Wednesday, October 22, 2025

ಸತ್ಯ | ನ್ಯಾಯ |ಧರ್ಮ

ಬೆಂಗಳೂರು ಪಿಜಿಯಲ್ಲಿ ವಿದ್ಯಾರ್ಥಿ ನಿಗೂಢ ಸಾ*ವು ಕಾರಣವಾಯ್ತಾ ತಿಗಣೆ ಔಷಧ ?

ಬೆಂಗಳೂರು : ಆಂಧ್ರದ ತಿರುಪತಿ ಮೂಲದ ವಿದ್ಯಾರ್ಥಿ (Student), ಬೆಂಗಳೂರಿನ (Bengaluru ) ಪಿಜಿಯಲ್ಲಿ (PG) ನೆಲೆಸಿದ್ದ ಪವನ್ ಎಂಬಾತ ನಿಗೂಢವಾಗಿ ಮೃತಪಟ್ಟಿದ್ದಾನೆ. ನಗರದ ಪಿಜಿಯೊಂದರಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದ್ದು, ಕೋಣೆಗೆ ತಿಗಣೆ ಔಷಧಿ (Bed bug medicine) ಸಿಂಪಡಿಸಲಾಗಿತ್ತು.ಇದರ ವಾಸನೆಯಿಂದ ಪವನ್​​ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನ ಹೆಚ್​​ಎಎಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಯುಡಿಆರ್ ಕೇಸ್ ದಾಖಲಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಈ ವಿದ್ಯಾರ್ಥಿ ಪವನ್​​ ವಾಸವಿದ್ದ ಪಿಜಿಯಲ್ಲಿ ತಿಗಣೆ ಔಷಧಿ ಸಿಂಪಡಣೆಯಾಗಿತ್ತು. ಆದ್ರೆ ಈ ಬಗ್ಗೆ ಮಾಹಿತಿ ಇಲ್ಲದೆ ಪವನ್ ಕೊಠಡಿಗೆ ತೆರಳಿದ್ದ. ಈ ವೇಳೆ ತಿಗಣೆ ಔಷಧದ ವಿಷಕಾರಿ ವಾಸನೆ ಉಸಿರಾಡಿದ ಕಾರಣ ಪವನ್​​ ಅಸ್ವಸ್ಥನಾಗಿ ಕುಸಿದುಬಿದ್ದು, ಮೃತಪಟ್ಟಿರಬಹುದು ಎನ್ನಲಾಗಿದೆ. ಈ ವೇಳೆ ಆತನನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಾರ್ಗ ಮಧ್ಯೆಯ್ಯೇ ಪವನ್ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಅಶ್ವಥ ನಗರದ ಬಿಎಸ್​ಆರ್​​ ಪಿಜಿಯಲ್ಲಿ ಈ ಘಟನೆ ಸಂಭವಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಲಭ್ಯವಾದ ಬಳಿಕ ಅಸಲಿ ಕಾರಣ ತಿಳಿಯಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page