Monday, November 24, 2025

ಸತ್ಯ | ನ್ಯಾಯ |ಧರ್ಮ

ಗವಾಯ್ ಅವರ ಅಧಿಕಾರಾವಧಿ ಮುಕ್ತಾಯ | 53ನೇ ಸಿಜೆಐ ಆಗಿ ನ್ಯಾಯಮೂರ್ತಿ ಸೂರ್ಯಕಾಂತ್: ಇಂದು ಪ್ರಮಾಣ ವಚನ

ದೆಹಲಿ: 53ನೇ ಭಾರತದ ಮುಖ್ಯ ನ್ಯಾಯಮೂರ್ತಿ (CJI – Chief Justice of India) ಆಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸೋಮವಾರ (ಇಂದು) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪ್ರಸ್ತುತ ಸಿಜೆಐ ಆಗಿರುವ ನ್ಯಾಯಮೂರ್ತಿ ಬಿ.ಆರ್. ಗವಾಯ್ ಅವರ ಅಧಿಕಾರಾವಧಿ ಭಾನುವಾರದಂದು ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಮುಂದಿನ ಸಿಜೆಐ ಆಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಈ ಹುದ್ದೆಯಲ್ಲಿ ಅವರು 2027 ರ ಫೆಬ್ರವರಿ 9 ರವರೆಗೆ, ಅಂದರೆ ಸುಮಾರು 15 ತಿಂಗಳ ಕಾಲ ಮುಂದುವರಿಯುತ್ತಾರೆ. ಹರಿಯಾಣದ ಹಿಸಾರ್ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಲ್ಲಿ ಸೂರ್ಯಕಾಂತ್ ಅವರು 1962 ರ ಫೆಬ್ರವರಿ 10 ರಂದು ಜನಿಸಿದರು. ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿಯಲ್ಲಿ (Law Master’s Degree) ಅವರು ಟಾಪರ್ ಆಗಿ ಹೊರಹೊಮ್ಮಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page