Thursday, November 20, 2025

ಸತ್ಯ | ನ್ಯಾಯ |ಧರ್ಮ

ಡಿಪಿಡಿಪಿ ಕಾಯ್ದೆಯಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಪಾಯ: ಎಡಿಟರ್ಸ್ ಗಿಲ್ಡ್ ಆಕ್ಷೇಪ

ದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿದ ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ (DPDP) ನಿಯಮಗಳು, 2025 ರ ಅಧಿಸೂಚನೆಯ ವಿರುದ್ಧ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (EGI) ಮತ್ತು ಡಿಜಿಪಬ್ (DGIPub) (ಡಿಜಿಟಲ್ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳ ಸಂಘ) ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಈ ಹೊಸ ನಿಯಮಗಳು ಸುದ್ದಿ ಸಂಗ್ರಹಣೆಗೆ ಅಡ್ಡಿಯಾಗುತ್ತವೆ, ಮಾಹಿತಿ ಹಕ್ಕು ಕಾಯಿದೆಯನ್ನು (RTI) ದುರ್ಬಲಗೊಳಿಸುತ್ತವೆ ಮತ್ತು ಪತ್ರಕರ್ತರ ಮೇಲೆ ಅಂತ್ಯವಿಲ್ಲದ ಹೊರೆಯನ್ನು ಹೇರುತ್ತವೆ ಎಂದು ಈ ಎರಡೂ ಸಂಘಟನೆಗಳು ಪ್ರತ್ಯೇಕ ಹೇಳಿಕೆಗಳಲ್ಲಿ ಆಕ್ರೋಶ ವ್ಯಕ್ತಪಡಿಸಿವೆ. ಈ ನಿಯಮಗಳು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಉತ್ತರ ಸಿಗದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ ಎಂದು ಇಜಿಐ ಬುಧವಾರದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪತ್ರಕರ್ತರ ಕಾರ್ಯಗಳು ಡಿಪಿಡಿಪಿ ಕಾಯಿದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮಾಧ್ಯಮ ಸಂಸ್ಥೆಗಳಿಗೆ ಭರವಸೆ ನೀಡಿದ್ದರೂ, ನಂತರ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಗಿಲ್ಡ್ ಹೇಳಿದೆ. ಸ್ಪಷ್ಟ ವಿನಾಯಿತಿಗಳು ಮತ್ತು ನಿರ್ದಿಷ್ಟ ಮಾರ್ಗದರ್ಶನ ದೊರೆಯುವವರೆಗೆ ಪತ್ರಕರ್ತರ ಚಟುವಟಿಕೆಗಳಲ್ಲಿ ಗೊಂದಲ (ambiguity) ಮುಂದುವರಿಯುತ್ತದೆ ಎಂದು ಗಿಲ್ಡ್ ತಿಳಿಸಿದೆ.

ಹೊಸ ನಿಯಮಗಳಿಂದಾಗಿ ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ (accountable journalism) ಅಡ್ಡಿಯಾಗುವ ಅಪಾಯವಿದೆ ಎಂದು ಎರಡೂ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಸಂವಿಧಾನಾತ್ಮಕವಾಗಿ ನೀಡಲಾದ ವಾಕ್ ಸ್ವಾತಂತ್ರ್ಯದ ಹಕ್ಕು ಮತ್ತು ಜನರಿಗೆ ಮಾಹಿತಿ ಪಡೆಯುವ ಹಕ್ಕನ್ನು ಈ ನಿಯಮಗಳೊಂದಿಗೆ ಸಮತೋಲನಗೊಳಿಸಬೇಕಿದೆ ಎಂದು ಗಿಲ್ಡ್ ಸಲಹೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page