Monday, October 13, 2025

ಸತ್ಯ | ನ್ಯಾಯ |ಧರ್ಮ

ಹಾಸನ : ಆನ್ಲೈನ್ ವ್ಯವಹಾರ 1.50 ಕೋಟಿ ರೂ ವಂಚನೆ ವ್ಯಕ್ತಿ ಕಂಗಾಲು

ಹಾಸನ: ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಹಣ ಮಾಡಲು ಷೇರು ಮಾರುಕಟ್ಟೆಯೇ ಸೂಕ್ತವೆಂದು ಮೋಸದ ಆನ್‌ಲೈನ್‌ ಜಾಲಕ್ಕೆ ಸಿಲುಕಿದ ವ್ಯಕ್ತಿಯೊಬ್ಬರು ಬರೋಬ್ಬರಿ 1.50 ಕೋಟಿ ರೂ. ಪಂಗನಾಮ ಹಾಕಿಸಿಕೊಂಡಿದ್ದಾರೆ. ಅರಸೀಕೆರೆ ತಾಲ್ಲೂಕು ಜಾವಗಲ್‌ನ ವ್ಯಕ್ತಿ ಹಣ ಕಳೆದುಕೊಂಡವರು. ಕಳೆದ ಮೂರು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಅನುಭವ ಇರುವ ಅವರು ಅಲ್ಲಿನ ಎಲ್ಲಾ ಪ್ರಕ್ರಿಯೆಗಳನ್ನು ಅರಿತಿದ್ದರೂ ಮೋಸದ ಬಗ್ಗೆ ಅರಿವಿಗೆ ಬಾರದೆ ಇರುವುದು ಭಾರೀ ಬೆಲೆ ತೆರುವಂತೆ ಮಾಡಿದೆ.

ಆಗಸ್ಟ್‌ 20 ರಂದು ತಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಫೇಸ್‌‍ಬುಕ್‌ ಸ್ಕ್ರಾಲ್‌ ಮಾಡುತ್ತಿದ್ದಾಗ PMSL Smart Wealth Hub ಜಾಹಿರಾತು ಕಾಣಿಸಿದೆ. ಅದರ ಮೇಲೆ ಕ್ಲಿಕ್‌ ಮಾಡಿದ್ದು PMSL (Paytm Money) ಕಂಪನಿ ಮುಖಪುಟ ತೋರಿಸಿ ಅದರಲ್ಲಿ ಯಶಸ್ವಿನಿ ಜಿಂದಾಲ್‌ ಹೆಸರಿನಲ್ಲಿ ಮೂರು ಮೊಬೈಲ್‌ ನಂಬರ್‌ (9063764250, 8867177221 ಹಾಗು 8445150652) ಪ್ರತ್ಯಕ್ಷವಾಗಿದೆ. ಅದನ್ನು ನಂಬಿದ ಅವರು ಹಣ ಹೂಡಲು ಆಸಕ್ತಿಯಿದೆಯೆಂದು ಸಂದೇಶ ಕಳುಹಿಸಿದ್ದಾರೆ. ಆ ಬಳಿಕ trading ಮಾಡುವ ಸಲುವಾಗಿ paytm money QIB Account ತೆರೆಯಲು ಅಪ್ಲಿಕೇಶನ್‌ Registration Form ಅನ್ನು ಕಳುಹಿಸಿದ್ದರಿಂದ ಸಂಬಂಧಿಸಿದ ಮಾಹಿತಿಯನ್ನು ಭರ್ತಿಮಾಡಿ ಪುನಃ ಅವರಿಗೆ ಕಳುಹಿಸಲಾಗಿದೆ. ಅಪರಿಚಿತ ವ್ಯಕ್ತಿಯು ವಾಟ್ಸ್ ಆ್ಯಪ್   ಲಿಂಕ್‌ ಕಳುಹಿಸಿದ್ದು, ಅದನ್ನು ಕ್ಲಿಕ್‌ ಮಾಡಿದಾಗ Paytm-stockss.com website ಗೆ ತೋರಿಸಿದೆ. ಅಲ್ಲಿ KYC ನಮೂದಿಸಿ ಹೂಡಿಕೆ ಮಾಡಿದ ಹಣ ಹಾಗು ಲಾಭಾಂಶದ ವಿವರ ನೀಡುವುದಾಗಿ ತಿಳಿಸಿದೆ. ಅದಕ್ಕೆ ಸಮಿತಿಸಿದ ವ್ಯಕ್ತಿ ಕೆವೈಸಿ ಮಾಡಿದ್ದಾರೆ.

ಆ ಪ್ರಕ್ರಿಯೆ ಮುಗಿದ ಬಳಿಕ ಯಶಸ್ವಿನಿ ಜಿಂದಾಲ್‌ ಎಂಬುವವರು Paytm customer support ಮೊಬೈಲ್‌ ನಂಬರ್‌ 8886945952, 99311537420 ನೀಡಿ ಇವರಿಗೆ ಸಂಪರ್ಕಿಸಿದರೆ ಅವರು account number ಕೊಡುವುದಾಗಿ ತಿಳಿಸಿದ್ದಾರೆ. ಅದನ್ನು ನಂಬಿದ ವ್ಯಕ್ತಿ ಹಣ ಹೂಡಿಕೆ ಮಾಡಲು ಉತ್ಸುಕತೆ ತೋರಿದ್ದಾರೆ. ಕಡಿಮೆ ಬಂಡವಾಳ ಹಾಕಿ ಹೆಚ್ಚು ಪಡೆಯಬಹುದೆಂಬ ಮಾತಿಗೆ ಮರುಳಾದ ಅವರು Paytm customer support ನೀಡಿದ ಬ್ಯಾಂಕ್‌ ಖಾತೆಗೆ ಹಂತ ಹಂತವಾಗಿ 1,50,36,606 ರೂ. ವರ್ಗಾವಣೆ ಮಾಡಿದ್ದಾರೆ.

ಮರಳಿ ಬಾರದ ಹಣ:

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದೇನೆ ಶೀಘ್ರದಲ್ಲೇ ದುಪ್ಪಟ್ಟು ಹಣ ಗಳಿಸುತ್ತೇನೆಂದು ನಂಬಿದ್ದ ಅವರಿಗೆ ಹಲವು ದಿನ ಕಳೆದರೂ ಯಾವ ಪ್ರತಿಕ್ರಿಯೆ ಬಂದಿಲ್ಲ. ನಂತರ ದೂರವಾಣಿ ಕರೆ ಮಾಡಿ ನಿಮ ಕಮಿಷನ್‌ ಇಟ್ಟುಕೊಂಡು ಉಳಿದ ಹಣವನ್ನಾದರೂ ಜಮೆ ಮಾಡಿ ಎಂದು ಕೋರಿದ್ದಾರೆ.

ಅದಕ್ಕೆ ಸಕಾರಾತಕ ಪ್ರತಿಕ್ರಿಯೆ ಬಾರದೆ ಇದ್ದಾಗ ವಿಚಾರಿಸಿದಾಗ ತಾವು ಮೋಸ ಹೋಗಿದ್ದು ತಿಳಿದುಬಂದಿದೆ. ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page