Wednesday, October 22, 2025

ಸತ್ಯ | ನ್ಯಾಯ |ಧರ್ಮ

ಗುಮ್ಮಡಿ ನರಸಯ್ಯ ಬಯೋಪಿಕ್‌ನಲ್ಲಿ ಶಿವಣ್ಣ – ಫಸ್ಟ್‌ ಲುಕ್‌ ಬಿಡುಗಡೆ

ಬೆಂಗಳೂರು: ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ (Century story) ಶಿವರಾಜ್ ಕುಮಾರ್ (Shivaraj kumar) ಈಗಾಗಲೇ ನೂರಾರು ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈ ಪೈಕಿ ಹಲವು ನಿಜ ಜೀವನದ ಪಾತ್ರಗಳ ಕತೆಗಳನ್ನು (Biopic) ತೆರೆಗೆ ತಂದಿದ್ದಾರೆ. ಇದೀಗ ಅದೇ ರೀತಿಯ ಮತ್ತೊಂದು ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದು ಸಿನಿಮಾ ಮೇಲಿನ ಕುತೂಹಲ ಹೆಚ್ಚಾಗಿದೆ.

ಹೌದು, ತೆಲುಗು ನೆಲದ ಪ್ರಬುದ್ಧ ರಾಜಕಾರಣಿ ಗುಮ್ಮಡಿ ನರಸಯ್ಯ ಅವರ ಬಯೋಪಿಕ್ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ನಟಿಸುತ್ತಿದ್ದು ಶಿವಣ್ಣನ ಅಭಿನಯದ ಮತ್ತೊಂದು ಮಜಲು ಕಣ್ತುಂಬಿಕೊಳ್ಳಲು ಕಾತುರರಾಗಿದ್ದೇವೆ ಎಂದು ಪೋಸ್ಟರ್ ಹಂಚಿಕೊಂಡಿರುವ ಶಿವರಾಜ್ ಕುಮಾರ್ ಯುವಸೇನೆ ಸಂತಸ ವ್ಯಕ್ತಪಡಿಸಿದೆ. ಗುಮ್ಮಡಿ ನರಸಯ್ಯ ಅವರು ರಾಜಕಾರಣಿಯಾಗಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನ್ಯೂ ಡೆಮಾಕ್ರಸಿ (CPI) ಪ್ರಮುಖ ಸದಸ್ಯರಾಗಿದ್ದರು. ಅವರು 1983–1994 ಮತ್ತು 1999–2009ರ ನಡುವೆ ಯೆಲ್ಲಾಂಡುವಿನ ತೆಲಂಗಾಣ ವಿಧಾನಸಭೆಯ ಸದಸ್ಯರಾಗಿದ್ದರು, ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಜನಪರ ವ್ಯಕ್ತಿಯಾಗಿ ಖ್ಯಾತಿಯನ್ನು ಗಳಿಸಿದ್ದಾರೆ. ಇವರ ಬಯೋಪಿಕ್ ಸಿನಿಮಾದಲ್ಲಿ ಶಿವಣ್ಣ ಬಣ್ಣ ಹಚ್ಚಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page