ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪ್ರಾಪ್ತ ಬಾಲಕಿಯ ವಿರುದ್ಧ ಇಸ್ಲಾಂ ವಿರೋಧಿ ಮತ್ತು ಲೈಂಗಿಕ ನಿಂದನಾತ್ಮಕ ಕಾಮೆಂಟ್‌: ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನಕರ್ನಾಟಕ ವಿಧಾನ ಪರಿಷತ್ ಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು, ಕಾಂಗ್ರೆಸ್‌ಗೆ ಹಿನ್ನಡೆಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌

ಟ್ರಂಪ್‌ ಖುಷಿಗಾಗಿ ಭಾರತದ ಮೇಲೆ 50% ಸುಂಕ: ವಾಣಿಜ್ಯ ಯುದ್ಧಕ್ಕಿಳಿದ ಮೆಕ್ಸಿಕೋ

PPeepal Media

Peepal Media ದೇಶ

• 2 ನಿಮಿಷದ ಓದು

ಟ್ರಂಪ್‌ ಖುಷಿಗಾಗಿ ಭಾರತದ ಮೇಲೆ 50% ಸುಂಕ: ವಾಣಿಜ್ಯ ಯುದ್ಧಕ್ಕಿಳಿದ ಮೆಕ್ಸಿಕೋ

ದೆಹಲಿ: ಭಾರತೀಯ ಆಮದುಗಳ ಮೇಲೆ ಅಮೆರಿಕ 50% ಆಮದು ಸುಂಕ ವಿಧಿಸಿದ ಬೆನ್ನಲ್ಲೇ, ಭಾರತಕ್ಕೆ ಮತ್ತೊಂದು ದೇಶದಿಂದಲೂ ತೆರಿಗೆ ಹೊಡೆತ ಎದುರಾಗಿದೆ.

ಭಾರತದಿಂದ ಆಮದಾಗುವ ಅನೇಕ ಸರಕುಗಳ ಮೇಲೆ 50% ಸುಂಕ ವಿಧಿಸಲು ಮೆಕ್ಸಿಕೋ ಸೆನೆಟ್ ಬುಧವಾರ ಅನುಮೋದನೆ ನೀಡಿದೆ. ಭಾರತದ ಜೊತೆಗೆ ಚೀನಾ ಮತ್ತು ಇತರೆ ಕೆಲವು ಏಷ್ಯನ್ ದೇಶಗಳ ಮೇಲೂ ಇದರ ಪರಿಣಾಮ ಉಂಟಾಗಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಂತುಷ್ಟಗೊಳಿಸಲು ಮೆಕ್ಸಿಕೋ ಈ ನಿರ್ಧಾರ ತೆಗೆದುಕೊಂಡಿದೆ ಎಂದು ರಾಯಿಟರ್ಸ್ ಅಭಿಪ್ರಾಯಪಟ್ಟಿದೆ.

2026 ರ ಜನವರಿ 1 ರಿಂದ ಜಾರಿಗೆ ಬರಲಿರುವ ಸುಂಕ ಹೆಚ್ಚಳದ ನಿರ್ಧಾರದಿಂದಾಗಿ ಆಟೋಗಳು, ಆಟೋ ಬಿಡಿಭಾಗಗಳು, ಜವಳಿ, ಪ್ಲಾಸ್ಟಿಕ್ ಮತ್ತು ಉಕ್ಕು ಮುಂತಾದ ಸರಕುಗಳ ಮೇಲೆ 50% ಆಮದು ಸುಂಕ ಬೀಳಲಿದೆ.

ಮೆಕ್ಸಿಕೋ ಜೊತೆ ವಾಣಿಜ್ಯ ಒಪ್ಪಂದ ಇಲ್ಲದ ದೇಶಗಳ ಮೇಲೆ ಆಮದು ಸುಂಕವನ್ನು 50% ವಿಧಿಸಲು ಮೆಕ್ಸಿಕೋ ಸೆನೆಟ್ ನಿರ್ಣಯಿಸಿದೆ. ಇದರಿಂದ ಭಾರತ, ದಕ್ಷಿಣ ಕೊರಿಯಾ, ಚೀನಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ ದೇಶಗಳಿಗೆ ನಷ್ಟವಾಗಲಿದೆ.

ಮುಂದಿನ ವರ್ಷ ಹೆಚ್ಚುವರಿಯಾಗಿ 376 ಕೋಟಿ ಡಾಲರ್‌ಗಳಷ್ಟು (ಸುಮಾರು ರೂ. 33,940 ಕೋಟಿ) ಆದಾಯ ಗಳಿಸಲು ಮೆಕ್ಸಿಕೋ ಉದ್ದೇಶಿಸಿದೆ. ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಮೆಕ್ಸಿಕೋದ ಅಧ್ಯಕ್ಷೆ ಕ್ಲಾಡಿಯಾ ನೀನ್‌ಬಾಮ್ ನಿರ್ಧರಿಸಿದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ಅಮೆರಿಕ-ಮೆಕ್ಸಿಕೋ-ಕೆನಡಾ ವಾಣಿಜ್ಯ ಒಪ್ಪಂದದ ಬಗ್ಗೆ ಅಮೆರಿಕದಲ್ಲಿ ಪರಿಶೀಲನೆ ನಡೆಯಲಿರುವ ಹಿನ್ನೆಲೆಯಲ್ಲಿ ಟ್ರಂಪ್ ಅವರನ್ನು ಸಮಾಧಾನಪಡಿಸಲು ಮೆಕ್ಸಿಕೋ ಈ ಕ್ರಮ ಕೈಗೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಮೆಕ್ಸಿಕೋದ ಅತಿ ದೊಡ್ಡ ವಾಣಿಜ್ಯ ಪಾಲುದಾರ ಅಮೆರಿಕ.

ಈ ವರ್ಷದ ಆರಂಭದಲ್ಲಿ ಮೆಕ್ಸಿಕೋ ಚೀನಾದ ಸರಕುಗಳ ಮೇಲೆ ಭಾರಿ ಸುಂಕಗಳನ್ನು ವಿಧಿಸಿತ್ತು. ಆದರೂ ಟ್ರಂಪ್ ಕಳೆದ ಕೆಲವು ತಿಂಗಳುಗಳಿಂದ ನೀನ್‌ಬಾಮ್ ಸರ್ಕಾರದ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೆಕ್ಸಿಕನ್ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ 50% ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದ ಟ್ರಂಪ್, ಪಿಯೋಯಿಡ್ ಫೆಂಟಾನಿಲ್ (ಮಾದಕ ವಸ್ತು) ಹರಿವನ್ನು ತಡೆಯುವಲ್ಲಿ ವಿಫಲವಾದ ಕಾರಣಕ್ಕೆ ಹೆಚ್ಚುವರಿಯಾಗಿ ಇನ್ನೂ 25% ಸುಂಕ ವಿಧಿಸುವುದಾಗಿ ಮೆಕ್ಸಿಕೋಗೆ ಎಚ್ಚರಿಕೆ ನೀಡಿದ್ದರು. ಮಾತ್ರವಲ್ಲದೆ, ಅಮೆರಿಕದ ರೈತರಿಗೆ ನೀರಾವರಿ ಒದಗಿಸುವ 1944 ರ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಮೆಕ್ಸಿಕೋ ಮೇಲೆ ಮತ್ತೆ 5% ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದರು.

ಭಾರತ ಆಮದು ವಸ್ತುಗಳ ಮೇಲೆ 50% ಸುಂಕ ವಿಧಿಸುವ ಮೆಕ್ಸಿಕೋ ನಿರ್ಧಾರವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವಾಣಿಜ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. 2024 ರಲ್ಲಿ ಭಾರತೀಯ ಆಮದುಗಳು ಗರಿಷ್ಠ 1,170 ಕೋಟಿ ಡಾಲರ್‌ಗಳನ್ನು ತಲುಪಿದ್ದವು. ಮೆಕ್ಸಿಕೋದ ರಫ್ತುಗಳಿಗೆ ಭಾರತ 9ನೇ ಗಮ್ಯಸ್ಥಾನವಾಗಿದೆ.

ಪ್ರಸ್ತುತ, ಮೆಕ್ಸಿಕೋದಿಂದ ಆಮದಾಗುವ ಸರಕುಗಳಿಗಿಂತ ಭಾರತದಿಂದ ರಫ್ತಾಗುವ ಸರಕುಗಳೇ ಹೆಚ್ಚಾಗಿವೆ. ಉದಾಹರಣೆಗೆ, 2024 ರಲ್ಲಿ ಮೆಕ್ಸಿಕೋಗೆ ಭಾರತೀಯ ರಫ್ತುಗಳ ಮೌಲ್ಯ 890 ಕೋಟಿ ಡಾಲರ್‌ಗಳು ಇತ್ತು, ಆದರೆ ಆಮದುಗಳ ಮೌಲ್ಯ ಕೇವಲ 280 ಕೋಟಿ ಡಾಲರ್‌ಗಳು ಮಾತ್ರ ಇತ್ತು.

ಅಂದರೆ ಭಾರತಕ್ಕೆ ಅನುಕೂಲಕರವಾದ ವಾಣಿಜ್ಯ ವ್ಯತ್ಯಾಸವಿದೆ. 2024 ರಲ್ಲಿ, ಭಾರತದಿಂದ ಮುಖ್ಯವಾಗಿ ಮೋಟಾರು ಕಾರುಗಳು, ಆಟೋ ಬಿಡಿಭಾಗಗಳು ಮತ್ತು ಇತರ ಪ್ರಯಾಣಿಕ ವಾಹನಗಳನ್ನು ಮೆಕ್ಸಿಕೋ ಆಮದು ಮಾಡಿಕೊಂಡಿದೆ. ಈ ಸರಕುಗಳ ಮೇಲೆ ಮೆಕ್ಸಿಕೋ ಈಗ ಭಾರಿ ಸುಂಕಗಳನ್ನು ವಿಧಿಸಿರುವುದರಿಂದ, ಮುಂದಿನ ವರ್ಷ ಈ ಸರಕುಗಳ ಆಮದಿನ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು