Saturday, December 20, 2025

ಸತ್ಯ | ನ್ಯಾಯ |ಧರ್ಮ

ಬೇರೆ ಧರ್ಮದಲ್ಲಿ ಮದುವೆಯಾದ ಮಗಳಿಗೆ ಆಸ್ತಿಯಲ್ಲಿ ಹಕ್ಕಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ:ಮಗಳು ತಂದೆಯ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾದರೆ ಅಥವಾ ಬೇರೆ ಧರ್ಮದ ವ್ಯಕ್ತಿಯನ್ನು ವಿವಾಹವಾದರೆ, ತಂದೆ ತನ್ನ ಸ್ವಯಂ ಸಂಪಾದಿತ ಆಸ್ತಿಯನ್ನು ವಿಲ್ ಮೂಲಕ ಮಗಳಿಗೆ ನೀಡದೆ ಹೊರಗಿಡಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂತಹ ನಿರ್ಧಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:
ಶೈಲಾ ಜೋಸೆಫ್ ಅವರು ಬೇರೆ ಧರ್ಮದ ಯುವಕನನ್ನು ವಿವಾಹವಾಗಿದ್ದ ಹಿನ್ನೆಲೆಯಲ್ಲಿ, ಅವರ ತಂದೆ ಎನ್.ಎಸ್. ಶ್ರೀಧರನ್ ಅವರು ಮಗಳನ್ನು ದೂರವಿಟ್ಟು ತಮ್ಮ ವಿಲ್‌ನಲ್ಲಿ ಆಕೆಗೆ ಆಸ್ತಿ ಪಾಲು ನೀಡಿರಲಿಲ್ಲ.

ಕೆಳ ನ್ಯಾಯಾಲಯಗಳ ತೀರ್ಪು:
ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳು ವಿಲ್ ಕುರಿತು ಅನುಮಾನ ವ್ಯಕ್ತಪಡಿಸಿ, ಶೈಲಾ ಅವರಿಗೆ ಇತರ ಎಂಟು ಸಹೋದರರೊಂದಿಗೆ ಸಮಾನ ಪಾಲು ನೀಡಬೇಕೆಂದು ಆದೇಶಿಸಿದ್ದವು.

ಸುಪ್ರೀಂ ಕೋರ್ಟ್ ತೀರ್ಪು:
ನ್ಯಾಯಮೂರ್ತಿಗಳಾದ ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ನ್ಯಾಯಪೀಠವು ಕೆಳ ನ್ಯಾಯಾಲಯಗಳ ತೀರ್ಪುಗಳನ್ನು ರದ್ದುಗೊಳಿಸಿ, ವಿಲ್ ಮಾನ್ಯವಾಗಿದ್ದು ಶೈಲಾ ಅವರಿಗೆ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ಘೋಷಿಸಿದೆ.

ಆಸ್ತಿ ಮಾಲೀಕರು ತಮ್ಮ ಸ್ವಇಚ್ಛೆಯಿಂದ ಬರೆದಿರುವ ಅಂತಿಮ ವಿಲ್‌ಗೆ ಕಾನೂನು ಮಾನ್ಯತೆ ನೀಡುತ್ತದೆ. ವಿಲ್ ಇರುವ ಸಂದರ್ಭಗಳಲ್ಲಿ ಅದರಲ್ಲಿರುವ ವ್ಯಕ್ತಿಯ ಇಚ್ಛೆಯೇ ಅಂತಿಮವಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.

ಲಿಂಗ ಸಮಾನತೆ ಬಗ್ಗೆ ಸ್ಪಷ್ಟನೆ:
ಈ ಪ್ರಕರಣ ಲಿಂಗ ಸಮಾನತೆಯ ವಿಷಯವಲ್ಲ ಎಂದು ಕೋರ್ಟ್ ಹೇಳಿದ್ದು, ವಿಲ್ ಇಲ್ಲದಿದ್ದರೆ ಮಗಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಇರುತ್ತಿತ್ತು ಎಂದು ವಿವರಿಸಿದೆ.

ವಿಲ್ ಮೂಲಕ ಆಸ್ತಿ ಹಂಚಿಕೆ ಮಾಡಿದಲ್ಲಿ, ಆ ನಿರ್ಧಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ. ಆಸ್ತಿ ಮಾಲೀಕರ ಉದ್ದೇಶ ಮತ್ತು ಕೊನೆಯ ವಿಲ್‌ಗೆ ಕಾನೂನು ಸಂಪೂರ್ಣ ಗೌರವ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page