Wednesday, March 4, 2026

ಸತ್ಯ | ನ್ಯಾಯ |ಧರ್ಮ

ಇರಾನ್ ಕ್ಷಿಪಣಿ ದಾಳಿ: ಖತಾರ್‌ನಲ್ಲಿ ಅಮೆರಿಕದ ಬೃಹತ್ ರಾಡಾರ್ ಕೇಂದ್ರ ಧ್ವಂಸ

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಖತಾರ್‌ನಲ್ಲಿರುವ ಅಮೆರಿಕದ ಅತ್ಯಂತ ದೊಡ್ಡ ರಾಡಾರ್ ಕೇಂದ್ರವನ್ನು ನಿಖರ ಕ್ಷಿಪಣಿ ದಾಳಿಯ ಮೂಲಕ ಸಂಪೂರ್ಣವಾಗಿ ಧ್ವಂಸಗೊಳಿಸಿರುವುದಾಗಿ ಘೋಷಿಸಿದೆ. ಖತಾರ್ ಅಧಿಕಾರಿಗಳು ಕೂಡ ಈ ದಾಳಿಯನ್ನು ದೃಢಪಡಿಸಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧದಲ್ಲಿ ಈಗ ಅತ್ಯಂತ ಮೌಲ್ಯಯುತವಾದ ಸೈನಿಕ ಸಾಮಗ್ರಿ ಮತ್ತು ಮೂಲಸೌಕರ್ಯಗಳು ನಾಶವಾಗುತ್ತಿವೆ.

ಅಮೆರಿಕವು ತನ್ನ ಮಿತ್ರರಾಷ್ಟ್ರವಾದ ಖತಾರ್‌ನ ‘ಅಲ್ ಉದೈದ್’ ಏರ್‌ಬೇಸ್‌ನಲ್ಲಿ ಸುಮಾರು 9,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ‘AN/FPS-132’ ರಾಡಾರ್ ಕೇಂದ್ರವನ್ನು ನಿರ್ವಹಿಸುತ್ತಿತ್ತು. ಇದು 5,000 ಕಿಲೋಮೀಟರ್ ವ್ಯಾಪ್ತಿಯವರೆಗೆ ಶತ್ರುಗಳ ಯುದ್ಧ ವಿಮಾನಗಳು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿತ್ತು.

ಈ ಪ್ರಮುಖ ರಾಡಾರ್ ಧ್ವಂಸಗೊಂಡಿರುವುದು ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಮಿಲಿಟರಿ ನಿಘಾ ಚಟುವಟಿಕೆಗಳಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದುವರೆಗೆ ಇರಾನ್‌ನ ಕ್ಷಿಪಣಿ ಚಟುವಟಿಕೆಗಳ ಮೇಲೆ ಕಣ್ಣಿಡಲು ಈ ವ್ಯವಸ್ಥೆಯನ್ನು ಬಳಸಲಾಗುತ್ತಿತ್ತು. ಈಗ ಇದರ ನಾಶವು ಅಮೆರಿಕದ ಮಿತ್ರರಾಷ್ಟ್ರಗಳ ವಾಯು ರಕ್ಷಣಾ ವ್ಯವಸ್ಥೆಗೂ ಭಾರಿ ಪೆಟ್ಟು ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page