Monday, January 26, 2026

ಸತ್ಯ | ನ್ಯಾಯ |ಧರ್ಮ

ಬಿಸಿಸಿಐನ ಮಾಜಿ ಅಧ್ಯಕ್ಷ ಇಂದರ್ಜಿತ್ ಸಿಂಗ್ ಬಿಂದ್ರಾ ನಿಧನ

ಬಿಸಿಸಿಐನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕ್ರಿಕೆಟ್ ಆಡಳಿತಗಾರ ಇಂದರ್ಜಿತ್ ಸಿಂಗ್ ಬಿಂದ್ರಾ ಅವರು ಭಾನುವಾರ ಸಂಜೆ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ದಶಕಗಳ ಕಾಲ ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ಬಿಂದ್ರಾ, ಭಾನುವಾರ ಮಧ್ಯಾಹ್ನದಿಂದ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಸಂಜೆ ಸುಮಾರು 6:30ರ ವೇಳೆಗೆ ಕೊನೆಯುಸಿರೆಳೆದರು ಎಂದು ವರದಿಗಳು ತಿಳಿಸಿವೆ. ಅವರ ಅಂತ್ಯಕ್ರಿಯೆ ಸೋಮವಾರ ನವದೆಹಲಿಯ ಲೋಧಿ ಚಿತಾಗಾರದಲ್ಲಿ ನಡೆಯಲಿದೆ.

ಇಂದರ್ಜಿತ್ ಸಿಂಗ್ ಬಿಂದ್ರಾ ಅವರು ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಪ್ರಭಾವಶಾಲಿ ಆಡಳಿತಗಾರರಲ್ಲಿ ಒಬ್ಬರಾಗಿದ್ದು, 1993ರಿಂದ 1996ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದೇಶದಲ್ಲಿ ಕ್ರಿಕೆಟ್‌ನ ಆಧುನಿಕ ಆಡಳಿತ ವ್ಯವಸ್ಥೆಯನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಐಸಿಸಿ ಅಧ್ಯಕ್ಷ ಜಯ್ ಶಾ ಸಂತಾಪ
ಇಂದರ್ಜಿತ್ ಸಿಂಗ್ ಬಿಂದ್ರಾ ಅವರ ನಿಧನಕ್ಕೆ ಐಸಿಸಿ ಅಧ್ಯಕ್ಷ ಜಯ್ ಶಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
“ಬಿಸಿಸಿಐನ ಮಾಜಿ ಅಧ್ಯಕ್ಷ ಹಾಗೂ ಭಾರತೀಯ ಕ್ರಿಕೆಟ್ ಆಡಳಿತದ ದಿಗ್ಗಜರಾದ ಶ್ರೀ ಐ.ಎಸ್. ಬಿಂದ್ರಾ ಅವರ ನಿಧನದಿಂದ ನಾವು ಆಳವಾಗಿ ದುಃಖಿತರಾಗಿದ್ದೇವೆ. ಅವರ ಸೇವಾ ಪರಂಪರೆ ಭವಿಷ್ಯದ ಪೀಳಿಗೆಗಳಿಗೆ ಸದಾ ಸ್ಫೂರ್ತಿಯಾಗಿರಲಿದೆ. ಓಂ ಶಾಂತಿ,” ಎಂದು ಜಯ್ ಶಾ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page