Saturday, March 14, 2026

ಸತ್ಯ | ನ್ಯಾಯ |ಧರ್ಮ

ಬೆಂಗಳೂರಿಗೆ ಅಭಿವೃದ್ಧಿ ಅಲ್ಲ, ನಿಯಂತ್ರಣ ಪ್ರಾಧಿಕಾರ ಬೇಕು

“..ಕನ್ನಡ ನಾಡೆಂದರೆ “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್” ಎಂಬ ಕವಿರಾಜಮಾರ್ಗದ ಕವಿವಾಣಿ ತಿಳಿದಿದೆ, ವಿನಃ ಬರೀ ಈ ವಿಶಾಲ ಬೆಂಗಳೂರು ಮಾತ್ರವೇ ಅಲ್ಲ..” ಅಬಿ ಒಕ್ಕಲಿಗ, ನಾವು Dravida ಕನ್ನಡಿಗರು ಚಳುವಳಿಯ ಮುಂದಾಳು

ಕಿಕ್ಕಿರಿದು ತುಂಬಿ ತುಳುಕುತ್ತಿರುವ ಬೆಂಗಳೂರಿಗೆ ಬೇಕಿರುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಲ್ಲ ಬದಲಾಗಿ ಬೆಂಗಳೂರು ನಿಯಂತ್ರಣ ಪ್ರಾಧಿಕಾರ. ಕನ್ನಡ ನಾಡಿನ 31 ಜಿಲ್ಲೆಯ ಜನರು ಮಾತ್ರವೇ ಇದ್ದಿದ್ದರೆ ಈ ಮಾತು ಅಪ್ರಸ್ತುತವಾಗುತ್ತಿತ್ತು. ಆದರೆ ಇಲ್ಲಿ ತುಂಬಿರುವುದು ತುಂಬುತ್ತಿರುವುದು ಬೇರೆ ಬೇರೆ ರಾಜ್ಯದ ಜನರು. ಅದರಲ್ಲೂ ತಮ್ಮ ನಾಡಿನ ನುಡಿಗಳನ್ನು ಹಿಂದಿಗೆ ಅಡವಿಟ್ಟಿರುವ ನಾರ್ತ್ ಇಂಡಿಯನ್ಸ್. ಇವರ ಸಂಖ್ಯೆ ಹೆಚ್ಚಿದಂತೆಲ್ಲ ಬೆಂಗಳೂರು ಕೇಂದ್ರಾಡಳಿತ ಪ್ರದೇಶ ಆಗೋದಕ್ಕೆ ಸಮೀಪಿಸುತ್ತಿದೆ ಎಂದರ್ಥ.

1537 ರಲ್ಲಿ ಕೆಂಪೇಗೌಡರು ಮಾರುಕಟ್ಟೆಗಳ ಕಟ್ಟುವುದರ ಮೂಲಕ ಈ ಊರನ್ನು ವಿಸ್ತಾರ ಮಾಡಿದರು, ವಿಶೇಷ ಮಾಡಿದರು. 1761 ರಿಂದ 1799 ರ ಕಾಲದಲ್ಲಿ ಹೈದರ್ ಟಿಪ್ಪು ಮತ್ತಷ್ಟು ಮೆರಗು ತಂದರು.ತದನಂತರ ಬ್ರಿಟಿಷ್ನವರು ತಮ್ಮ ಸೇನಾ ಗುಂಪುಗಳು ಇಲ್ಲೇ ಬೀಡು ಬಿಟ್ಟು ಗಟ್ಟಿಗೊಂಡರು, ಬೆಂಗಳೂರನ್ನು ಗಟ್ಟಿಗೊಳಿಸಿದರು.1831 ರಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಆಡಳಿತವನ್ನು ಬದಲಾಯಿಸಿ  ಇಂದಿಗೂ ಬೆಂಗಳೂರು ನಾಗಾಲೋಟದಿಂದ ಮುನ್ನುಗ್ಗುವಂತೆ ಮಾಡಿದ್ದಾರೆ.

1956 ರಲ್ಲಿ ಕನ್ನಡನಾಡು ಏಕೀಕರಣವಾದ ಸಮಯದಲ್ಲಿ, ನಾಡಿನ ಮಧ್ಯ ಭಾಗ ದಾವಣಗೆರೆ ರಾಜಧಾನಿ ಆಗಬೇಕಿತ್ತು, ಆದರೆ ಆಗಲೇ ಬೆಳೆದಿದ್ದ ಬೆಂಗಳೂರು ಅದಕ್ಕೆ ಅವಕಾಶ ಕೊಡಲಿಲ್ಲ. ಬ್ರಿಟಿಷ್ ಆಡಳಿತ ಇದ್ದರೂ ಕೂಡ ಅದರಡಿಯಲ್ಲಿಯೇ ಉತ್ತಮ ಅಭಿವೃದ್ಧಿ ಪಡಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಕೇವಲ ಮೈಸೂರನ್ನು ಅಭಿವೃದ್ಧಿ ಪಡಿಸಲಿಲ್ಲ ಬೆಂಗಳೂರಿನಲ್ಲಿ H A L, SANDAL SOAP FACTORY, IISC ಇನ್ನು ಬೇರೆ ಬೇರೆ ಯೋಜನೆಗಳನ್ನು ಮಾಡಿದರು. ಬರಿ ಮೈಸೂರು – ಬೆಂಗಳೂರು ಮಾತ್ರವಲ್ಲದೆ ಅಂದಿನ ಮೈಸೂರು ದೇಶದ ಸುತ್ತಗಲಕ್ಕೂ ಅಭಿವೃದ್ಧಿ ಕೆಲಸಗಳನ್ನು ವಿಸ್ತರಿಸಿ ಭದ್ರಾವತಿ ಪೇಪರ್ ಮಿಲ್, ಕೆಜಿಎಫ್ ಚಿನ್ನದ ಗಣಿ, ಚಿತ್ರದುರ್ಗ ವಾಣಿವಿಲಾಸ ಅಣೆಕಟ್ಟೆ, ಮಂಡ್ಯದ ಕೆ ಆರ್ ಎಸ್ ಡ್ಯಾಮ್, ಶುಗರ್ ಫ್ಯಾಕ್ಟರಿ ಇವೆಲ್ಲವೂ ಒಂದು ನಾಡಿನ ಸಮಗ್ರ ಅಭಿವೃದ್ಧಿಗೆ ಮಾದರಿ ಮತ್ತು ಪುರಾವೆಗಳು.

1947ರಲ್ಲಿ ಬ್ರಿಟಿಷರ ಓಡಿಸಿ,  ಪ್ರಜಾಪ್ರಭುತ್ವ ಜಾರಿಗೊಳಿಸಿಕೊಂಡು. 1950 ರಿಂದ ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ಜಾರಿಗೊಳಿಸಿಕೊಂಡು, 1952 ರಲ್ಲಿ ಪ್ರತಿನಿಧಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಿಕೊಂಡರು ಕೂಡ ಕನ್ನಡ ಮಾತನಾಡುವ ಜನರಿಗಾಗಿ ಒಂದು ನಾಡು ಅಂತಾಗಿದ್ದು ಏಕೀಕರಣ ಕರ್ನಾಟಕ 1956 ನವಂಬರ್ ಒಂದರಿಂದ. ಈ ಸಮಯದಲ್ಲಿ ಮೈಸೂರು ದೇಶದಿಂದ ಮೈಸೂರು ರಾಜ್ಯವಾಗಿ ಕೆಳದರ್ಜೆಗೆ ಇಳಿದೆವು, ಆದರೆ ಕನ್ನಡಿಗರು ವಾಸಿಸುವ ಸೀಮೆ ಎಲ್ಲವೂ ಒಗ್ಗೂಡಿತು. ಮೊದಲಿಗೆ ಮದ್ರಾಸ್ ದೇಶದಿಂದ ಮೈಸೂರು ದೇಶಕ್ಕೆ 1953ರಲ್ಲಿ ಸೇರಿದ್ದು ಬಳ್ಳಾರಿ. ಈ ಸೇರುವಿಕೆಗೆ ಬಲಿಯಾಗಿದ್ದು ಏಕೈಕ ವೀರ ಕನ್ನಡಿಗ ರಂಜಾನ್ ಸಾಬ್,  ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು.

ಹೀಗೆ ನಿರ್ಮಾಣಗೊಂಡಿರುವ ನಾಡಿನಲ್ಲಿ ಮತಗಳ ಜಗಳ ಹೆಚ್ಚಿಸಿ ಎಲ್ಲರ ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಕನ್ನಡನಾಡು ನುಡಿ ಕುಗ್ಗಿಸಿ ಹಿಂದಿ ಭಾಷೆಯ – ಹಿಂದಿ ರಾಷ್ಟ್ರ ಮಾಡಲು ಹೊರಟಿದ್ದಾರೆ.

ಇಂಡಿಯಾ ಹಲವು ನಾಡುಗಳ ಒಕ್ಕೂಟವೆ ವಿನಃ ರಾಷ್ಟ್ರವಲ್ಲ, ದೇಶವಲ್ಲ. ಧಾರ್ಮಿಕ ವಿಚಾರಗಳಿಗೆ ಸರ್ಕಾರ ಬೆಂಬಲ ಕೊಡುತ್ತಿದೆ ಜೊತೆಗೆ ಖಾಸಗಿ ಶಾಲಾ-ಕಾಲೇಜುಗಳು, ಖಾಸಗಿ ಆಸ್ಪತ್ರೆ ಕ್ಲಿನಿಕ್ ತೆರೆಯಲು ಅನುಮತಿ ಕೊಡುತ್ತಿದೆ ಇದರಿಂದ ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ಹೆಚ್ಚುತ್ತಿದೆ.

ರಾಜಪ್ರಭುತ್ವದಲ್ಲಿ ರಾಜಧಾನಿಯನ್ನು ಆಕ್ರಮಿಸಿಕೊಂಡರೆ ಇಡೀ ರಾಜ್ಯವೇ ಅವರದಾಗುತ್ತಿತ್ತು ಆದುದರಿಂದ ರಾಜಧಾನಿ ಸುತ್ತ ಕೋಟೆ ಕಟ್ಟಿ, ಸುತ್ತ ನೀರು ಬಿಟ್ಟು, ನೀರಿನಲ್ಲಿ ಮೊಸಳೆ ಇಟ್ಟು ಆ ಕೋಟೆ ಕಾಯಲು ವಿಶೇಷ ಪಡೆ ಕೂಡ ಇರುತ್ತಿತ್ತು ಆಗ. ಭೌತಿಕವಾಗಿ ಕತ್ತಿ ಗುರಾಣಿ ಕದನದಿಂದ ಸರಳವಾಗಿ ಸುಲಭವಾಗಿ ಜನಸಾಮಾನ್ಯರಿಗೆ ಅರ್ಥವಾಗಿ ಬಿಡುತ್ತಿತ್ತು. ನಮ್ಮ ದೇಶ ನಮ್ಮ ರಾಜಧಾನಿ ಅಂತೆಲ್ಲ. ಆದರೆ ಈಗ ಪ್ರಜಾಪ್ರಭುತ್ವ ಅದರಲ್ಲೂ ಪ್ರತಿನಿಧಿ ಪ್ರಜಾಪ್ರಭುತ್ವ ನಮ್ಮೆಲ್ಲರ ಬದಲಿಗೆ ನಮ್ಮ ನಿಮ್ಮ ಮತಕ್ಷೇತ್ರದಿಂದ ಒಬ್ಬರನ್ನು ಆಯ್ಕೆ ಮಾಡಿ ಕಳಿಸಿರುತ್ತೇವೆ ಅವರುಗಳು ಯಾರು ಆಯ್ಕೆ ಮಾಡಿ ಕಳಿಸಿದ್ದಾರೋ ಅವರಿಗೆ ನಿಷ್ಠರಾಗಿರಲು ಆಗುವುದಿಲ್ಲ, ಬದಲಿಗೆ ಮುಂದಿನ ಬಾರಿ ಯಾರು ತನ್ನನ್ನು ಆಯ್ಕೆ ಮಾಡಬಹುದು ಅವರನ್ನು ಸೆಳೆಯಲು ಕಾರ್ಯತಂತ್ರ ರೂಪಿಸುವುದು ಅನಿವಾರ್ಯ ಯಾವುದೇ ಪಕ್ಷದ, ಯಾವುದೇ ಜಾತಿಯ ಚುನಾವಣೆಗೆ ನಿಲ್ಲುವ ಕಲಿಗಳಿಗೆ.

ಚುನಾವಣೆಯಿಂದ ಚುನಾವಣೆಗೆ ತಮ್ಮ ನಾಡಿಮಿಡಿತವಾದ ನಾಡಿನ ನುಡಿಯನ್ನೇ ಹಿಂದಿ ನುಡಿಗೆ ಅಡವಿಟ್ಟಿರುವ ನಾರ್ತ್ ಇಂಡಿಯನ್ಸ್ ಪ್ರತಿ ಕ್ಷೇತ್ರದಲ್ಲೂ ತುಂಬುತ್ತಿದ್ದಾರೆ. ಅದರಲ್ಲೂ ಬೆಂಗಳೂರಿಗೆ ವಿಮಾನದಲ್ಲಿ ಲೂಟಿಕೋರರು, ರೈಲಿನಲ್ಲಿ ಕೂಲಿಕಾರರು ದಿನಂಪ್ರತಿ ಸಾವಿರಾರು ಜನ ಬಂದು ಬೀಡು ಬಿಡುತ್ತಿದ್ದಾರೆ. ಇವರೆಲ್ಲ ತಮ್ಮ ನುಡಿ ಬಿಟ್ಟು ನಮ್ಮ ನಾಡಿನ ನುಡಿ ಅಳವಡಿಸಿಕೊಳ್ಳಲು ಸಿದ್ಧರಾಗಿರುತ್ತಾರೆ ಶುರುವಿನಲ್ಲಿ. ಆದರೆ ಚುನಾವಣೆಗಳು ಕಳೆದಂತೆ ಯಾರೋ ಒಬ್ಬರು ಹೊಸದಾಗಿ ಜನ ಪ್ರತಿನಿಧಿ ಆಗಬೇಕಂಬ ಬಯಕೆ ಉಳ್ಳವರು  ಇವರನ್ನು ಓಲೈಸಲು ಹಿಂದಿಯಲ್ಲಿ ಶಾಲೆ ತರುತ್ತೇನೆ ಎನ್ನುತ್ತಾರೆ. ಹೇಗಿದ್ದರೂ ಇದಕ್ಕೆಲ್ಲ ಸಂವಿಧಾನದ ಬೆಂಬಲ ಕೂಡ ಇದೆ ಮತ್ತು ಯಾವಾಗಲೂ ಇಂಡಿಯಾ ಒಕ್ಕೂಟ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ. ನೀವೇಳಬಹುದು ಏನೇ ಮಾಡಿದರು ಬೆಂಗಳೂರು ಹಿಂದಿ ಅವರದು ಆಗುವುದಿಲ್ಲ ಎಂದು, ಈಗೆ ಮುಂದುವರೆದರೆ ಬೆಂಗಳೂರು ಕನ್ನಡಿಗರದಾಗಿ ಉಳಿಯುವುದಿಲ್ಲ. ರಾಜಧಾನಿಯೆ ಕನ್ನಡಿಗರದಲ್ಲ ಅಂದ ಮೇಲೆ 1956 ರಲ್ಲಿ ಏಕೀಕರಣ ಗೊಂಡಿರುವ ಕನ್ನಡನಾಡು ಹೇಗೆ ಕನ್ನಡಿಗರದಾಗಿ ಉಳಿಯುತ್ತದೆ? ಉಳಿಯಲು ಸಾಧ್ಯ?

ಬಿಬಿಎಂಪಿ ಆಗಿದ್ದ ಬೆಂಗಳೂರು ಈಗ ಜಿಬಿಎ ಬೆಂಗಳೂರು ಆಗಿದೆ. ಈಗಾಗಲೇ ಕಿಕ್ಕಿರಿದು ತುಂಬಿರುವ ಜನಸಂದಣಿ ಜೊತೆಗೆ, ಇನ್ನೂ ಜನಸಂದಣಿ ಬಂದು ಸೇರಿ ಎಂಬ ಕರೆಯೋಲೆಯಂತಿದೆ ಜಿಬಿಎ ಕಾರ್ಯ ಯೋಜನೆಗಳು. ಅಲ್ಪಸ್ವಲ್ಪ ವಿದ್ಯಾಭ್ಯಾಸ ಕಲಿತಿರುವ ಕನ್ನಡಿಗರು 31 ಜಿಲ್ಲೆಯಿಂದಲೂ ಜಿಬಿಎ ಬೆಂಗಳೂರಿಗೆ ಬಂದು ಏರೋಪ್ಲೇನ್ ಮಾಲೀಕರಾಗುವ ಶಕ್ತಿಯು ಇಲ್ಲ, ರಶ್ನಲ್ಲಿ ರೈಲಿನಲ್ಲಿ ಬಂದು ಕೂಲಿಕಾರರಾಗುವ ದುರ್ಬಲತೆಯು ಇಲ್ಲ. ಬಹುತೇಕ ಮಧ್ಯಮ ವರ್ಗದವರಾಗಿರುವ ಕನ್ನಡಿಗರು ಬಯಸೋದು, ಬದುಕುವುದು ತಮ್ಮ ತಮ್ಮ ಸೀಮೆಯಲ್ಲಿಯೆ. ಏಕೆಂದರೆ ಅವರಿಗೆ ಕನ್ನಡ ನಾಡೆಂದರೆ “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್” ಎಂಬ ಕವಿರಾಜಮಾರ್ಗದ ಕವಿವಾಣಿ ತಿಳಿದಿದೆ, ವಿನಃ ಬರೀ ಈ ವಿಶಾಲ ಬೆಂಗಳೂರು ಮಾತ್ರವೇ ಅಲ್ಲ. ಇನ್ನು ಜಿಬಿಎ ಕರೆಯೋಲೆಗೆ ಬರುವವರು ನಾರ್ತ್ ಇಂಡಿಯಾದವರು.

ಬೆಂಗಳೂರು ಖಾಸಗಿ ಕಂಪನಿಗಳಲ್ಲಿ, ಖಾಸಗಿ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರಿಗೆ ಅವಕಾಶ ಕೊಟ್ಟಿದೆ, ಅದೇ ರೀತಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೂ ಅವಕಾಶ ಕೊಟ್ಟಿದೆ. ರಾಜಧಾನಿ ಎನ್ನುವ ಕಾರಣಕ್ಕೆ ಸರ್ಕಾರಿ ಕಚೇರಿಗಳಲ್ಲಿ ಕಾಯಂ ಕೆಲಸಗಳು ಮಾತ್ರವೇ ಕನ್ನಡಿಗರ ಸೊತ್ತಾಗಿದೆ, ಅದರಲ್ಲಿ ಕಾಯಂಗಿಂತ ಗುತ್ತಿಗೆ ಆಧಾರದವರೇ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇವರಲ್ಲಿ ಮುಕ್ಕಾಲು ಪಾಲು ಜನ ಕನ್ನಡೇತರರು. ಇನ್ನು ಖಾಸಗಿ ಕೆಲಸಗಳಲ್ಲಿ ಕನ್ನಡಿಗರು ಕಾಲು ಭಾಗ, ಮುಕ್ಕಾಲು ಭಾಗ ಕನ್ನಡೇತರರು ತುಂಬಿದ್ದಾರೆ, ಇನ್ನು ಮುಂದೆ ಇದೇ ಮುಂದುವರೆಯುತ್ತದೆ ಹೊರತು ಬದಲಾಗುವುದಿಲ್ಲ. ಬೆಂಗಳೂರು ಅಭಿವೃದ್ಧಿ ಎಂದರೆ ಖಾಸಗಿ ಆಗಲಿ, ಸರ್ಕಾರಿ ಆಗಲಿ ಕಚೇರಿಗಳಿಗೆ ಕಾರ್ಖಾನೆಗಳಿಗೆ ಪರವಾನಿಗೆ ಕೊಡುವುದನ್ನು ನಿಲ್ಲಿಸಬೇಕು ಬದಲಿಗೆ ಈ ಎಲ್ಲಾ ಕಚೇರಿಗಳಿಗೆ ಪರವಾನಿಗೆ ಮತ್ತು ಅಗತ್ಯ ಸಹಕಾರ ಸೌಲತ್ತನ್ನು, ಅಂದಾಜು ಕರ್ನಾಟಕದ ಮಧ್ಯದಲ್ಲಿರುವ ಏಕೀಕರಣ ಕರ್ನಾಟಕದ ಕೊಂಡಿ ಊರಾದ ಕನ್ನಡದೂರಿಗೆ ಕೊಡಬೇಕು. ಬೆಂಗಳೂರು ಉಳಿಯಲಿ- ಕನ್ನಡದೂರು ಬೆಳೆಯಲಿ, ಏಕೀಕರಣ ಕರ್ನಾಟಕ – ಕನ್ನಡ ನಾಡು ಎಂದು ಬದಲಾಗಲಿ ಎಂಬುದು ನಮ್ಮ ಧ್ಯೇಯ ವಾಕ್ಯವಾಗಬೇಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page