Monday, November 17, 2025

ಸತ್ಯ | ನ್ಯಾಯ |ಧರ್ಮ

ಮೆಕ್ಸಿಕೋದಲ್ಲಿ ಜೆನ್‌ ಝೀ ಪ್ರತಿಭಟನೆ: ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತಿರುಗಿಬಿದ್ದ ದೇಶದ ಯುವಜನತೆ

ಜನರೇಷನ್ ಝೀ (Gen Z) ಪ್ರತಿಭಟನೆಗಳು ಮೆಕ್ಸಿಕೋಕ್ಕೂ ವ್ಯಾಪಿಸಿವೆ. ದೇಶದಲ್ಲಿನ ಹಿಂಸಾಚಾರ ಮತ್ತು ಭ್ರಷ್ಟಾಚಾರದಿಂದ ಬೇಸತ್ತ ಸಾವಿರಾರು ಯುವಕರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.

ಶನಿವಾರ ಮೆಕ್ಸಿಕೋದ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದವು. “ನಮಗೆ ಇನ್ನಷ್ಟು ಭದ್ರತೆ ಬೇಕು” ಎಂದು ಈ ಸಂದರ್ಭದಲ್ಲಿ 29 ವರ್ಷದ ವ್ಯಾಪಾರ ಸಲಹೆಗಾರರಾದ ಆಂಡ್ರೆಸ್ ಮಾಸ್ಸಾ ಮಾಧ್ಯಮಗಳೊಂದಿಗೆ ಹೇಳಿದರು. ದೇಶದಲ್ಲಿ ಜನಪ್ರಿಯರಾಗಿದ್ದ ಉರುಯಾಪನ್ ಮೇಯರ್ ಕಾರ್ಲೋಸ್ ಮಾಂಜೋ ಅವರು ಇತ್ತೀಚೆಗೆ ಹತ್ಯೆಗೀಡಾದ ಬಗ್ಗೆ ಯುವ ಪೀಳಿಗೆ ಆತಂಕ ವ್ಯಕ್ತಪಡಿಸಿದೆ.

ಮೆಕ್ಸಿಕೋ ಸಿಟಿಯಲ್ಲಿ ನಡೆದ ರ್ಯಾಲಿಯಲ್ಲಿ, ಕೆಲವು ಪ್ರತಿಭಟನಾಕಾರರು ಅಪರಾಧ ಮತ್ತು ಹಿಂಸಾಚಾರವನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. “ಕಾರ್ಲೋಸ್ ಸತ್ತಿಲ್ಲ, ಸರ್ಕಾರವೇ ಆತನನ್ನು ಕೊಂದಿದೆ” ಎಂದು ಅವರು ಘೋಷಣೆಗಳನ್ನು ಕೂಗಿದರು.

ಈ ಹತ್ಯೆಯನ್ನು ವಿರೋಧಿಸಿ ಅಧ್ಯಕ್ಷೆ ಕ್ಲಾಡಿಯಾ ಶೀನ್‌ಬೌಮ್ ಅವರು ವಾಸಿಸುವ ನ್ಯಾಷನಲ್ ಪ್ಯಾಲೇಸ್ ಅನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ಪೊಲೀಸರು ಅವರನ್ನು ತಡೆದರು. ಪ್ರತಿಭಟನಾಕಾರರ ಹಿಂದೆ ಅತಿವಾದಿ ರಾಜಕೀಯ ಪಕ್ಷಗಳು ಇವೆ ಎಂದು ಕ್ಲಾಡಿಯಾ ಆರೋಪಿಸಿದ್ದಾರೆ.

ಯುವ ಪೀಳಿಗೆಯು ದೇಶದ ಭದ್ರತೆ ಮತ್ತು ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುತ್ತಿರುವುದು ಪ್ರಜಾಪ್ರಭುತ್ವದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಪ್ರತಿಭಟನೆಗಳು ಮೆಕ್ಸಿಕೋ ಸರ್ಕಾರದ ಮೇಲೆ ಯಾವ ರೀತಿಯ ಒತ್ತಡವನ್ನು ತರಬಹುದು ಎನ್ನುವುದನ್ನು ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page