Tuesday, June 18, 2024

ಸತ್ಯ | ನ್ಯಾಯ |ಧರ್ಮ

ಪಿಎಸ್‌ಐ ಪ್ರಕರಣ ಇನ್ನೂ ಮುಗಿದಿಲ್ಲ : ಮತ್ತೆ 8 ಅಭ್ಯರ್ಥಿಗಳ ಬಂಧನ

ಕಲಬುರಗಿ: ಕಳೆದ ಅಕ್ಟೋಬರ್‌ 3 ರಂದು, ಬ್ಲೂ ಟೂತ್‌ ಬಳಸಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಪಾಸಾಗಿದ್ದ ಎಂಟು ಅಭ್ಯರ್ಥಿಗಳ ಅಕ್ರಮದ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳ ತಂಡ, ಆರೋಪಿಗಳನ್ನು ಬಂಧಿಸಿದ್ದಾರೆ. ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾದ ಇವರು ಭಗವಂತರಾಯ ಜೋಗೂರ, ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ಪೀರಪ್ಪ ಸಿದ್ನಾಳ, ಶ್ರೀ ಶೈಲ ಹಚ್ಚಡ, ಸಿದ್ದು ಗೌಡ ಶರಣಪ್ಪ ಪಾಟೀಲ, ಸೋಮನಾಥ, ರವಿರಾಜ, ವಿಜಯ ಕುಮಾರ ಗುಡೂರ ಎಂದು ತಿಳಿದುಬಂದಿದೆ.

ಇವರಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿದ್ದಾರೆ.    

Related Articles

ಇತ್ತೀಚಿನ ಸುದ್ದಿಗಳು