Wednesday, January 14, 2026

ಸತ್ಯ | ನ್ಯಾಯ |ಧರ್ಮ

2028ಕ್ಕೆ ಅರಸೀಕೆರೆ ಶಿವಲಿಂಗೇಗೌಡರ ಸೋಲು ಖಚಿತ

ಹಾಸನ: ಇತ್ತೀಚೆಗೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ವಿಚಾರವಾಗಿ ಶಾಸಕ ಕೆ.ಎಂ. ಶಿವಲಿಂಗೇಗೌಡರು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ನೀಡಿರುವ ಸವಾಲನ್ನು ಸ್ವೀಕರಿಸುತ್ತೇವೆ. 2028ರಲ್ಲಿ ಸೋಲು ಖಚಿತ, ಮತ್ತೆ ಪಾಪಿಯಾಗುತ್ತಾರೆ ಎಂದು ಜೆಡಿಎಸ್ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಶೋಕ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರಸೀಕೆರೆ ಕ್ಷೇತ್ರದ ಶಾಸಕರ ಸವಾಲನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದೇವೆ. ಅವರ ಪ್ರತಿಯೊಂದು ರಾಜಕೀಯ ತಂತ್ರಕ್ಕೂ ಪ್ರತಿತಂತ್ರ ರೂಪಿಸಲು ನಾವು ಸಿದ್ಧರಾಗಿದ್ದೇವೆ ಎಂದು ಘೋಷಿಸಿದರು. ರೇವಣ್ಣ ಅವರ ಮನೆಯಲ್ಲಿ ಊಟ ಮಾಡಿಕೊಂಡು ನಂತರ ಅವರ ವಿರುದ್ಧ ಮಾತನಾಡುವುದು ಶಾಸಕ ಸ್ಥಾನಕ್ಕೆ ಗೌರವ ತರುವಂತದ್ದಲ್ಲ ಎಂದು ಗಿರೀಶ್ ಕಟುವಾಗಿ ಟೀಕಿಸಿದರು.

2008ರಲ್ಲಿ ನೀವು ಶಾಸಕರೂ ಅಲ್ಲ, ಅರಸೀಕೆರೆಗೆ ರೇವಣ್ಣ ಅವರ ಕಾಲ ಕೆಳಗೆ ಬಂದಿದ್ದೀರಿ. ಆಗ ಖಾರ ಬಿಸ್ಕೆಟ್, ಟವಲ್ ಕೊಟ್ಟು ರಾಜಕೀಯ ನಡೆಸಿದ್ದೀರಿ. 15 ವರ್ಷ ಶಾಸಕರಾಗಿದ್ದರೂ ಕ್ಷೇತ್ರಕ್ಕೆ ಶೋಭೆ ತರಲಿಲ್ಲ. 2028ರಲ್ಲಿ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಶಾಸಕರಾಗಿ ಕಳೆದ 15  ವರ್ಷಗಳ ಅಭಿವೃದ್ಧಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡಲಿ. ಕಳೆದ ಎರಡುವರೆ ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದನ್ನೂ ಜನತೆಗೆ ತಿಳಿಸಲಿ ಎಂದು ಸವಾಲು ಹಾಕಿದರು.

ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲ, ತಿರುಪತಿ ರಾಜಗೋಪುರ ಆರು ವರ್ಷಗಳಿಂದ ಉದ್ಘಾಟನೆ ಆಗಿಲ್ಲ. ಪಿಎಂ ಆವಾಸ್ ಯೋಜನೆ ಲಾಟರಿ ಹಂತದಲ್ಲೇ ನಿಂತಿದೆ ಎಂದು ಆರೋಪಿಸಿದರು.

ನಿಮ್ಮ 20 ವರ್ಷಗಳ ಆಸ್ತಿ ವಿವರ ಬಹಿರಂಗಪಡಿಸಲಿ ಎಂದು ರೇವಣ್ಣ ಕುಟುಂಬದ ಮೇಲಿನ ಆರೋಪಗಳನ್ನೂ ತಳ್ಳಿ ಹಾಕಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page