Wednesday, October 8, 2025

ಸತ್ಯ | ನ್ಯಾಯ |ಧರ್ಮ

ಮಾಧ್ಯಮದವರ ಕಡೆಗಣನೆ ಹಾಸನಾಂಬೆ ಬಾಗಿಲು ತೆರೆಯುವ ಹುನ್ನಾರ, ಮೌನ ಪ್ರತಿಭಟನೆ

ಪ್ರತಿಭಟನಾ ಸ್ಥಳಕ್ಕೆ ಮುಜರಾಯಿ ಸಚಿವ ಆಗಮನ ಚರ್ಚೆ

ಹಾಸನ : ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯುವ ಕ್ಷಣಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಜಿಲ್ಲಾಡಳಿತದ ಕ್ರಮ ಮಾಧ್ಯಮ ವಲಯದಲ್ಲಿ ಅಸಮಾಧಾನ ಮೂಡಿಸಿದೆ. ಈ ಬಗ್ಗೆ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಜೊತೆ ಮಾಧ್ಯಮದವರ ಆಕ್ರೋಶ ವ್ಯಕ್ತವಾಯಿತು.

  ಅಕ್ಟೋಬರ್ 9 ರಂದು ಹಾಸನಾಂಬೆ ದೇವಾಲಯದ ಪವಿತ್ರ ಬಾಗಿಲು ತೆರೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಕ್ತರಲ್ಲಿ ಉತ್ಸಾಹ ನೆರೆದಿದ್ದು, ಸಕಲ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಆದರೆ ಈ ಬಾರಿ ಜಿಲ್ಲಾಡಳಿತವು ಮಾಧ್ಯಮದವರನ್ನು ಅಣಕಿಸಿದಂತ ನಡವಳಿಕೆ ತೋರಿದರೆಂಬ ಆರೋಪ ಕೇಳಿ ಬಂದಿದೆ. ಪತ್ರಿಕಾ ಹಾಗೂ ಟಿವಿ ಮಾಧ್ಯಮದ ಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ನೀಡದೆ, ಕೇವಲ ಸೋಶಿಯಲ್ ಮೀಡಿಯಾ ನಿರ್ವಾಹಕರಿಗೆ ಮಾತ್ರ ಆಹ್ವಾನ ನೀಡಿರುವುದು ಪತ್ರಿಕಾ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕ್ರಮವನ್ನು ಖಂಡಿಸಿ ಹಾಸನದ ಮಾಧ್ಯಮ ಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿ ಅಸಮಾಧಾನವನ್ನು ವ್ಯಕ್ತಪಡಿಸಿದ ಅವರು, ಹಾಸನಾಂಬೆ ಜಾತ್ರೆ ಹಾಸನದ ಗುರುತು ಮಾಧ್ಯಮದವರ ಸಹಕಾರದಿಂದಲೇ ದೇವಿಯ ಖ್ಯಾತಿ ವಿಶ್ವಮಟ್ಟಕ್ಕೆ ತಲುಪಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮವನ್ನು ಹೊರಗಿಡುವುದು ಅನ್ಯಾಯ ಎಂದು ದೂರಿದರು. ಮೌನ ಪ್ರತಿಭಟನೆಯ ಸಮಯದಲ್ಲಿ ಹಾಸನ ಪತ್ರಿಕಾ ಮತ್ತು ಟಿವಿ ಮಾಧ್ಯಮ ಸಂಘದ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಭಕ್ತರ ಹಿತದೃಷ್ಟಿಯಿಂದ ಹಾಗೂ ಮಾಹಿತಿ ಪಾರದರ್ಶಕತೆಗಾಗಿ ಎಲ್ಲ ಮಾಧ್ಯಮಗಳಿಗೂ ಸಮಾನ ಅವಕಾಶ ನೀಡುವಂತೆ ಆಗ್ರಹಿಸಿದರು.

ಮಾಧ್ಯಮದ ಪ್ರತಿಭಟನೆಯ ಬಳಿಕ ಜಿಲ್ಲಾಡಳಿತದ ಅಧಿಕಾರಿಗಳು ಈ ವಿಷಯವನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೂ, ಪತ್ರಿಕಾ ಮನನ ಮಾಧ್ಯಮ ವಲಯದಲ್ಲಿ ಈಗಾಗಲೇ ಅಸಮಾಧಾನದ ವಾತಾವರಣ ನಿರ್ಮಾಣವಾಗಿದೆ. ಏನಾದರೂ ಮಾಧ್ಯಮದವರನ್ನ ಕಡೆಗಣಿಸಿ ಮೇಲ್ನೋಟಕ್ಕೆ ತೇಪೆ ಹಾಕುವ ಕೆಲಸ ಮಾಡಿದರೇ ಮಾಧ್ಯಮದ ಎಲ್ಲಾರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ಮಾಡುವುದಾಗಿ ನಿರ್ಧರಿಸಕಾಗುವುದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್, ರವಿನಾಕಲಗೂಡು, ಮಂಜಣ್ಣ, ಜಿ. ಪ್ರಕಾಶ್, ಹರೀಶ್ ಹಾಗೂ ಮಾಧ್ಯಮ ಬಂದುಗಳು ಎಚ್ಚರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page