Thursday, November 20, 2025

ಸತ್ಯ | ನ್ಯಾಯ |ಧರ್ಮ

ಇಂದಿರಾ ಗಾಂಧಿ ಹೆಸರಿನ ಹೊಸ “ಇಂದಿರಾ ಆಹಾರ ಕಿಟ್” ಯೋಜನೆ ಹೊಸ ವರ್ಷದಿಂದ ಜಾರಿಗೆ

ರಾಜ್ಯ ಸರ್ಕಾರ ಮುಂದಿನ ಜನವರಿ ಅಥವಾ ಫೆಬ್ರವರಿಯ ಹೊತ್ತಿಗೆ ‘ಗರೀಬ್ ಕಲ್ಯಾಣ್’ ಯೋಜನೆಯಡಿ ಹೊಸ “ಇಂದಿರಾ ಗಾಂಧಿ ಆಹಾರ ಕಿಟ್” ವಿತರಣೆ ಪ್ರಾರಂಭಿಸಲು ತೀರ್ಮಾನಿಸಿದೆ ಎಂದು ಸಚಿವ ಮುನಿಯಪ್ಪ ಮಾಧ್ಯಮಗಳಿಗೆ ತಿಳಿಸಿದರು.

ಈ ಕಿಟ್‌ನಲ್ಲಿ ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಸೇರಿರಲಿದ್ದು, ಫಲಾನುಭವಿಗಳ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಮೂರು ವಿಭಾಗಗಳಲ್ಲಿ ವಿತರಣೆ ನಡೆಯಲಿದೆ.
* ಒಬ್ಬರು ಅಥವಾ ಇಬ್ಬರು ಸದಸ್ಯರಿದ್ದರೆ: 750 ಗ್ರಾಂ ತೊಗರಿ ಬೇಳೆ, ಅರ್ಧ ಲೀಟರ್ ಅಡುಗೆ ಎಣ್ಣೆ, ತಲಾ 500 ಗ್ರಾಂ ಸಕ್ಕರೆ ಮತ್ತು ಉಪ್ಪು.
* ಮೂವರು ಅಥವಾ ನಾಲ್ವರು ಸದಸ್ಯರಿದ್ದರೆ: 1.5 ಕಿಲೋಗ್ರಾಂ ಬೇಳೆ, 1 ಲೀಟರ್ ಎಣ್ಣೆ, ತಲಾ 1 ಕಿಲೋ ಸಕ್ಕರೆ ಮತ್ತು ಉಪ್ಪು.
* ಐವರು ಅಥವಾ ಹೆಚ್ಚು ಸದಸ್ಯರಿದ್ದರೆ: 2.25 ಕಿಲೋಗ್ರಾಂ ಬೇಳೆ, 1.5 ಲೀಟರ್ ಎಣ್ಣೆ, ತಲಾ 1.5 ಕಿಲೋ ಸಕ್ಕರೆ ಮತ್ತು ಉಪ್ಪು.

ಸಚಿವರ ಪ್ರಕಾರ, ಈ ಆಹಾರ ಕಿಟ್ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲು ಮತ್ತು ಉಚಿತ ಅಕ್ಕಿಯ ದುರುಪಯೋಗವನ್ನು ತಡೆಯಲು ಉದ್ದೇಶಿಸಲಾಗಿದೆ. ಪ್ರಸ್ತುತ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡಲಾಗುತ್ತಿದ್ದು, ಅದರ ಕೆಲವು ಭಾಗ ಕಾಳಬಜಾರಕ್ಕೆ ಹರಿದು ಹೋಗುತ್ತಿರುವುದು ಪತ್ತೆಯಾದ್ದರಿಂದ ಈ ಹೊಸ ಕ್ರಮ ಕೈಗೊಳ್ಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page