Thursday, February 19, 2026

ಸತ್ಯ | ನ್ಯಾಯ |ಧರ್ಮ

ಮುಷ್ಕರ ತಾತ್ಕಾಲಿಕವಾಗಿ ಹಿಂಪಡೆದ ಸಾರಿಗೆ ನೌಕರರು; ಚರ್ಚೆಯ ಬಳಿಕ ಮುಂದಿನ ನಿರ್ಧಾರ

ರಾಜ್ಯದ ಸಾರಿಗೆ ನೌಕರರು ಘೋಷಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನೌಕರರು ಇಂದು Freedom Parkನಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಮುಖಂಡರ ಸಭೆಯಲ್ಲಿ ಮುಷ್ಕರವನ್ನು ಮುಂದುವರಿಸದಿರಲು ನಿರ್ಧರಿಸಲಾಯಿತು.

ಸಾರಿಗೆ ಸಂಘದ ಮುಖಂಡರು ಮಾಧ್ಯಮಗಳಿಗೆ ಮಾಹಿತಿ ನೀಡಿ, “ನಾಳೆಯಿಂದ ಮುಷ್ಕರ ಇರುವುದಿಲ್ಲ. ಪ್ರತಿಭಟನೆಗೂ ವಿರಾಮ ನೀಡುತ್ತಿದ್ದೇವೆ. ಆದರೆ ನಮ್ಮ ಬೇಡಿಕೆಗಳಿಗಾಗಿ ಹೋರಾಟ ನಿಲ್ಲಿಸುವುದಿಲ್ಲ,” ಎಂದು ತಿಳಿಸಿದರು.

ಸರ್ಕಾರವು ಬಜೆಟ್‌ ಪೂರ್ವ ಚರ್ಚೆಗೆ ಆಹ್ವಾನಿಸಿರುವುದಾಗಿ ತಿಳಿಸಿರುವ ಅವರು, ಆ ಸಭೆಯಲ್ಲಿ ವೇತನ ಹೆಚ್ಚಳ ಹಾಗೂ ಹಿಂಬಾಕಿ ವೇತನ ಪಾವತಿ ವಿಚಾರ ಪ್ರಸ್ತಾಪವಾಗಲಿದೆ ಎಂದರು. “ಒಟ್ಟು 38 ತಿಂಗಳ ಹಿಂಬಾಕಿ ವೇತನ ಬಾಕಿಯಿದೆ. ಸರ್ಕಾರ 26 ತಿಂಗಳ ವೇತನ ಬಿಡುಗಡೆಗೆ ಸಮ್ಮತಿ ಸೂಚಿಸಿದೆ. ಉಳಿದ ಮೊತ್ತ ಪಾವತಿಗೆ ಸ್ಪಷ್ಟ ನಿರ್ಧಾರ ಆಗದಿದ್ದರೆ ಮುಂದಿನ ಹಂತದ ಹೋರಾಟದ ಬಗ್ಗೆ ಚಿಂತನೆ ನಡೆಸಲಾಗುತ್ತದೆ,” ಎಂದು ಎಚ್ಚರಿಸಿದರು.
ಮುಷ್ಕರ ಹಿಂಪಡೆಯುವ ತೀರ್ಮಾನದ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ಬಸ್ ಸಂಚಾರ ಸಾಮಾನ್ಯವಾಗಲಿದೆ. ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.

ಪ್ರಮುಖ ಬೇಡಿಕೆಗಳು
* ಬಾಕಿ ಉಳಿದಿರುವ ಎಲ್ಲಾ ವೇತನ ತಕ್ಷಣ ಪಾವತಿ
* 38 ತಿಂಗಳ ಹಿಂಬಾಕಿ ವೇತನ ಬಿಡುಗಡೆ
* ಸಾರಿಗೆ ಸಿಬ್ಬಂದಿಗೆ ವೇತನ ಪರಿಷ್ಕರಣೆ
* ಜನವರಿ 1, 2024ರಿಂದ ಅನ್ವಯವಾಗುವ ನೂತನ ವೇತನ ಶ್ರೇಣಿ ಜಾರಿ
* ರಾಜ್ಯ ಸರ್ಕಾರಿ ನೌಕರರ ಸಮಾನ ವೇತನ
* ಇಲಾಖೆಯಲ್ಲಿ ಕಿರುಕುಳ ರಹಿತ ವಾತಾವರಣ
* ಅಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳಕ್ಕೆ ತೆರೆ
ಸರ್ಕಾರ-ಸಂಘ ಚರ್ಚೆಯ ಫಲಿತಾಂಶದ ಮೇಲೆ ಮುಂದಿನ ಕ್ರಮ ಅವಲಂಬಿತವಾಗಿದ್ದು, ಪರಿಸ್ಥಿತಿ ಮೇಲ್ವಿಚಾರಣೆಯಲ್ಲಿ ಇದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page