Tuesday, November 11, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳ ಪ್ರಕರಣದಲ್ಲಿ ನಾಗಲಕ್ಷ್ಮಿ ಚೌಧರಿ ಎಸ್‌ಐಟಿಗೆ ಪತ್ರ ?

ಬೀದರ್ : ಧರ್ಮಸ್ಥಳ ಪ್ರಕರಣ (Dharmasthala case) ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು, ಅಲ್ಲದೆ ಸಾಕಷ್ಟು ತಿರುವು ಪಡೆದ ಧರ್ಮಸ್ಥಳ ಪ್ರಕರಣದಲ್ಲಿ ಈಗ ದೊಡ್ಡ ಬೆಳವಣಿಗೆ ನಡೆದಿದೆ. ಅಂದಹಾಗೆ ಧರ್ಮಸ್ಥಳದಲ್ಲಿ ಕಾಣೆಯಾದ ಮಹಿಳೆಯರ ಕೊಲೆಗೆ ಕಾರಣರಾದವರ ಪತ್ತೆಗೆ ಸಮಗ್ರ ತನಿಖೆ ನಡೆಸಿ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Nagalakshmi Choudhary) ಎಸ್‌ಐಟಿಗೆ (SIT) ಪತ್ರ ಬರೆದಿದ್ದಾರೆ. ಈ ವಿಚಾರ ಸಂಚಲನಕ್ಕೆ ಕಾರಣವಾಗಿದೆ.

ಹಲವು ವರ್ಷಗಳಿಂದ ಧರ್ಮಸ್ಥಳದಲ್ಲಿ ಕಾಣೆಯಾದ ಮಹಿಳೆಯರ ಕೊಲೆಗೆ ಕಾರಣರಾದವರ ಪತ್ತೆಗೆ ಸಮಗ್ರ ತನಿಖೆ ನಡೆಸುವ ಕುರಿತು ಪತ್ರ ಬರೆದಿರುವ ಬಗ್ಗೆ ಖುದ್ದು ನಾಗಲಕ್ಷ್ಮಿ ಚೌಧರಿ ಅವರೇ ಮಾತನಾಡಿದ್ದಾರೆ. ಎಸ್‌ಐಟಿ ಸರಿಯಾಗಿ ತನಿಖೆ ಮಾಡಿಲ್ಲ ಎಂದು ನಾನು ಪತ್ರ ಬರೆದಿಲ್ಲ, ಎಸ್‌ಐಟಿ ತನಿಖೆ ಬುರುಡೆ ಚಿನಯ್ಯಗೆ ಮಾತ್ರ ಸೀಮಿತವಾಗಬಾರದು. ಧರ್ಮಸ್ಥಳದಲ್ಲಿ ಸತ್ತವರ ಮತ್ತು ಅಸಹಜವಾಗಿ ಸತ್ತ ಮಹಿಳೆಯರ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ತನಿಖೆ ನಡೆಸಿ ಮಹಿಳಾ ಆಯೋಗಕ್ಕೆ ವರದಿ ನೀಡುವಂತೆ ಎಸ್‌ಐಟಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ. ಗಾಗಲೇ ಧರ್ಮಸ್ಥಳ ಪ್ರಕರಣ ರಾಷ್ಟ್ರಮಟ್ಟದಲ್ಲಿ ದೊಡ್ಡ ಸದ್ದು ಮಾಡಿತ್ತು, ಆದರೆ ಆ ನಂತರ ಈ ಪ್ರಕರಣ ತಣ್ಣಗಾಗಿತ್ತು. ಆದರೆ ಇದೀಗ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಎಸ್‌ಐಟಿಗೆ ಪತ್ರ ಬರೆದಿರುವುದು ಮತ್ತಷ್ಟು ಗಮನ ಸೆಳೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page