ಹಾಗೇ ಇಲ್ಲ, ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ದತ್ತಾಂಶ ಸರ್ಕಾರ ಹೊರತು ಪಡಿಸಿ ಬೇರೆ ಯಾರಿಗೂ ಕೂಡ ಲಭ್ಯವಾಗಬಾರದು. ಗುರುವಾರ ತಡೆಯಾಜ್ಞೆ ನೀಡಲು ನಿರಾಕರಿಸಿದ ಕೋರ್ಟ್‌, ಲಿಖಿತ ವಾದಾಂಶ ಸಲ್ಲಿಕೆಗೆ ಸೂಚಿಸಿ ವಿಚಾರಣೆಯನ್ನು ಇಂದು ಮುಂದೂಡಿತು.

ಆಯೋಗದ ಪರವಾಗಿ ಪ್ರೊ. ರವಿವರ್ಮಕುಮಾರ್ ಅವರು ವಾದ ಆರಂಭಿಸಿದರು. 5 ನಿಮಿಷವಾದ ಮಂಡಿಸಲು ಅವಕಾಶ ನೀಡುವಂತೆ ಕೋರ್ಟಿಗೆ ಮನವಿ ಮಾಡಿದರು. ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧರಿಸಿ ವಾದ ಮಂಡನೆ ಮಾಡಿದರು. ಶೀಘ್ರವಾದ ಮಂಡನೆ ಪೂರ್ಣಗೊಳಿಸಲು ಇದೆ ವೇಳೆ ಕೋರ್ಟ್ ಸೂಚನೆ ನೀಡಿತು. ಒಂದು ಪತ್ರ ಬಂದಿದೆ ಅದನ್ನು ನಿಮಗೆ ನೀಡುತ್ತೇನೆ ಎಂದು ಜಡ್ಜ್ ಗೆ ರವಿವರ್ಮಕುಮಾರ್ ಪತ್ರ ನೀಡಿದರು.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಮಾಹಿತಿ ರಕ್ಷಣೆ ಕಡ್ಡಾಯವಾಗಿದೆ ಸೂಕ್ಷ್ಮ ಮತ್ತು ವೈಯಕ್ತಿಕ ದತ್ತಾಂಶ ರಕ್ಷಣೆಗೆ ನೀತಿರೂಪಿಸಬೇಕು. ಸಮೀಕ್ಷೆ ವೇಳೆ ಸಂಗ್ರಹಿಸಿದ ತಂಶ ಎಲ್ಲಿ ಸಂಗ್ರಹಿಸುತ್ತಾರೆ? ಹ್ಯಾಕಿಂಗ್ ನಿಂದ ದತ್ತಾಂಶ ರಕ್ಷಣೆಗೆ ಯಾವ ಕ್ರಮ ಕೈಗೊಂಡಿದ್ದಾರೆ? ಯಾವುದರ ಮಾಹಿತಿಯನ್ನು ಕೂಡ ರಾಜ್ಯ ಸರ್ಕಾರ ನೀಡಿಲ್ಲ ಎಂದು ವಾದಿಸಿದರು.

ವಾದ ವಿವಾದ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ ಕೆಲವು ಷರತ್ತುಗಳೊಂದಿಗೆ ಸರ್ಕಾರಕ್ಕೆ ಜಾತಿ ಜನಗಣತಿ ಮುಂದುವರೆಸಲು ಅನುವು ಮಾಡಿಕೊಟ್ಟಿದೆ.

ಷರತ್ತುಗಳೇನು?
1) ದತ್ತಾಂಶವನ್ನು ಸರ್ಕಾರ ಸೇರಿ ಯಾರಿಗೂ ಬಹಿರಂಗಪಡಿಸಬಾರದು.
2) ದತ್ತಾಂಶದ ಗೌಪ್ಯತೆಯನ್ನು ಹಿಂದುಳಿದ ವರ್ಗಗಳ ಆಯೋಗ ರಕ್ಷಿಸಬೇಕು.
3) ಜನರು ಸ್ವಯಂ ಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು.
4) ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.
5) ಮಾಹಿತಿ ನೀಡುವಂತೆ ಜನರಿಗೆ ಯಾವುದೇ ಒತ್ತಡ ಹಾಕಬಾರದು.
6) ಆಯೋಗ ಹೊರತುಪಡಿಸಿ ಬೇರೆ ಯಾರಿಗೂ ದತ್ತಾಂಶ ಸಿಗುವಂತಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page