ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪ್ರಾಪ್ತ ಬಾಲಕಿಯ ವಿರುದ್ಧ ಇಸ್ಲಾಂ ವಿರೋಧಿ ಮತ್ತು ಲೈಂಗಿಕ ನಿಂದನಾತ್ಮಕ ಕಾಮೆಂಟ್‌: ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನಕರ್ನಾಟಕ ವಿಧಾನ ಪರಿಷತ್ ಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು, ಕಾಂಗ್ರೆಸ್‌ಗೆ ಹಿನ್ನಡೆಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌

ಧಾರ್ಮಿಕ ಅಸಹಿಷ್ಣುತೆ ವಿರುದ್ಧ ‘ಭಗವಂತನ ಮರಣ’ – ಚಿಂತನೆಗೆ ಆಹ್ವಾನಿಸುವ ನಾಟಕ ಪ್ರದರ್ಶನ

PPeepal Media Desk

Peepal Media Desk ಅಂಕಣ, ದೇಶ, ರಾಜ್ಯ

• 1 ನಿಮಿಷದ ಓದು

ಧಾರ್ಮಿಕ ಅಸಹಿಷ್ಣುತೆ ವಿರುದ್ಧ ‘ಭಗವಂತನ ಮರಣ’ – ಚಿಂತನೆಗೆ ಆಹ್ವಾನಿಸುವ ನಾಟಕ ಪ್ರದರ್ಶನ

ಧಾರ್ಮಿಕ ಅಸಹಿಷ್ಣುತೆ, ಮೂಲಭೂತವಾದ ಮತ್ತು ಹಿಂಸೆಯ ರಾಜಕಾರಣದ ವಿರುದ್ಧ ತೀಕ್ಷ್ಣ ಪ್ರಶ್ನೆಗಳನ್ನು ಎತ್ತುವ ಸಮಕಾಲೀನ ನಾಟಕ ‘ಭಗವಂತನ ಮರಣ’ ಇದೇ ತಿಂಗಳು ಬೆಂಗಳೂರಿನಲ್ಲಿ ವೇದಿಕೆಗೇರಲಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷದ ರಾಜಕೀಯ ಹಾಗೂ ಅಮಾಯಕ ಯುವಕರನ್ನು ಹಿಂಸಾತ್ಮಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಪ್ರವೃತ್ತಿಯ ಕುರಿತು ನಾಟಕ ತೀವ್ರವಾಗಿ ವಿಶ್ಲೇಷಿಸುತ್ತದೆ.

ಮೂಲತಃ ಮಲಯಾಳಂ ಸಾಹಿತ್ಯದ ಖ್ಯಾತ ಲೇಖಕಿ ಕೆಆರ್ ಮೀರಾ ಅವರ “ಭಗವಂತೆ ಮರಣಂ” ಕಥೆಯನ್ನು ಆಧರಿಸಿ ಈ ನಾಟಕ ರೂಪುಗೊಂಡಿದೆ. ನಿರ್ದೇಶಕ ಡಾ.ಸ್ಯಾಮ್ ಕುಟ್ಟಿ ಪಟ್ಟಮಕೇರಿ ಅವರು ಇದನ್ನು ರಂಗರೂಪಕ್ಕೆ ತಂದಿದ್ದು, ಕನ್ನಡಕ್ಕೆ ಅನುವಾದವನ್ನು ಕೆ. ಪ್ರಭಾಕರನ್ ಮಾಡಿದ್ದಾರೆ.

ನಾಟಕದ ಕಥಾ ಹಂದರ
ಸಂಘಟನೆಯೊಂದರ ಕಾರ್ಯಕರ್ತನಾದ ಯುವಕನೊಬ್ಬ ತನ್ನ ಸಂಘಟನೆಯ ಆದೇಶದಂತೆ ಪ್ರೊಫೆಸರ್ರನ್ನು ಹತ್ಯೆ ಮಾಡಲು ಬರುತ್ತಾನೆ. ಆದರೆ ಹತ್ಯೆ ನಡೆಯುವ ಮುನ್ನ ಅವರಿಬ್ಬರ ನಡುವೆ ನಡೆಯುವ ಸಂವಾದವೇ ನಾಟಕದ ಕೇಂದ್ರಬಿಂದು. ಯುವಕನ ಅಂಧಭಕ್ತಿ ಮತ್ತು ಪ್ರೊಫೆಸರ್ನ ತಾರ್ಕಿಕ ಚಿಂತನೆ ಮುಖಾಮುಖಿಯಾಗುತ್ತವೆ. ಈ ಸಂವಾದದ ಮೂಲಕ ಹಿಂಸೆಯಿಂದ ಅಹಿಂಸೆಯತ್ತ, ಅಜ್ಞಾನದಿಂದ ಜ್ಞಾನದತ್ತ ಸಾಗುವ ಆಂತರಿಕ ಪಯಣವನ್ನು ನಾಟಕ ನಾಟಕೀಯವಾಗಿ ಕಟ್ಟಿಕೊಡುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ನಡೆದ ಚಿಂತಕರ ಹತ್ಯೆಗಳ ನೆನಪನ್ನು ತರುವ ಈ ನಾಟಕ, ಹಿಂಸೆ ಮತ್ತು ಅಹಿಂಸೆಯ ನಡುವಿನ ದಾರ್ಶನಿಕ ವಾಗ್ವಾದವಾಗಿ ವಿಸ್ತಾರವಾಗುತ್ತದೆ. ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯ ನಿರರ್ಥಕತೆಯನ್ನು ನಾಟಕ ಸ್ಪಷ್ಟವಾಗಿ ಒತ್ತಿ ಹೇಳುತ್ತದೆ.

ಪ್ರದರ್ಶನ ವಿವರ
‘ಭಗವಂತನ ಮರಣ’ ನಾಟಕದ ಪ್ರದರ್ಶನಗಳು ಫೆಬ್ರವರಿ 22 ಮತ್ತು 26, 2026 ರಂದು ಬೆಂಗಳೂರಿನಲ್ಲಿ ನಡೆಯಲಿವೆ.
ಫೆ. 22, 2026 – ಸಂಜೆ 7.00 ಗಂಟೆಗೆ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

ಫೆ. 26, 2026 – ಸಂಜೆ 7.30 ಗಂಟೆಗೆ
ಸ್ಥಳ: ರಂಗ ಶಂಕರ, ಬೆಂಗಳೂರು

ಟಿಕೆಟ್ಗಳು ಬುಕ್ಮೈಶೋ ಮೂಲಕ ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ 7411172550 / 99454 67572 ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಸಮಕಾಲೀನ ಸಾಮಾಜಿಕ ಪರಿಸ್ಥಿತಿಯಲ್ಲಿ ಸಂವಾದ ಮತ್ತು ಚಿಂತನೆಯ ಅಗತ್ಯವನ್ನು ನೆನಪಿಸುವ ‘ಭಗವಂತನ ಮರಣ’ ನಾಟಕ, ರಂಗಭೂಮಿ ಪ್ರೇಮಿಗಳು ಮತ್ತು ಸಮಾಜದ ಬಗ್ಗೆ ಕಾಳಜಿ ಇರುವವರ ಗಮನ ಸೆಳೆಯುವ ನಿರೀಕ್ಷೆಯಿದೆ.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು