Wednesday, December 3, 2025

ಸತ್ಯ | ನ್ಯಾಯ |ಧರ್ಮ

ವಕೀಲರು ಹೆಚ್ಚು ಜ್ಞಾನವಂತರಾಗುವ ಮೂಲಕ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು – ಶಾಸಕ ಬಾಲಕೃಷ್ಣ

ಚನ್ನರಾಯಪಟ್ಟಣ : ನ್ಯಾಯಾಲಯದ ಆಭರಣದಲ್ಲಿ ಎರಡುವರೆ ಲಕ್ಷ ವೆಚ್ಚದಲ್ಲಿ, ಆಧುನೀಕರಣಗೊಂಡ  ವಕೀಲರ ಭವನದ ಉದ್ಘಾಟನೆ ಮಾಡಿ ಮಾತನಾಡಿ, ಬ್ರಿಟಿಷರ ಆಡಳಿತದಿಂದ ಕಾನೂನು ವ್ಯವಸ್ಥೆಗಳು, ದೇಶದಲ್ಲಿ ಅನುಷ್ಠಾನಗೊಂಡಿದ್ದು, ಹಲವಾರು ಮಾರ್ಪಾಡುಗಳ ಮೂಲಕ  ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ದೊರಕುತ್ತಿದೆ, ಆನ್ಲೈನ್ ಮೂಲಕವೂ, ನ್ಯಾಯಾಲಯದ ಕಲಾಪ ನಡೆಯುತ್ತಿರುವುದು ಪ್ರಶಂಶನೀಯ, ಪಟ್ಟಣದಲ್ಲಿ ಸದ್ಯ 7 ನ್ಯಾಯಾಲಯಗಳು ಕಾರ್ಯ  ಮಾಡುತ್ತಿದ್ದು , ನೂತನ ನ್ಯಾಯಾಲಯದ ಸಂಕೀರ್ಣ 10 ಕೋಟಿ ರೂ ವೆಚ್ಚದಲ್ಲಿ ಒಂದುವರೆ ತಿಂಗಳಲ್ಲಿ, ಪೂರ್ಣಗೊಳ್ಳಲಿದೆ, ಎರಡು ಲಿಫ್ಟ್ ಗಳು ಕೂಡ ನಿರ್ಮಾಣವಾಗಿದೆ. ವಕೀಲರ ಭವನಕ್ಕೆ ಎರಡುವರೆ ಲಕ್ಷ ವೆಚ್ಚದಲ್ಲಿ ಶೌಚಾಲಯದ ನಿರ್ಮಾಣ ಹಾಗೂ ಎರಡುವರೆ ಲಕ್ಷ ವೆಚ್ಚದಲ್ಲಿ ಆಧುನಿಕರಣ ಗೊಳಿಸುವ ಕಾರ್ಯ ನಡೆದಿದೆ, ತಾಲೂಕಿನಲ್ಲಿ 170 ಮಂದಿ ವಕೀಲರಿದ್ದು ವಕೀಲರ ಭವನಕ್ಕೆ, ಲಿಫ್ಟ್ ಅಳವಡಿಕೆ ಬಗ್ಗೆ ಚಿಂತಿಸಲಾಗಿದೆ , ಭವನಕ್ಕೆ ಎಲ್ಲ ಸೌಲಭ್ಯ ಒದಗಿಸಲಾಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಡಿ ಕೆ ಹರೀಶ್, ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲರ ಸಂಘಟ ಪದಾಧಿಕಾರಿಗಳಾದ ದೇವರಾಜಕುಮಾರ್, ದಿನೇಶ್, ಚೇತನ್,   ಹೇಮಂತ್, ಕುಮಾರ್, ಸುಷ್ಮಾ, ಬಸವರಾಜ್ ಬೋರೇಗೌಡರು  ಮುಂತಾದವರಿದ್ದರು ವಕೀಲರ ಸಂಘದ ವತಿಯಿಂದ ಶಾಸಕ ಸಿ.ಎನ್ ಬಾಲಕೃಷ್ಣ ಅವರನ್ನು ಗೌರವಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page