73 ಮಂದಿ ರಾಜ್ಯಸಭಾ ಸಂಸದರ ಮೇಲೆ ಕ್ರಿಮಿನಲ್ ಪ್ರಕರಣಗಳು: ಎಡಿಆರ್‌ ವರದಿ

ದೆಹಲಿ: ರಾಜ್ಯಸಭೆಯ 229 ಸದಸ್ಯರಲ್ಲಿ 73 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ADR) ವರದಿ ತಿಳಿಸಿದೆ.

27 ಸಂಸದರೊಂದಿಗೆ ಬಿಜೆಪಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ. ರಾಜ್ಯಸಭೆಯ 31 ಸಂಸದರ ಆಸ್ತಿ 1,000 ಕೋಟಿ ರೂಪಾಯಿಗಿಂತ ಹೆಚ್ಚಿದೆ ಮತ್ತು ಅನೇಕರ ಆಸ್ತಿ 100 ಕೋಟಿ ರೂಪಾಯಿಗಿಂತ ಅಧಿಕವಾಗಿದೆ ಎಂದು ವರದಿ ಬಹಿರಂಗಪಡಿಸಿದೆ.

ರಾಜ್ಯಸಭೆಗೆ ಹೊಸದಾಗಿ 37 ಮಂದಿ ಆಯ್ಕೆಯಾಗಿದ್ದು, ಎಲ್ಲಾ ಸಂಸದರ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ADR ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ 73 ಸಂಸದರಲ್ಲಿ 36 ಮಂದಿಯ ಮೇಲೆ ಗಂಭೀರ ಸ್ವರೂಪದ ಅಪರಾಧ ಆರೋಪಗಳಿವೆ. ಒಬ್ಬ ಸಂಸದನ ಮೇಲೆ ಕೊಲೆ ಪ್ರಕರಣ, ನಾಲ್ವರು ಸಂಸದರ ಮೇಲೆ ಕೊಲೆ ಯತ್ನ ಪ್ರಕರಣ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮೂವರು ಸಂಸದರು ಪಟ್ಟಿಯಲ್ಲಿದ್ದಾರೆ ಎಂದು ವರದಿ ಹೇಳಿದೆ.

ಸಂಸದರ ಸರಾಸರಿ ಆಸ್ತಿ 120.69 ಕೋಟಿ ರೂಪಾಯಿಗಳೆಂದು ತಿಳಿಸಲಾಗಿದೆ. ಅತ್ಯಧಿಕವಾಗಿ ಒಬ್ಬ ಸಂಸದ ತನ್ನ ಅಫಿಡವಿಟ್‌ನಲ್ಲಿ 5,300 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು