Friday, November 7, 2025

ಸತ್ಯ | ನ್ಯಾಯ |ಧರ್ಮ

ಮನೆಗೆ ರಸ್ತೆ ಕಲ್ಪಿಸಲು ಆಗ್ರಹಿಸಿ ಸಣ್ಣ ಮಕ್ಕಳೊಂದಿಗೆ ಮನವಿ – ಎಡಿಸಿ ಸ್ಪಂದನೆ

ಹಾಸನ : ತಮ್ಮ ಮನೆಗೆ ಓಡಾಡಲು ರಸ್ತೆ ಸಮಸ್ಯೆ ಎದುರಾಗಿ ಮಕ್ಕಳು ಶಾಲೆಗೆ ತೆರಳಲು ಕಷ್ಟವಾಗಿದೆ. ಕೂಡಲೇ ನಮಗೆ ರಸ್ತೆ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಆಲೂರು ತಾಲೂಕು ಕೆ ಎಸ್ ಕೋಟೆ ಹೋಬಳಿ ಹಬ್ಬನ ಗ್ರಾಮದ ಮಂಜುನಾಥ್ ಅನು ದಂಪತಿ ತಮ್ಮ ಮಕ್ಕಳೊಂದಿಗೆ ಆಗಮಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ಹಬ್ಬನ ಗ್ರಾಮದ ತಮ್ಮ ಮನೆಗೆ ತೆರಳಲು ಅಕ್ಕಪಕ್ಕದ ಮನೆಯವರು ಅಡ್ಡಿ ಮಾಡಿ ಸಂಪೂರ್ಣ ರಸ್ತೆಯಲ್ಲಿ ಒತ್ತುವರಿ ಮಾಡಿ ನಾವು ನಮ್ಮ ಮನೆ ಸಂಪರ್ಕಿಸಲು ಆಗದಂತಹ ಪರಿಸ್ಥಿತಿ ಎದುರಾಗಿದೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಗ್ರಾಮದ ೨೦೫ನೇ ಸರ್ವೇ ನಂಬರ್ ನಲ್ಲಿ ತಾನು ಸೇರಿದಂತೆ ೨೫ ಜನರಿಗೆ ಸರ್ಕಾರದಿಂದ ನಿವೇಶನ ನೀಡಲಾಗಿತ್ತು. ಇದೀಗ ಗ್ರಾಮದ ಕೆಲ ಪ್ರಭಾವಿಗಳು ನಮಗೆ ಸೇರಿದ ಜಾಗವನ್ನು ಜಾಗವನ್ನು ಒತ್ತುವರಿ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆ ಅಲ್ಲದೆ ಪ್ರಶ್ನೆ ಮಾಡಿದರೆ ನಮ್ಮ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದರು ನಮ್ಮ ಮೇಲಿನ ದೌರ್ಜನ್ಯ ನಿಂತಿಲ್ಲ ಎಂದರು.

ನಾವು ವಾಸವಿರುವ ಜಾಗಕ್ಕೆ ಈಗಾಗಲೇ ಹಕ್ಕು ಪತ್ರ ಪಡೆದು ಕಾನೂನು ಬದ್ಧವಾಗಿ ಮನೆ ನಿರ್ಮಿಸಿಕೊಂಡ ವಾಸ ಮಾಡುತ್ತಿದ್ದೇವೆ ಆದರೆ ಈ ಗಲಾಟೆ ಬಳಿಕ ಪೊಲೀಸ್ ಇಲಾಖೆಗೆ ದೂರು ನೀಡಿದಾಗ ತಮ್ಮ ಮನೆ ಬಳಿ ಇರುವ ಸಿಸಿ ಕ್ಯಾಮೆರಾ ವಿಡಿಯೋ ತುಣುಕುಗಳನ್ನು ವಶಕ್ಕೆ ಪಡೆದು ಗಲಾಟೆ ನಡೆದಿರುವ ವಿಡಿಯೋ ಡಿಲೀಟ್ ಮಾಡಿ ನಮ್ಮದೇ ತಪ್ಪು ಎಂಬಂತೆ ಬಿಂಬಿಸುತ್ತಿದ್ದಾರೆ ಕೂಡಲೇ ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು. ಕಿಲಪಡಿ ರೌಡಿಗಳ ಜೊತೆಗೂಡಿ ಅಕ್ಕಪಕ್ಕದ ಮನೆಯವರು ರಸ್ತೆಗೆ ಬೇಲಿ ಹಾಕಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದು ಇದರಿಂದ ಮಕ್ಕಳು ಶಾಲೆಗೆ ತೆರಳಲು ಕಷ್ಟವಾಗಿದೆ ಜೊತೆಗೆ ಕೂಲಿ ಕೆಲಸದಿಂದ ಜೀವನ ಸಾಗಿಸುತ್ತಿರುವ ನಮ್ಮ ಕುಟುಂಬ ಕೆಲಸಕ್ಕೂ ಹೋಗಲು ಕಷ್ಟವಾಗಿದೆ ದಯಮಾಡಿ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಕೋರಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page