Wednesday, October 8, 2025

ಸತ್ಯ | ನ್ಯಾಯ |ಧರ್ಮ

ನಟ್ಟು ಬೋಲ್ಟು, ಬಿಗ್ ಬಾಸ್‌ ಬಂದ್‌ – ಡಿಕೆಶಿ ವಿರುದ್ದ ಜೆಡಿಎಸ್‌ ಕಿಡಿ

ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ ಜಾಲಿವುಡ್‌ ಸ್ಟೂಡಿಯೋ (Jollywood Studio) ಆವರಣದಲ್ಲಿ ನಡೆಯುತ್ತಿರುವ ಕನ್ನಡದ ಬಿಗ್‌ ಬಾಸ್‌ (Bigg Boss) ರಿಯಾಲಿಟಿ ಶೋನ ಮನೆಗೆ ಬೀಗ ಹಾಕಲಾಗಿದೆ. ಇದೀಗ ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ, ನಟ್ಟು ಬೋಲ್ಟ್ ಮಿನಿಸ್ಟರ್ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ಕಲಾವಿದರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ ಎಂದು ಜೆಡಿಎಸ್‌ (JDS) ಕಿಡಿಕಾರಿದೆ. ಈ ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಬರೆದಿರುವ ಜೆಡಿಎಸ್‌, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ, ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಎಂದು ಬರೆದು, ಡಿಕೆಶಿ ಅವರ ಹಳೆಯ ನಟ್ಟು ಬೋಲ್ಟ್‌ ಎಂದು ಹೇಳಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಡಿಕೆಶಿ ಅವರು ಕಲಾವಿದರನ್ನು ಗುರಿಯಾಗಿಸಿಕೊಂಡು, ಶೂಟಿಂಗ್‌ ನಡೆಯಲ್ಲ ನಮಗೂ ಗೊತ್ತಿದೆ. ಯಾರ್ಯಾರಿಗೆ ಎಲ್ಲೆಲ್ಲಿ ನಟ್ಟು ಬೋಲ್ಟು ಟೈಟ್‌ ಮಾಡ್ಬೇಕು
ಅಂತ ಕೂಡಾ ನನಗೆ ಗೊತ್ತಿದೆ ಎಂದು ಹೇಳಿದ್ದರು. ವರದಿಗಳ ಪ್ರಕಾರ ಮಾಲಿನ್ಯ ನಿಯಮ ಉಲ್ಲಂಘಿಸಿದ್ದಕ್ಕೆ ಬಿಗ್‌ ಬಾಸ್‌ ಶೋ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋವನ್ನು ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಬಂದ್‌ ಮಾಡಿದೆ. ಪರಿಣಾಮ ಎಲ್ಲಾ ಸ್ಪರ್ಧಿಗಳು ಎರಡೇ ವಾರಕ್ಕೆ ಶೋದಿಂದ ಎಲಿಮಿನೇಟ್‌ ಆಗಿದ್ದಾರೆ ಎನ್ನಲಾಗಿದೆ.

ಜಾಲಿವುಡ್ ಸ್ಟುಡಿಯೋಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ, ನೋಟಿಸ್ ಗೆ ಕೂಡ ಉತ್ತರಿಸಿಲ್ಲ, ಲಕ್ಷಾಂತರ ಲೀಟರ್ ನೀರು ವೇಸ್ಟ್ ಮಾಡಲಾಗುತ್ತಿದೆ ಹಾಗೇ ಕಸ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ ಎಂಬ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಕೂಡ ಪ್ರತಿಕ್ರಿಯಿಸಿದ್ದು, ಕಾನೂನು ಎಲ್ಲರಿಗೂ ಒಂದೇ, ಪದೇಪದೆ ನೋಟಿಸ್ ನೀಡಿದರೂ ಜಾಲಿವುಡ್ ಸ್ಟುಡಿಯೋ ಯಾವುದೇ ಉತ್ತರ ನೀಡುತ್ತಿಲ್ಲ ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಅಲ್ಲದೇ ಜಾಲಿವುಡ್ ಸ್ಟುಡಿಯೋ ಬಂದ್ ಮಾಡಬೇಕು ಎಂದು ಕೆಲ ಸಂಘಟನೆಗಳು ಹೋರಾಟ ನಡೆಸುತ್ತಿದ್ದವು. ಅದರಂತೆ ಇದೀಗ ವೈಲ್ಡ್ ಕಾರ್ಡ್ ಆಗಿ ಸಪ್ರೈಸ್ ಎಂಟ್ರಿ ಕೊಟ್ಟ ತಹಶೀಲ್ದಾರ್, ಎಲ್ಲಾ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಿ ಇಡೀ ಬಿಗ್ ಬಾಸ್ ಮನೆಗೆ ಬೀಗ ಜಡಿದಿದ್ದಾರೆ. ಈ ಹಿನ್ನಲೆ ಸ್ಪರ್ಧಿಗಳನ್ನು ಹೊರಕ್ಕೆ ಕರೆದುಕೊಂಡು ಬಂದಿದ್ದು, ಸದ್ಯ ಆಯೋಜಕರು ಸ್ಪರ್ಧಿಗಳಿಗೆ ವಾಸ್ತವ್ಯಕ್ಕೆ ಈಗಲ್ ಟನ್ ರೆಸಾರ್ಟ್ ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸ್ಪರ್ಧಿಗಳನ್ನು ಕಾರಿನ ಮೂಲಕ ಈಗಲ್ ಟನ್ ರೆಸಾರ್ಟ್ ಶಿಫ್ಟ್ ಮಾಡಲಾಗಿದೆ.

ರಾಮನಗರ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಜಾಲಿವುಡ್ ನ ಮತ್ತೊಂದು ಮೇನ್ ಗೇಟ್ ಸೀಜ್ ಮಾಡಲಾಗಿದ್ದು, ಈ ವಿಚಾರವಾಗಿ ತಹಶೀಲ್ದಾರ್ ತೇಜಸ್ವಿನಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ ಅಧಿಕಾರಿಗಳ ಕಾರ್ಯಕ್ಕೆ ಕನ್ನಡಪರ ಹೋರಾಟಗಾರ ನರಸಿಂಹಮೂರ್ತಿ ಅಭಿನಂದನೆ ಸಲ್ಲಿಸಿದ್ದು, ಜಾಲಿವುಡ್ ಮಾಲೀಕನಿಗೆ ದುರಂಹಕಾರ. ಇದರಿಂದ ಬಿಗ್ ಬಾಸ್ ಇವತ್ತು ನಿಂತಿದೆ ಎಂದು ಆರೋಪ ಮಾಡಿದ್ದಾರೆ.ಬಿಗ್ ಬಾಸ್ ಬಂದ್ ಮಾಡುವಂತೆ ನಿನ್ನೆ ನೋಟಿಸ್ ನೀಡಿದ್ದರು. ಆದರೆ ನೋಟಿಸ್ ಪಡೆಯಲು ಜಾಲಿವುಡ್ ವೀಡಿಯೋಸ್ ಹಿಂದಿಟು ಹಾಕಿದ್ದರು. ಹಾಗಾಗಿ ಇದೇ ಕಾರಣಕ್ಕೆ ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಪೊಲೀಸರು ಆಗಮಿಸಿದ್ದರು, ಇದೀಗ ತಹಶೀಲ್ದಾರ್‌ ತೇಜಸ್ವಿನಿ ನೇತೃತ್ವದಲ್ಲಿ ಬೀಗ ಹಾಕಿದ್ದಾರೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page