Monday, January 19, 2026

ಸತ್ಯ | ನ್ಯಾಯ |ಧರ್ಮ

ವಿರಾಟ್ ಶತಕ ವ್ಯರ್ಥ, ನ್ಯೂಜಿಲೆಂಡ್ 38 ವರ್ಷಗಳ ನಂತರ ಭಾರತದಲ್ಲಿ ಸರಣಿ ಜಯ

ಇಂದೋರ್: ಭಾನುವಾರ ರಾತ್ರಿ ವಿರಾಟ್ ಕೊಹ್ಲಿ ಛಲದ ಶತಕ ಮತ್ತು ಹರ್ಷಿತ್ ರಾಣಾ ಅವರ ಸ್ಫೋಟಕ ಅರ್ಧಶತಕ ಮಾತ್ರ ಭಾರತದ ಅಭಿಮಾನಿಗಳ ನೆನಪಿನ ಪುಟದಲ್ಲಿ ಸೇರಿದವು. ಆದರೆ ನ್ಯೂಜಿಲೆಂಡ್ ತಂಡವು 38 ವರ್ಷಗಳ ನಂತರ ಭಾರತದಲ್ಲಿ ಏಕದಿನ ಕ್ರಿಕೆಟ್ ಸರಣಿ ಜಯಿಸಿತು. ಹೋಳ್ಕರ್ ಮೈದಾನದಲ್ಲಿ ನಡೆದ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ  ಕಿವೀಸ್ ಬಳಗವು 41 ರನ್‌ಗಳಿಂದ ಗೆದ್ದಿತು. 2–1ರಿಂದ ಸರಣಿ ಕಿರೀಟ ಧರಿಸಿತು. ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 8ಕ್ಕೆ337 (ವಿಲ್ ಯಂಗ್ 30, ಡ್ಯಾರಿಲ್ ಮಿಚೆಲ್ 137, ಗ್ಲೆನ್ ಫಿಲಿಪ್ಸ್ 106, ಮೈಕೆಲ್ ಬ್ರೇಸ್‌ವೆಲ್ ಔಟಾಗದೇ 28, ಅರ್ಷದೀಪ್ ಸಿಂಗ್ 63ಕ್ಕೆ3, ಹರ್ಷಿತ್ ರಾಣಾ 84ಕ್ಕೆ3)

ಭಾರತ: 46 ಓವರ್‌ಗಳಲ್ಲಿ 296 (ಶುಭಮನ್ ಗಿಲ್ 23, ವಿರಾಟ್ ಕೊಹ್ಲಿ 124, ನಿತೀಶ್ ಕುಮಾರ್ ರೆಡ್ಡಿ 53, ಹರ್ಷಿತ್ ರಾಣಾ 52, ಝ್ಯಾಕ್ರಿ ಫೌಲ್ಕೆಸ್ 77ಕ್ಕೆ3, ಕ್ರಿಸ್ಟನ್ ಕ್ಲರ್ಕ್ 54ಕ್ಕೆ3, ಜೇಡನ್ ಲೆನಾಕ್ಸ್ 42ಕ್ಕೆ2)

ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 41 ರನ್‌ಗಳ ಜಯ ಹಾಗೂ 2–1ರಿಂದ ಸರಣಿ ಗೆಲುವು.

ಪಂದ್ಯ–ಸರಣಿಯ ಆಟಗಾರ: ಡ್ಯಾರಿಲ್ ಮಿಚೆಲ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page