Monday, November 10, 2025

ಸತ್ಯ | ನ್ಯಾಯ |ಧರ್ಮ

ಕರ್ನಾಟಕದ ಕೈಗಾ ವಿದ್ಯುತ್ ಸ್ಥಾವರದಲ್ಲಿ ಗೇಟ್ ಕುಸಿದು ಸಿಐಎಸ್‌ಎಫ್ ಸಿಬ್ಬಂದಿ ಸಾವು

ಕಾರವಾರ: ಶನಿವಾರ ರಾತ್ರಿ ಕೈಗಾ ಅಣು ವಿದ್ಯುತ್ ಸ್ಥಾವರದ ಅಣು ತ್ಯಾಜ್ಯ ವಿಲೇವಾರಿ ಘಟಕದ (nuclear waste disposal unit) ಪ್ರವೇಶದ್ವಾರದಲ್ಲಿದ್ದ ಭಾರೀ ಗೇಟ್ ಕುಸಿದು ಬಿದ್ದ ಪರಿಣಾಮ, 48 ವರ್ಷದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಮುಖ್ಯ ಪೇದೆ (head constable) ಸಾವಿಗೀಡಾಗಿದ್ದಾರೆ.

ಈ ಅನಿರೀಕ್ಷಿತ ಅಪಘಾತವು ರಾತ್ರಿ ಪಾಳಿಯಲ್ಲಿ ಸಂಭವಿಸಿದ್ದು, ಮೃತ ಸಿಬ್ಬಂದಿ ಶೇಖರ್ ಭೀಮರಾವ್ ಜಗದಾಳೆ ಅವರು ಸ್ಥಳದಲ್ಲಿ ಕಾವಲು ಕಾಯುತ್ತಿದ್ದರು. ಜಗದಾಳೆ ಅವರು ಮೂಲತಃ ಮಹಾರಾಷ್ಟ್ರದ ಮಾಹಿಮಂಗಡದವರು.

ಚೀರಾಟವನ್ನು ಕೇಳಿದ ಜಗದಾಳೆಯವರ ಸಹೋದ್ಯೋಗಿಗಳು ತಕ್ಷಣ ನೆರವಿಗೆ ಧಾವಿಸಿದರು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಮುಖ್ಯ ಪೇದೆಗೆ ಹತ್ತಿರದ ಕ್ಲಿನಿಕ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಕೆಜಿಎಸ್ ಆಸ್ಪತ್ರೆಗೆ ಸಾಗಿಸುವ ಮೊದಲು ಕೊನೆಯುಸಿರೆಳೆದರು ಎಂದು ವಿದ್ಯುತ್ ಸ್ಥಾವರದ ಅಧಿಕಾರಿಗಳನ್ನು ಉಲ್ಲೇಖಿಸಿ ಮಲ್ಲಾಪುರ ಪೊಲೀಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page