Friday, December 5, 2025

ಸತ್ಯ | ನ್ಯಾಯ |ಧರ್ಮ

ದಿತ್ವಾ ಚಂಡಮಾರುತದ ಅಬ್ಬರಕ್ಕೆ ಶ್ರೀಲಂಕಾ ತತ್ತರ: 486 ಸಾವು ದಾಖಲು

ದಿತ್ವಾ ಚಂಡಮಾರುತ (Cyclone Ditwah)ವು ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ (Srilanka) ತೀವ್ರ ಆಘಾತ ನೀಡಿದೆ. ಚಂಡಮಾರುತದ ಪ್ರಕೋಪದಿಂದಾಗಿ ಕುಂಭದ್ರೋಣ ಮಳೆ ಸುರಿಯಿತು. ಇದರಿಂದ ಎಲ್ಲೆಂದರಲ್ಲಿ ಪ್ರವಾಹ ಉಂಟಾಗಿದೆ, ಮನೆಗಳು ಕುಸಿದಿವೆ ಮತ್ತು ಭೂಕುಸಿತಗಳು ಉಂಟಾಗಿವೆ. ಅನೇಕ ಪಟ್ಟಣಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

ಶ್ರೀಲಂಕಾ ವಿಪತ್ತು ನಿರ್ವಹಣಾ ಕೇಂದ್ರವು ಬಿಡುಗಡೆ ಮಾಡಿದ ವಿವರಗಳ ಪ್ರಕಾರ, 20 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿದ್ದು, ಜನಜೀವನ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ದಿತ್ವಾ ಚಂಡಮಾರುತದ ಅನಾಹುತದಿಂದಾಗಿ ಭಾರಿ ಆಸ್ತಿ ಮತ್ತು ಪ್ರಾಣಹಾನಿ ಸಂಭವಿಸಿದೆ:

  • ನವೆಂಬರ್ 16 ರಿಂದ ಇಲ್ಲಿಯವರೆಗೆ 486 ಜನರು ಪ್ರಾಣ ಕಳೆದುಕೊಂಡಿದ್ದಾರೆ.
  • ಸುಮಾರು 341 ಜನರು ನಾಪತ್ತೆಯಾಗಿದ್ದಾರೆ.

ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತ ದೇಶವು ಶ್ರೀಲಂಕಾಕ್ಕೆ ಬೆಂಬಲವಾಗಿ ನಿಂತಿದೆ. ‘ಆಪರೇಷನ್ ಸಾಗರ್ ಬಂಧು’ ಎಂಬ ಹೆಸರಿನಲ್ಲಿ ಭಾರತವು ಮಾನವೀಯ ನೆರವನ್ನು ನೀಡುತ್ತಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ದಳ (ಎನ್‌ಡಿಆರ್‌ಎಫ್) ಮತ್ತು ಭಾರತೀಯ ವಾಯು ಸೇನೆಯು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಪ್ರಾಣಗಳನ್ನು ಉಳಿಸುವ ಮತ್ತು ಪರಿಹಾರ ಕಾರ್ಯಗಳನ್ನು ನಡೆಸುವಲ್ಲಿ ತೊಡಗಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page