Friday, November 7, 2025

ಸತ್ಯ | ನ್ಯಾಯ |ಧರ್ಮ

ಹಾಸನದಲ್ಲಿ ಇದೆ ನ. 9ರಂದು ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆ

ಕಟ್ಟೆಚ್ಚರದ ವ್ಯವಸ್ಥೆಯಲ್ಲಿ ಮತದಾನ, ಸಿಸಿಟಿವಿ ನಿಗಾ, ಭದ್ರತೆ: ಚುನಾವಣಾಧಿಕಾರಿ ರಾಜೇಶ್

ಹಾಸನ : ಪ್ರತಿವರ್ಷದಂತೆ ಈ ವರ್ಷವೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನಡೆಯಲಿದ್ದು, ಈ ಬಾರಿ ಯಾವುದೇ ಅಕ್ರಮ ಮತದಾನ ನಡೆಯದಂತೆ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರಾಜೇಶ್ ಮತ್ತು ಸಹಾಯಕ ಚುನಾವಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.

ಅವರು ಚುನಾವಣಾ ಕಾರ್ಯವಿಧಾನದ ಕುರಿತು ಗುರುವಾರದಂದು ಅಭ್ಯರ್ಥಿಗಳಿಗೆ ತಿಳುವಳಿಕೆ ನೀಡುತ್ತಾ, ನವೆಂಬರ್ ೯ರಂದು (ಭಾನುವಾರ) ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಮತದಾನ ನಡೆಯಲಿದೆ ಎಂದು ಹೇಳಿದರು. ಮೂಲತಃ ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನಿಗದಿಯಾಗಿದ್ದ ಮತದಾನ ವೇಳೆಯನ್ನು, ಅಭ್ಯರ್ಥಿಗಳ ಮನವಿ ಮೇರೆಗೆ ಒಂದು ಗಂಟೆ ಮುಂಚೆ ಆರಂಭಿಸಲು ತೀರ್ಮಾನಿಸಲಾಗಿದೆ. ಮತದಾರರು ಮತಗಟ್ಟೆ ಪ್ರದೇಶದೊಳಗೆ ಮೊಬೈಲ್, ಪೆನ್, ವಾಚ್ ಅಥವಾ ಕೂಲಿಂಗ್ ಕನ್ನಡಕ ತರಲು ಅವಕಾಶವಿರುವುದಿಲ್ಲ. ಮತದಾನ ಪ್ರಕ್ರಿಯೆ ವೇಳೆ ನೇರವಾಗಿ ಸೀಲ್ ಮಾಡಲಾದ ಮತಪೆಟ್ಟಿಗೆಯಲ್ಲಿ ಮತಪತ್ರ ಹಾಕಬೇಕು; ಜೇಬಿಗೆ ಕೈ ಹಾಕುವುದು ಅಥವಾ ಯಾವುದನ್ನಾದರೂ ತೆಗೆಯಲು ಪ್ರಯತ್ನಿಸಿದರೆ ಮತದಾನ ಹಕ್ಕು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಎಚ್ಚರಿಸಿದರು. ಮತದಾನ ನಡೆಯುವ ವೇಳೆ ನಿಯಮಗಳಿದ್ದು, ಚುನಾವಣೆ ನಡೆಯುವ ಸ್ಥಳದಿಂದ ನೂರು ಮೀಟರ್ ಅಂತರದಲ್ಲಿ ಅಭ್ಯರ್ಥಿಗಳು ಇತರರು ಇರಬೇಕು. ಅಲ್ಲಿಯೇ ನಿಂತು ಪ್ರಚಾರ ಮಾಡಬಹುದು. ಮತದಾನವು ಜಿಲ್ಲಾ ಪತ್ರಕರ್ತರ ಸಂಘದ ಮೊದಲ ಮಹಡಿಯಲ್ಲಿ ನಡೆಯಲಿದ್ದು, ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಒಟ್ಟು ೨೮೯ ಮತದಾರರು ಭಾಗವಹಿಸಲಿದ್ದಾರೆ. ಮತದಾನ ಮುಗಿದ ತಕ್ಷಣವೇ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಅದೇ ದಿನ ಪ್ರಕಟಿಸಲಾಗುವುದು. ಚುನಾವಣೆ ನಡೆಯುವ ಸ್ಥಳದ ಒಳಗೂ ಹೊರಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ಅಥವಾ ದುರುಪಯೋಗ ಸಂಭವಿಸದಂತೆ ಸಂಪೂರ್ಣ ನಿಗಾವ್ಯವಸ್ಥೆ ಜಾರಿಯಲ್ಲಿರುತ್ತದೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page