ಡಾಲರ್ ಎದುರು ರೂಪಾಯಿ ಪಾತಾಳಕ್ಕೆ ಜಿಗಿತ : 94.82 ರ ಹೊಸ ದಾಖಲೆಯ ಕನಿಷ್ಠ ಮಟ್ಟ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಉದ್ವಿಗ್ನತೆ, ಕದನ ವಿರಾಮದ ಅನಿಶ್ಚಿತತೆ ಹಾಗೂ ಜಾಗತಿಕ ತೈಲ ದರ ಏರಿಕೆಯ ಪರಿಣಾಮವಾಗಿ ಭಾರತೀಯ ರೂಪಾಯಿ ಮೌಲ್ಯವು ಸತತ ಕುಸಿತದ ದಾರಿಗೆ ಸಿಲುಕಿದೆ. ಶುಕ್ರವಾರವೂ ರೂಪಾಯಿ ಮೌಲ್ಯವು ಮತ್ತಷ್ಟು ಕುಸಿದು ಡಾಲರ್ ಎದುರು 86 ಪೈಸೆ ಇಳಿಕೆ ಕಂಡು 94.82ಕ್ಕೆ ತಲುಪಿದ್ದು, ಇದು ರೂಪಾಯಿ ಇತಿಹಾಸದಲ್ಲೇ ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 94.18ರಲ್ಲಿ ದಿನದ ವಹಿವಾಟು ಆರಂಭಿಸಿತು. ಆದರೆ ದಿನಾಂತ್ಯಕ್ಕೆ 86 ಪೈಸೆ ಕುಸಿದು 94.82ಕ್ಕೆ ತಲುಪಿತು. ಇದಕ್ಕೂ ಮುನ್ನ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 94.50 ಮಟ್ಟಕ್ಕೂ ಇಳಿಕೆಯಾಗಿತ್ತು.

ಇನ್ನು ಕಳೆದ ಬುಧವಾರವೂ ರೂಪಾಯಿ 20 ಪೈಸೆ ಕುಸಿದು 93.96ಕ್ಕೆ ತಲುಪಿದ್ದು, ನಿರಂತರ ಕುಸಿತದ ಪ್ರವೃತ್ತಿ ಮಾರುಕಟ್ಟೆಯಲ್ಲಿ ಆತಂಕವನ್ನು ಹೆಚ್ಚಿಸಿದೆ. ತೈಲದ ಬೆಲೆ ಏರಿಕೆ ಹಾಗೂ ಜಾಗತಿಕ ಆರ್ಥಿಕ ಅನಿಶ್ಚಿತತೆ ರೂಪಾಯಿ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ವಿಶ್ಲೇಷಕರ ಪ್ರಕಾರ, ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮುಂದುವರಿದರೆ ರೂಪಾಯಿ ಮೇಲಿನ ಒತ್ತಡ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು