Sunday, February 15, 2026

ಸತ್ಯ | ನ್ಯಾಯ |ಧರ್ಮ

ಸನ್ಯಾಸಿಗೂ ಪ್ರೊಮೋಷನ್‌ ಕೊಟ್ಟ ಸರ್ಕಾರ – ನೆಟ್ಟಿಗರ ಆಕ್ರೋಶ

ಬೆಂಗಳೂರು : ಕೆ.ಎ.ಎಸ್ (KAS) ಅಧಿಕಾರಿಗಳಿಗೆ ಬಡ್ತಿ ನೀಡುವ ವೇಳೆ ಪ್ರಸ್ತುತ ಸ್ವಾಮೀಜಿಯಾಗಿರುವವರಿಗೂ (Swamiji) ಬಡ್ತಿ (Promotion) ನೀಡಿ ಆದೇಶ ಹೊರಡಿಸುವ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರ (Congress Govt) ಎಡವಟ್ಟು ಮಾಡಿದೆ.

ಹೌದು.. ಹೆಚ್.ಎಲ್.ನಾಗರಾಜ್ ಅವರು ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಸನ್ಯಾಸ ಸ್ವೀಕರಿಸಿ ನಿಶ್ಚಲಾನಂದ ಸ್ವಾಮೀಜಿಯಾಗಿದ್ದಾರೆ. ಇದೀಗ ಸರ್ಕಾರದ ಆದೇಶದಲ್ಲಿ ಅವರಿಗೂ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಹೆಚ್.ಎಲ್ ನಾಗರಾಜ್ ಅವರು ಸ್ವಾಮೀಜಿಯಾಗಿ ಆಧ್ಯಾತ್ಮಿಕ ಜೀವನ ನಡೆಸುತ್ತಿರುವುದು ತಿಳಿದಿದ್ದರೂ ಅವರ ಹೆಸರನ್ನು ಸೇವೆಯಲ್ಲಿರುವ ಅಧಿಕಾರಿಗಳ ಪಟ್ಟಿಯಲ್ಲಿ ಸೇರಿಸಿ ಪದೋನ್ನತಿ ನೀಡಲಾಗಿರುವುದು ಟೀಕೆಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ 20 ಮಂದಿ ಕೆ.ಎ.ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿತ್ತು. ಬಡ್ತಿ ಪಟ್ಟಿಯಲ್ಲಿ ಸ್ವಯಂ ನಿವೃತ್ತಿ ಪಡೆದಿರುವ ಹೆಚ್.ಎಲ್.ನಾಗರಾಜ್ ಅವರ ಹೆಸರೂ ಇದೆ. ಇದು ಆಡಳಿತಾತ್ಮಕ ಎಡವಟ್ಟು ಎಂದು ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page