ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಪರ್ವ ಆರಂಭ: ಶಾಸಕರಾಗಿ ಸಿಎಂ ಪ್ರಮಾಣವಚನ ಸ್ವೀಕಾರ

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಒಂಬತ್ತು ಮಂದಿ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸೇರಿದಂತೆ ನೂತನವಾಗಿ ಆಯ್ಕೆಯಾದ ಶಾಸಕರು ಸೋಮವಾರ ವಿಧಾನಸಭೆಯಲ್ಲಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು.

ತಾತ್ಕಾಲಿಕ ಸಭಾಧ್ಯಕ್ಷ (ಪ್ರೊ-ಟೆಮ್ ಸ್ಪೀಕರ್) ಎಂ.ವಿ. ಕರುಪ್ಪಯ್ಯ ಅವರು ನೂತನ ಶಾಸಕರಿಗೆ ಪ್ರಮಾಣವಚನ ಬೋಧಿಸಿದರು. ಬೆಳಿಗ್ಗೆ 9.30ಕ್ಕೆ ಪ್ರೊ-ಟೆಮ್ ಸ್ಪೀಕರ್ ಅವರ ಪರಿಚಯಾತ್ಮಕ ಭಾಷಣದೊಂದಿಗೆ ಶಾಸಕರ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಆರಂಭವಾಯಿತು.

ಮುಖ್ಯಮಂತ್ರಿ ವಿಜಯ್ ಅವರು ಶಾಸಕರಾಗಿ ಮೊದಲಿಗರಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಎನ್. ಆನಂದ್ ಮತ್ತು ಆಧವ್ ಅರ್ಜುನ ಸೇರಿದಂತೆ ಒಂಬತ್ತು ಮಂದಿ ಸಚಿವರು ಶಾಸಕರಾಗಿ ಪ್ರಮಾಣವಚನ ಪಡೆದರು.

ಬಳಿಕ ಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ, ಮಾಜಿ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಹಾಗೂ ಎಐಎಡಿಎಂಕೆಯ ಅಗ್ರಿ ಕೃಷ್ಣಮೂರ್ತಿ ಮತ್ತು ಕೆ.ಪಿ. ಅನ್ಬಳಗನ್ ಸೇರಿದಂತೆ ಇತರ ಪ್ರಮುಖ ನಾಯಕರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.

Related Articles

ಇತ್ತೀಚಿನ ಸುದ್ದಿಗಳು