Tuesday, February 3, 2026

ಸತ್ಯ | ನ್ಯಾಯ |ಧರ್ಮ

ಆನೆ-ಮಾನವ ಸಂಘರ್ಷ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ – ಸಂಸದ ಶ್ರೇಯಸ್ ಪಟೇಲ್

ನವದೆಹಲಿ: ಹಾಸನ ಜಿಲ್ಲೆಯಲ್ಲಿ ದಶಕಗಳಿಂದಲೂ ರೈತರನ್ನು ಕಾಡುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಅವರು ಇಂದು ದೆಹಲಿಯಲ್ಲಿ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಶೀಘ್ರದಲ್ಲೇ ಹಾಸನಕ್ಕೆ ಕೇಂದ್ರ ತಂಡ ಭೇಟಿ ​ಸಚಿವರೊಂದಿಗಿನ ಭೇಟಿಯ ನಂತರ, ಅರಣ್ಯ ವಿಭಾಗದ ಹೆಚ್ಚುವರಿ ಮಹಾ ನಿರ್ದೇಶಕರಾದ ರಮೇಶ್ ಕೆ. ಪಾಂಡೇ (IFS) ಅವರನ್ನು ಸಂಸದರು ಭೇಟಿ ಮಾಡಿದರು. ಸಚಿವರ ನಿರ್ದೇಶನದಂತೆ, ಹಾಸನ ಜಿಲ್ಲೆಯಲ್ಲಿನ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) ತಂಡವು ಶೀಘ್ರದಲ್ಲೇ ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಸಂಸದರು ತಿಳಿಸಿದರು. ಈ ತಂಡವು ಜಿಲ್ಲೆಯ ಆನೆ ಕಾರಿಡಾರ್‌ಗಳ ಸ್ಥಿತಿಗತಿ ಮತ್ತು ಸಂಘರ್ಷ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಿದೆ. 7 ಗ್ರಾಮಗಳ ರೈತರಿಂದ ಸ್ವಯಂಪ್ರೇರಿತ ಜಮೀನು ಹಸ್ತಾಂತರ ಹಿಂದೆ ನಡೆದ ಟಾಸ್ಕ್‌ಫೋರ್ಸ್ ಕಮಿಟಿ ಸಭೆಯ ನಿರ್ಧಾರಗಳನ್ನು ಸಚಿವರ ಗಮನಕ್ಕೆ ತಂದ ಶ್ರೇಯಸ್ ಪಟೇಲ್ ಅವರು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮತ್ತು ಆನೆಗಳ ಸಂಚಾರ ಅಧಿಕವಾಗಿರುವ ಕೆಳಕಂಡ 7 ಗ್ರಾಮಗಳನ್ನು ಯೋಜನೆಗೆ ಒಳಪಡಿಸುವಂತೆ ಒತ್ತಾಯಿಸಿದರು.

​ಅರಣಿ, ​ಬೋರನಮನೆ, ​ಬಾಳೆಹಳ್ಳ,  ಬೆಟ್ಟಕುಮರಿ, ​ಮಂಕನಹಳ್ಳಿ, ಯತ್ತಹಳ್ಳ, ಬಾಜಿ ಮನೆ ಎಸ್ಟೇಟ್ ಈ ಗ್ರಾಮಗಳಲ್ಲಿನ 416 ರೈತರು ತಮ್ಮ ಒಟ್ಟು 2261.21 ಎಕರೆ ಹಿಡುವಳಿ ಪ್ರದೇಶವನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಸಿದ್ಧರಿದ್ದಾರೆ.

​ಪರಿಹಾರಕ್ಕೆ ಆಗ್ರಹ

“ಈ 7 ಗ್ರಾಮಗಳ ರೈತರು ಆನೆಗಳ ಕಾಟದಿಂದ ಬೇಸತ್ತಿದ್ದು, ಸರ್ಕಾರವು ಪ್ರತಿ ಎಕರೆಗೆ ಕನಿಷ್ಠ 15 ಲಕ್ಷ ರೂ. ಪರಿಹಾರ ನೀಡಿದಲ್ಲಿ ತಕ್ಷಣವೇ ಜಮೀನು ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಪ್ರಸ್ತಾವನೆ ಜಾರಿಯಾದಲ್ಲಿ ಆನೆಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಸಿಗಲಿದ್ದು, ರೈತರ ಪ್ರಾಣ-ಹಾನಿ ತಪ್ಪಿಸಬಹುದು,” ಎಂದು ಶ್ರೇಯಸ್ ಪಟೇಲ್ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page