Wednesday, November 19, 2025

ಸತ್ಯ | ನ್ಯಾಯ |ಧರ್ಮ

ಕುಖ್ಯಾತ ಗ್ಯಾಂಗ್ಸ್‌ಟರ್ ಅನ್ಮೋಲ್ ಬಿಷ್ಣೊಯ್ ಅಮೇರಿಕಾದಿಂದ ಗಡಿಪಾರು; ದೆಹಲಿಯಲ್ಲಿ ಬಂಧನ

ಅಮೆರಿಕದಿಂದ ಗಡಿಪಾರುಗೊಂಡಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಅನ್ಮೋಲ್ ಬಿಷ್ಣೋಯ್ ನನ್ನು ನವೆಂಬರ್ 19, 2025 ರಂದು ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮ.ೆರಿಕದಿಂದ ಗಡಿಪಾರಾದ ಭಾರತಕ್ಕೆ ಕರೆತರಲಾಯಿತು. ನಂತರ ಎನ್ಐಎ ಅಧಿಕಾರಿಗಳು ಅವರನ್ನು ತಕ್ಷಣ ವಶ ಮಾಡಿ ನೇರವಾಗಿ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಕರೆದೊಯ್ದರು.

ಅನ್ಮೋಲ್ ಬಿಷ್ಣೋಯ್ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಕಿರಿಯ ಸಹೋದರನಾಗಿದ್ದು, ಮಹಾರಾಷ್ಟ್ರದ ಮಾಜಿಮಂತ್ರಿ ಬಾಬಾ ಸಿದ್ದಿಕ್ ಹತ್ಯೆ, ನಟ ಸಲ್ಮಾನ್ ಖಾನ್ ನಿವಾಸದ ಹೊರಗಿನ ಗುಂಡಿನ ದಾಳಿ ಮತ್ತು ಪಂಜಾಬಿನ ಪಾಪ್ಯುಲರ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ 18 ಗಂಭೀರ ಅಪರಾಧಗಳಲ್ಲಿ ಸಹ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಆತನನ್ನು ಅಮೆರಿಕಕ್ಕೆ 2024 ರಲ್ಲಿ ಅಕ್ರಮವಾಗಿ ಪ್ರವೇಶಿಸಿದ್ದು, ಪೊಲೀಸರು ಬಂಧಿಸಿದ್ದು, ನಂತರ ಭಾರತಕ್ಕೆ ಗಡಿಪಾರು ಮಾಡಲು ಆರಂಭಿಕ ಕ್ರಮ ನಡೆದಿತ್ತು. ಅಮೆರಿಕ-ಭಾರತ ಸರ್ಕಾರಗಳ ಸಹಯೋಗದಡಿ, 200ಕ್ಕೂ ಅಧಿಕ ಭಾರತೀಯ ಅಪರಾಧಿಗಳನ್ನೊಳಗೊಂಡ ಮಹತ್ವದ ಗಡಿಪಾರು ಕಾರ್ಯಾಚರಣೆ ನಡೆಸಲಾಗಿದೆ.

ಅನ್ಮೋಲ್ ಬಿಷ್ಣೋಯ್ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೆ ನೇರ ಸಂಪರ್ಕ ಹೊಂದಿದ್ದು, ಲಾರನ್ಸ್ ಬಂಧನದಲ್ಲಿದ್ದರೂ ಗ್ಯಾಂಗ್ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದುದಾಗಿ ಗುಪ್ತಚರ ಮೂಲಗಳು ತಿಳಿಸಿದ್ದಾರೆ. ಅನ್ಮೋಲ್ ಅವರ ಬಂಧನದಿಂದ ಗ್ಯಾಂಗ್ಸಟರ್ ಚಟುವಟಿಕೆಗಳಲ್ಲಿ ದೊಡ್ಡ ಹೊಡೆತ ಬರುವುದು ಎಂಬ ನಿರೀಕ್ಷೆ ಇದೆ.

ಈ ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (INA) ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದರು ಮತ್ತು ಅನ್ಮೋಲ್ ಬಿಷ್ಣೋಯ್ ಬಂಧನವು ಅಪರಾಧ ಜಾಲವನ್ನು ಕಂಡು ಹಿದಿದು ಮುರಿಯುವ ಪ್ರಮುಖ ಹಾದಿಯಾಗಲಿದೆ ಎಂದು ತಿಳಿಸಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಭದ್ರತಾ ಕ್ರಮಗಳ ಹೆಚ್ಚಿನ ಪ್ರಮಾಣದಲ್ಲಿ ಜಾರಿ ಮಾಡಲಾಗಿದ್ದು, ಅನ್ಮೋಲ್ ಬಿಷ್ಣೋಯ್ ಭಾರತಕ್ಕೆ ಗಡಿಪಾರು ಮಾಡಿರುವುದು ದೇಶಾಂತರ ಅಪರಾಧಗಳ ವಿರುದ್ಧ ಗಟ್ಟಿಯಾದ ಹೋರಾಟದ ಸಂಕೇತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page