Wednesday, November 12, 2025

ಸತ್ಯ | ನ್ಯಾಯ |ಧರ್ಮ

ವಿಚಾರಣೆಗೆ ತೆರಳಿದ್ದ ಪೊಲೀಸರಿಗೇ ಬಿತ್ತು ಗೂಸಾ; ಬಟ್ಟೆ ಹರಿದು ಹಲ್ಲೆ

ರಾಯಚೂರಿನ ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾದಲ್ಲಿ ಎರಡು ಕುಟುಂಬಗಳ ಜಗಳದಲ್ಲಿ ವಿಚಾರಣೆಗೆ ತೆರಳಿದ್ದ ಎಎಸ್ಐ ಅವರನ್ನು ಕಂಬಕ್ಕೆ ಕಟ್ಟಿ ಹಾಕಿದ ಘಟನೆ ನಡೆದಿದೆ.

ಮಟ್ಟೂರು ತಾಂಡಾದ ದಂಪತಿ ಆದಿ ರಾಮಪ್ಪ ಕೃಷ್ಣ ಹಾಗೂ ಪತ್ನಿ ಸಕ್ಕುಬಾಯಿ ಅವರು ಒಂದೇ ತಾಂಡಾದ ಎರಡು ಕುಟುಂಬಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ವಿಚಾರಣೆಗೆ ತೆರಳಿದ್ದ ಎಎಸ್‌ಐ ವೆಂಕಟಪ್ಪ ನಾಯಕ್ ಮತ್ತು ಅವರ ತಂಡದ ಮೇಲೆ ದೌರ್ಜನ್ಯ ನಡೆಸಿದ್ದಾರೆ.

ದಂಪತಿಯು ಎಎಸ್‌ಐನ ಮೊಬೈಲ್ ಕಸಿದು ಥಳಿಸಿ, ಬಟ್ಟೆ ಹರಿದು, ಕಂಬಕ್ಕೆ ಕಟ್ಟಿಹಾಕಿ ಹಿಂಸಾತ್ಮಕವಾಗಿ ವರ್ತಿಸಿದ್ದಾರೆ. ನಂತರ, ದಂಪತಿಯು ಪಿಎಸ್‌ಐ ವೆಂಕಟೇಶ್ ಮೇಲೆಯೂ ಹಲ್ಲೆ ನಡೆಸಿ, ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಆರೋಪಿಗಳು ಬಂಧನಗೊಂಡಿದ್ದಾರೆ. ಘಟನೆಯ ಹಿಂದೆ ಮಲ್ಲಪ್ಪ ಎಂಬ ವ್ಯಕ್ತಿ ರಾಮಪ್ಪ ದಂಪತಿಯ ವಿರುದ್ಧ ದೂರು ನೀಡಿರುವುದು ಕಾರಣವಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಗಂಭೀರವಾಗಿ ತನಿಖೆ ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page