Wednesday, December 10, 2025

ಸತ್ಯ | ನ್ಯಾಯ |ಧರ್ಮ

ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲೂ ಭಾರತಕ್ಕೆ ಸ್ಥಾನವಿಲ್ಲ; ಕಾರಣವೇನು?

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನ ಪ್ರೊಫೆಸರ್ ಡೇವಿಡ್ ಜೆ. ರೀಬ್‌ಸ್ಟೀನ್ ಅವರು ಸಂಶೋಧಕರ ತಂಡದೊಂದಿಗೆ ಮತ್ತು ಯುಎಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ಸಹಯೋಗದಲ್ಲಿ ನಡೆಸಿದ ಸಂಶೋಧನೆಯಲ್ಲಿ ವಿಶ್ವದ ಅತಿ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯನ್ನು ಮಾಡಲಾಗಿದೆ. ಸ್ವಯಂಘೋಷಿತ ‘ವಿಶ್ವಗುರು’ ಭಾರತ ಟಾಪ್ 10 ಪಟ್ಟಿಯಲ್ಲೂ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸೋತಿದೆ.

ಶಕ್ತಿಶಾಲಿ ರಾಷ್ಟ್ರಗಳ ಗುರುತು ಮತ್ತು ಭಾರತದ ಸ್ಥಾನ ಹೀಗಿದೆ:
ಟಾಪ್ 3 ಶಕ್ತಿಶಾಲಿ ರಾಷ್ಟ್ರಗಳು
ಯುನೈಟೆಡ್ ಸ್ಟೇಟ್ಸ್ (ಯುಎಸ್): ಕೈಗಾರಿಕಾ ವೈವಿಧ್ಯತೆ, ಪ್ರಬಲ ಐಟಿ ಮತ್ತು ರಕ್ಷಣಾ ಬಲದಿಂದ ಶ್ರೇಷ್ಠ ಸ್ಥಾನವನ್ನು ಉಳಿಸಿಕೊಂಡಿದೆ.
ಚೀನಾ: ಕೃತಕ ಬುದ್ಧಿಮತ್ತೆ (AI) ಮತ್ತು ವಿವಿಧ ತಂತ್ರಜ್ಞಾನಗಳಲ್ಲಿ ಮುಂಚೂಣಿಯಾಗಿದೆ.
ರಷ್ಯಾ: ನೈಸರ್ಗಿಕ ಸಂಪನ್ಮೂಲ ಹಾಗೂ ರಕ್ಷಣಾ ಸಾಮರ್ಥ್ಯದ ಆಧಾರದ ಮೇಲೆ ಮೂರನೇ ಸ್ಥಾನ.

ಇತರೆ ಪ್ರಮುಖ ರಾಷ್ಟ್ರಗಳು
ಜಪಾನ್ ಮತ್ತು ದಕ್ಷಿಣ ಕೊರಿಯಾದಂತೆಯೇ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಮುಂದಾಗಿದೆ. ಸೌದಿ ಅರೇಬಿಯಾ ಮತ್ತು ಇಸ್ರೇಲ್, ತೈಲ ಮತ್ತು ರಕ್ಷಣಾ ಸಾಮರ್ಥ್ಯಗಳಲ್ಲಿ ಪ್ರಗತಿ ಹೊಂದಿವೆ.

ಭಾರತದ ಸ್ಥಾನ
2025 ರ ವಿಶ್ವ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 12ನೇ ಸ್ಥಾನದಲ್ಲಿದೆ. ಭಾರತದ ಒಟ್ಟು ಆಂತರಿಕ ಉತ್ಪನ್ನ (GDP) ಸುಮಾರು $3.55 ಟ್ರಿಲಿಯನ್ ಮತ್ತು ಜನಸಂಖ್ಯೆ 1.43 ಬಿಲಿಯನ್ ಆದರೂ ಆರ್ಥಿಕ ಮತ್ತು ರಾಜಕೀಯ ಪ್ರಭಾವದ ದೃಷ್ಟಿಕೋನದಿಂದ ಟಾಪ್ 10ರ ಒಳಗೆ ಸೇರಲು ಭಾರತ ಸೋತಿದೆ.

ಶ್ರೇಯಾಂಕ ನಿರ್ಧಾರಕ್ಕೆ ಕಾರಣವಾಗುವ ಅಂಶಗಳು
* ಆರ್ಥಿಕ ಶಕ್ತಿ
* ರಾಜಕೀಯ ಪ್ರಭಾವ
* ಬಲವಾದ ಅಂತರರಾಷ್ಟ್ರೀಯ ಸಂಬಂಧಗಳು
* ಮಿಲಿಟರಿ ಸಾಮರ್ಥ್ಯಗಳು
* ಜಾಗತಿಕ ನಾಯಕತ್ವ

ಈ ಶ್ರೇಯಾಂಕವನ್ನು ಯುಎಸ್ ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್ ಸಂಶೋಧಕರ ತಂಡವು ಸಿದ್ಧಪಡಿಸಿದೆ.

ಭಾರತಕ್ಕೆ ನಿರಾಸೆ
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು ಈ ವರ್ಷದ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 12 ನೇ ಸ್ಥಾನದಲ್ಲಿದೆ.  ಇದಕ್ಕೆ ಪ್ರಮುಖ ಕಾರಣ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದರೂ ಕಳಪೆ ಜಿಡಿಪಿ ದರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳಪೆ ಪ್ರಭಾವ ಎಂದು ತಿಳಿಸಲ್ಪಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page