Friday, June 14, 2024

ಸತ್ಯ | ನ್ಯಾಯ |ಧರ್ಮ

ಕಾಲೇಜು ಶುಲ್ಕ ಪಾವತಿಸಲು ಹಣದ ಕೊರತೆ: ಬಾಲಕನನ್ನು ಕಿಡ್ನ್ಯಾಪ್‌ ಮಾಡಿದ ಯುವಕರು

ಬೆಂಗಳೂರು : ಹಣದ ಸಮಸ್ಯೆಯಿಂದ ಕಾಲೇಜು ಶುಲ್ಕ ಕಟ್ಟಲು ಆಗದೆ ಬಾಲಕನನ್ನು ಕಿಡ್ನಾಪ್‌ ಮಾಡಿ ಹಣ ಸುಲಿಗೆ ಮಾಡಿದವರನ್ನು ಸಂಪಿಗೆಹಳ್ಳಿ ಪೋಲೀಸರು ಬಂಧಿಸಿದ್ದಾರೆ.

ಗುಡಿಬಂಡೆಯ ಸುನಿಲ್ ಕುಮಾರ್‌(23) ಮತ್ತು ಚಿಕ್ಕಬಳ್ಳಾಪುರದ ಮಂಡಿಕಲ್‌ನ ವೈ ವಿ ನಾಗೇಶ್‌ ಎಂಬುವವರು ಕಾಲೇಜು ಶುಲ್ಕ ಕಟ್ಟಲು ಹಣವಿಲ್ಲದೆ, ಮಾನ್ಯತಾ ಲೇಔಟ್‌ನಲ್ಲಿ ವಾಸವಿದ್ದ ಖಾಸಗಿ ಕಂಪನಿಯ ಮ್ಯಾನೇಜರ್‌ ರಮೇಶ್‌ ಬಾಬು ಅವರ 14 ವರ್ಷದ ಭವೇಶ್‌ನನ್ನು ಕಿಡ್ನಾಪ್‌ ಮಾಡಿದ್ದು, ಪೋಷಕರಿಂದ 15 ಲಕ್ಷರೂ ಪಡೆದು ಮಗನನ್ನು ಜೀವಂತವಾಗಿ ಮನೆಗೆ ಕಳುಹಿಸಿದ್ದಾರೆ. ಮಗ ಮನೆಗೆ ಬಂದ ನಂತರ ಪೋಲೀಸರಿಗೆ ಕಿಡ್ನಾಪ್‌ ಮಾಡಿದವರ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ತನಿಖೆ ಮಾಡಿದ ಪೋಲೀಸರು ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್‌ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

ಹಿನ್ನಲೆ: 14 ವರ್ಷದ ಮಗ ಒಬ್ಬನೇ ತಳಮಹಡಿಯ ಕೋಣೆಯಲ್ಲಿ ಮಲಗುತ್ತಿದ್ದುದ್ದನ್ನು ನೋಡಿದ ಯುವಕರು ಸೆಪ್ಟಂಬರ್‌ 2 ರಂದು ಮಾಸ್ಕ್‌ ಧರಿಸಿ ಬಂದು ಬಾಗಿಲು ಬಡಿದಿದ್ದಾರೆ. ಭವೇಶ್‌ನನ್ನು ಹೆದರಿಸಿದ ದುಷ್ಕರ್ಮಿಗಳು ತಂದೆಯ ಕಾರಿನ ಕೀ ಪಡೆದು ಅದೇ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿಕೊಂಡು ಪರಾರಿಯಾಗಿದ್ದಾರೆ. ಮಾರನೇ ದಿನ ಭವೇಶ್‌ ಮೊಬೈಲ್‌ನಿಂದ ಕರೆ ಮಾಡಿ 15 ಲಕ್ಷ ರೂ ನೀಡಬೇಕು, ಇಲ್ಲದಿದ್ದರೆ ಮಗನನ್ನು ಸಾಯಿಸುವಂತೆ ಬ್ಲಾಕ್‌ಮೇಲ್‌ ಮಾಡಿದ್ದಾರೆ. ಇದರಿಂದ ಹೆದರಿದ ಪೋಷಕರು ದುಷ್ಕರ್ಮಿಗಳ ಸೂಚನೆಯಂತೆ 15 ಲಕ್ಷ ರೂಗಳನ್ನು ಬ್ಯಾಗ್‌ನಲ್ಲಿಟ್ಟು ನೆಲಮಂಗಲ ಸಮೀಪದ ರೈಲ್ವೇ ಟ್ರ್ಯಾಕ್‌ ಬಳಿ ಇಟ್ಟು ತನ್ನ ಮಗನನ್ನು ಸುರಕ್ಷಿತವಾಗಿ ಮನೆಗೆ ಕರೆದು ಕೊಂಡಿದ್ದಾರೆ.

ಘಟನೆಯ ನಂತರ ಭವೇಶ್‌ನ ತಂದೆ ರಮೇಶ್‌ ಸಂಪಿಗೆಹಳ್ಳಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ ಪೋಲೀಸರು ಕಿಡ್ನ್ಯಾಪ್‌ ಮಾಡಿದ್ದ ಮನೆಯ ಸಮೀಪದ ಸಿಸಿಟಿವಿ ದೃಶ್ಯಾವಳಿ ಮುಖಾಂತರ ಮತ್ತಿತರ ಮಾಹಿತಿಗಳನ್ನು ಆಧರಿಸಿ ಯಲಹಂಕದಲ್ಲಿ ವಾಸವಿದ್ದ ಸುನಿಲ್‌ಕುಮಾರ್‌ ಮತ್ತು ನಾಗೇಶ್‌ ಅವರನ್ನು ಬಂಧಿಸಿದ್ದಾರೆ.

ಈ ಕುರಿತು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು,  ಅವರು ಕದ್ದಿದ್ದ ಒಂದು ಕಾರು, 9.69 ಲಕ್ಷ ರೂ ನಗದು, ಎರಡು ಬೈಕ್‌ ಮತ್ತು ಒಂದು ಕ್ಯಾಮೆರವನ್ನು ವಶಪಡಿಸಿಕೊಂಡಿಸಿದ್ದಾರೆ. ಕಾಲೇಜು ಶುಲ್ಕ ಪಾವತಿಸಲು ಹಣ ಹೊಂದಿಸುವುದಕ್ಕಾಗಿ ಕಿಡ್ನ್ಯಾಪ್‌ ಕೃತ್ಯ ಎಸಗಿದ್ದಾಗಿ ಬಂಧಿತ ಸುನಿಲ್‌ ಕುಮಾರ್‌ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೋಲೀಸ್‌ ಅಧಿಕಾರಿಗಳು ಹೇಳಿದರು.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಇದನ್ನು ನೋಡಿ: ಸರ್ಕಾರ ನಿಜಕ್ಕೂ 40% ಕಮಿಷನ್‌ ಪಡೆಯುತ್ತಿದೆಯೇ? ಈ ಕುರಿತು ಯುವ ರಾಜಕೀಯ ಮುಂದಾಳು ಸುರೇಶ್‌ ರಾಥೋಡ್‌ ಅವರ ವಿಶ್ಲೇಷಣೆ ಇಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು