ದಳಪತಿ ಕ್ಯಾಬಿನೆಟ್; ಕ್ಯಾಸ್ಟ್ ಕೆಮಿಸ್ಟ್ರಿಯ ಹೊಸ ಅಧ್ಯಾಯ!

“..ವಿಜಯ್ ಅವರು ರಚಿಸಿರುವ 35 ಮಂದಿಯ ಹೊಸ ಕ್ಯಾಬಿನೆಟ್ ಇದೆಯಲ್ಲ… ಇದು ಇಡೀ ಇಂಡಿಯನ್ ಪಾಲಿಟಿಕ್ಸ್‌ಗೆ ಹೊಸ ಬೆಂಚ್‌ಮಾರ್ಕ್! ದಲಿತರಿಗೆ, ಯುವಕರಿಗೆ, ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವರು ಕೊಟ್ಟಿರೋ ಪ್ರಾತಿನಿಧ್ಯದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ..” ಲೇಖಕರಾದ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ

ತಮಿಳುನಾಡು ಪಾಲಿಟಿಕ್ಸ್‌ನಲ್ಲಿ ಈಗ ಬರೀ ಒಂದೇ ಹೆಸರು ಟ್ರೆಂಡಿಂಗ್-ಅದೇ ‘ದಳಪತಿ’ ಸಿ. ಜೋಸೆಫ್ ವಿಜಯ್! ಸ್ಟೀನ್ ಮೇಲೆ ಬ್ಲಾಕ್ ಆ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದ ವಿಜಯ್, ಈಗ ರಿಯಲ್ ಲೈಫ್ ರಾಜಕಾರಣದಲ್ಲೂ ಅಕ್ಷರಶಃ ‘ಮಾಸ್ಟರ್ ಸ್ಟೋಕ್ ಕೊಟ್ಟಿದ್ದಾರೆ. ಬರೋಬ್ಬರಿ 59 ವರ್ಷಗಳ ಹಳೇ ದ್ರಾವಿಡ ರಾಜಕಾರಣದ ರೆಕಾರ್ಡ್‌ಗಳನ್ನು ಒಂದೇ ಏಟಿಗೆ ಧೂಳಿಪಟ ಮಾಡಿ, 2026 ರ ಎಲೆಕ್ಷನ್‌ನಲ್ಲಿ ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಪಾರ್ಟಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ್ದಾರೆ.

ಆದರೆ, ಇಲ್ಲಿ ಅಸಲಿ ಮ್ಯಾಜಿಕ್ ಇರೋದು ಕೇವಲ ಎಲೆಕ್ಷನ್ ಗೆಲುವಿನಲ್ಲಿ ಮಾತ್ರವಲ್ಲ! ವಿಜಯ್ ಅವರು ರಚಿಸಿರುವ 35 ಮಂದಿಯ ಹೊಸ ಕ್ಯಾಬಿನೆಟ್ (ಸಚಿವ ಸಂಪುಟ) ಇದೆಯಲ್ಲ… ಇದು ಇಡೀ ಇಂಡಿಯನ್ ಪಾಲಿಟಿಕ್ಸ್‌ಗೆ ಹೊಸ ಬೆಂಚ್‌ಮಾರ್ಕ್! ದಲಿತರಿಗೆ, ಯುವಕರಿಗೆ, ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವರು ಕೊಟ್ಟಿರೋ ಪ್ರಾತಿನಿಧ್ಯದ ಕಂಪ್ಲೀಟ್ ಡೀಟೇಲ್ಸ್ ಮತ್ತು ಕ್ಯಾಸ್ಟ್ ಕೆಮಿಸ್ಟ್ರಿಯ ಕಂಪ್ಲಿಟ್ ಡೀಟೈಲ್ಸ್ ಇಲ್ಲಿದೆ. ಸ್ಕಿಪ್ ಮಾಡದೆ ಓದಿ!

ದ್ರಾವಿಡ ಕೋಟೆ ಪುಡಿಪುಡಿ, ವಿಜಯ್ ಸುನಾಮಿ ಎಂಟ್ರಿ!
ಏಪ್ರಿಲ್ 2026 ರಲ್ಲಿ ನಡೆದ ಎಲೆಕ್ಷನ್‌ನಲ್ಲಿ ತಮಿಳುನಾಡು ಜನತೆ ಶೇ. 85.1 ರಷ್ಟು ಬಂಪರ್ ವೋಟಿಂಗ್ ಮಾಡಿದ್ದರು. ಪೊಲಿಟಿಕಲ್ ಪಂಡಿತರೆಲ್ಲ ಶಾಕ್ ಆಗುವಂತೆ ಒಟ್ಟು 234 ಸೀಟುಗಳ ಪೈಕಿ ಟಿವಿಕೆ (TVK) ಏಕಾಂಗಿಯಾಗಿ 108 ಸೀಟುಗಳನ್ನು ಗೆದ್ದು ಬಿಗ್ ಬಾಸ್ ಆಗಿ ಹೊರಹೊಮ್ಮಿತು!. ಈ ಮೂಲಕ ಶೇ. 34.92 ರಷ್ಟು ವೋಟ್ ಶೇರ್ ವಿಜಯ್ ಪಾಲಾಯಿತು.

ದಶಕಗಳಿಂದ ಆಳುತ್ತಿದ್ದ ಎಂ.ಕೆ. ಸ್ಟಾಲಿನ್ ನೇತೃತ್ವದ DMK ಕೇವಲ 59 ಸೀಟುಗಳಿಗೆ ಕುಸಿದರೆ, AIADMK 47 ಸೀಟುಗಳಿಗೆ ತೃಪ್ತಿಪಡಬೇಕಾಯಿತು. ಇದರಲ್ಲಿ ಅತಿ ದೊಡ್ಡ ಟ್ವಿಸ್ಟ್ ಎಂದರೆ, ಸಾಕ್ಷಾತ್ ಮುಖ್ಯಮಂತ್ರಿ ಸ್ಟಾಲಿನ್ ಅವರೇ ತಮ್ಮ ಭದ್ರಕೋಟೆ ‘ಕೊಳತ್ತೂರ್’ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಎದುರು ಸೋಲು ಕಂಡಿದ್ದು!.

ಈ ಲೆವೆಲ್‌ನ ಸುನಾಮಿಗೆ ಕಾರಣ ಯಾರು ಗೊತ್ತಾ? ಮವ್ವತ್ತರಿಂದ ನಲವತ್ತು ವರ್ಷದೊಳಗಿನ ಯುವಕರು, ಅರ್ಥಾತ್ ‘ಜೆನ್-ಝೀ’ (Gen-Z) ವೋಟರ್ಸ್, ಮತ್ತು ದಲಿತ ಸಮುದಾಯ! ತಮಿಳುನಾಡಿನಲ್ಲಿರುವ 46 ಮೀಸಲು (SC/ST) ಕ್ಷೇತ್ರಗಳಲ್ಲಿ ಟಿವಿಕೆ ಬರೋಬ್ಬರಿ 24 ಕ್ಷೇತ್ರಗಳನ್ನು ಗೆದ್ದು ಹೊಸ ಇತಿಹಾಸ ಬರೆದಿದೆ.

‘ಸೆಂಟರ್-ಲೆಫ್ಟ್’ ಮತ್ತು ಸಾಮಾಜಿಕ ನ್ಯಾಯದ ರಿಯಲ್ ಆಟ!
ಯಾವುದೇ ಪಾರ್ಟಿ ಸ್ಟ್ರಾಂಗ್ ಆಗಿ ನಿಲ್ಲೋದು ಅದರ ಸಿದ್ದಾಂತದ ಮೇಲೆ. ವಿಜಯ್ ಪಾರ್ಟಿಯ ಘೋಷವಾಕ್ಯ ರಾಕ್ಯ “ಪಿರಪ್ಪೋಕ್ಕುಂ ಎಲ್ಲಾ ಉಯಿರ್ಕ್ಕುಂ” (ಹುಟ್ಟುವ ಎಲ್ಲಾ ಜೀವಿಗಳೂ ಸಮಾನ), ಫೆಬ್ರವರಿ 2025 ರಲ್ಲೇ ವಿಜಯ್ ಅವರು ಪೆರಿಯಾರ್, ಅಂಬೇಡ್ಕರ್, ಮತ್ತು ಕಾಮರಾಜ್ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಿ ತಮ್ಮ ಪಾರ್ಟಿಯ ಐಡಿಯಾಲಜಿಯನ್ನು ‘ಸೆಂಟರ್-ಲೆಫ್ಟ್’ (Centre-left) ಅಂತ ಕ್ಲಿಯರ್ ಆಗಿ ಹೇಳಿದ್ದರು. ಬಲಪಂಥೀಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿರುವ ಟಿವಿಕೆ, ಈಗ ಆ ಸಾಮಾಜಿಕ ನ್ಯಾಯವನ್ನು ತಮ್ಮ ಕ್ಯಾಬಿನೆಟ್‌ನಲ್ಲಿ ರಿಯಲ್ ಆಗಿ ಜಾರಿಗೆ ತಂದಿದೆ.

ಮೈತ್ರಿಧರ್ಮದ ಹೊಸ ಟ್ರೆಂಡ್: 35 ಮಂತ್ರಿಗಳ ಮೆಗಾ ಕ್ಯಾಬಿನೆಟ್
ಸಂವಿಧಾನದ ಪ್ರಕಾರ ಗರಿಷ್ಠ 35 ಮಂದಿ ಮಂತ್ರಿಗಳಾಗಬಹುದು. ವಿಜಯ್ ತಮ್ಮ ಈ ಕಂಪ್ಲೇಟ್ ಕೋಟಾವನ್ನು ಯೂಸ್ ಮಾಡಿಕೊಂಡು ಮೇ 10, ಮೇ 21, ಮತ್ತು ಮೇ 22 ರಂದು ಮೂರು ಹಂತಗಳಲ್ಲಿ ಸಂಪುಟ ವಿಸ್ತರಣೆ ಮಾಡಿದರು.

ವಿಶೇಷವೆಂದರೆ, ಟಿವಿಕೆ ಪಾರ್ಟಿಯ 31 ಮಂತ್ರಿಗಳ ಜೊತೆಗೆ, 59 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ!. ಜೊತೆಗೆ, DMK ಜೊತೆಯಲ್ಲಿದ್ದ VCK ಮತ್ತು IUML ಪಾರ್ಟಿಗಳು ಕೂಡ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿ ತಲಾ ಒಂದೊಂದು ಮಂತ್ರಿ ಸ್ಥಾನ ಪಡೆದಿವೆ. ಇದು ಪಕ್ಕಾ ‘ಸಮ್ಮಿಶ್ರ ಸರ್ಕಾರ’ದ (Coalition Government) ಹೊಸ ಮಾಡೆಲ್!.

2026 ರ ತಮಿಳುನಾಡು ಸಚಿವ ಸಂಪುಟದ ಪೂರ್ಣ ಪಟ್ಟಿ (ಕ್ಯಾಬಿನೆಟ್ ಡೀಟೇಲ್ಸ್)

ಯಾರಿಗೆ ಯಾವ ಪವರ್ ಸಿಕ್ಕಿದೆ ಅಂತ ಒಮ್ಮೆ ಕಣ್ಣಾಡಿಸಿ:

ದಲಿತರ ದರ್ಬಾರ್: ಸೋಶಿಯಲ್ ಜಸ್ಟೀಸ್ ಅಂದ್ರೆ ಇದು!
ಇದು ವಿಜಯ್ ಅವರ ಅತಿ ದೊಡ್ಡ ಗೇಮ್ ಚೇಂಜರ್. ಹಿಂದಿನ ಸ್ಟಾಲಿನ್ ಅವರ DMK ಸರ್ಕಾರದಲ್ಲಿ ಗರಿಷ್ಠ ಅಂದರೆ 4 ಜನ ದಲಿತ ಸಚಿವರಿದ್ದರು. ಆದರೆ ವಿಜಯ್ ಸಂಪುಟದಲ್ಲಿ ಬರೋಬ್ಬರಿ 8 ದಲಿತ (SC) ಶಾಸಕರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿಗಿರಿ ನೀಡಲಾಗಿದೆ!. ಇದು 74 ವರ್ಷಗಳ ರಾಜ್ಯದ ಇತಿಹಾಸದಲ್ಲೇ ಬಿಗ್ಗೆಸ್ಟ್ ರೆಕಾರ್ಡ್.

ಆ 8 ಮಂತ್ರಿಗಳು ಯಾರು ಅಂದರೆ:

  1. ಪಿ. ವಿಶ್ವನಾಥನ್ (ಕಾಂಗ್ರೆಸ್): ದಲಿತರಾದರೂ ‘ಮೇಲೂರು’ ಜನರಲ್ ಕ್ಷೇತ್ರದಿಂದ ಗೆದ್ದವರು. ಇವರಿಗೆ ‘ಉನ್ನತ ಶಿಕ್ಷಣ’ ಖಾತೆ.
  2. ಡಿ. ಲೋಗೇಶ್ ತಮಿಳ್ ಸೆಲ್ವನ್: ವಾಣಿಜ್ಯ ತೆರಿಗೆ ಮತ್ತು ನೋಂದಣಿ ಖಾತೆ.
  3. ಎ.ರಾಜ್‌ಮೋಹನ್: ಶಾಲಾ ಶಿಕ್ಷಣ ಸಚಿವೆ.
  4. ಪಿ. ಮಥನ್ ರಾಜಾ: MSME (ಸಣ್ಣ ಮತ್ತು ಮಧ್ಯಮ ಕೈಗಾರಿಕೆ) ಖಾತೆ.
  5. ವಿ. ಗಾಂಧೀರಾಜ್: ಸಹಕಾರ ಖಾತೆ.
  6. ಎಸ್. ಕಮಲಿ:28 ವರ್ಷದ ಯುವತಿ. ಕೇಂದ್ರ ಸಚಿವರನ್ನೇ ಸೋಲಿಸಿ ಪಶುಸಂಗೋಪನೆ ಸಚಿವೆಯಾಗಿದ್ದಾರೆ.
  7. ಕೆ. ತೇನ್ನರಸು: ಅನಿವಾಸಿ ತಮಿಳರ ಕಲ್ಯಾಣ ಖಾತೆ.
  8. ವನ್ನಿ ಅರಸು (VCK): ಆದಿ ದ್ರಾವಿಡ ಕಲ್ಯಾಣ (ಸಾಮಾಜಿಕ ನ್ಯಾಯ) ಸಚಿವ.

ಸ್ಟಾರ್ ಡೈರೆಕ್ಟರ್ ಪಾ. ರಂಜಿತ್ ಅವರೇ ಹೇಳಿದ ಹಾಗೆ, “ಇದು ಪ್ರತಿನಿಧಿಕ ರಾಜಕಾರಣದ ಐತಿಹಾಸಿಕ ಹೆಜ್ಜೆ!”.

ವುಮನ್ ಪವ‌ರ್, ಯೂತ್‌ ಫೋರ್ಸ್‌ & ಎಐ (AI) ಮಿನಿಸ್ಟಿ!
ಪಾಲಿಟಿಕ್ಸ್ ಅಂದರೆ ಬರೀ ವಯಸ್ಸಾದವರ ಜಾಗ ಅಂತ ಅಂದುಕೊಂಡಿದ್ದ ಜನರಿಗೆ ಇದು ಬಿಗ್ ಶಾಕ್. ಸಂಪುಟದ 35 ಸಚಿವರಲ್ಲಿ 22 ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು!. ಇದು ಪಕ್ಕಾ ‘Generational Shift’.

ಮಹಿಳಾ ಸಬಲೀಕರಣದಲ್ಲಿ ಕೂಡ ರೆಕಾರ್ಡ್ ಬ್ರೇಕ್! ತಮಿಳುನಾಡು ಇತಿಹಾಸದಲ್ಲಿ ಇದೇ ಮೊದಲು 4 ಮಹಿಳೆಯರಿಗೆ ಕ್ಯಾಬಿನೆಟ್ ಮಂತ್ರಿ ಸ್ಥಾನ ಒಲಿದಿದೆ. 29 ವರ್ಷದ ಎಸ್.ಕೀರ್ತನಾ (ಕೈಗಾರಿಕೆ).ಸಿ. ವಿಜಯಲಕ್ಷ್ಮಿ (ಡೈರಿ ಅಭಿವೃದ್ಧಿ), 28 ವರ್ಷದ ಎಸ್. ಕಮಲಿ (ಪಶುಸಂಗೋಪನೆ) ಮತ್ತು 40 ವರ್ಷದ ಕೆ. ಜಗದೀಶ್ವರಿ (ಸಮಾಜ ಕಲ್ಯಾಣ) ಅವರು ಈ ಪವರ್‌ಫುಲ್‌ ಸ್ಥಾನದಲ್ಲಿದ್ದಾರೆ.

ಯುವಕರಿಗೆ ಸ್ಕಿಲ್ ಡೆವಲಪ್ರೈಂಟ್ ಮಾಡಲು 31 ವರ್ಷದ ಜೆ. ಮೊಹಮ್ಮದ್ ಫರ್ವಾಸ್ ಅವರನ್ನು ಕಾರ್ಮಿಕ ಕಲ್ಯಾಣ ಸಚಿವರನ್ನಾಗಿ ಮಾಡಲಾಗಿದೆ. ಹಾಗೆಯೇ IIM ನಲ್ಲಿ ಓದಿರುವ ಆರ್. ಕುಮಾರ್ ಅವರಿಗೆ ತಮಿಳುನಾಡಿನ ಪ್ಯೂಚರ್ ದೃಷ್ಟಿಯಿಂದ ‘ಕೃತಕ ಬುದ್ಧಿಮತ್ತೆ (AI), ಐಟಿ ಮತ್ತು ಡಿಜಿಟಲ್ ಸೇವೆಗಳ’ ಹೊಸ ಇಲಾಖೆಯನ್ನೇ ಸೃಷ್ಟಿಸಿ ನೀಡಲಾಗಿದೆ!. ಬಹುಶಃ ಈ ಖಾತೆ ಇಂಡಿಯಾದ ಇತಿಹಾಸದಲ್ಲಿ ಮೊದಲ ಸ್ಥಾನ ಪಡೆಯುತ್ತದೆ.

ಬ್ರಾಹ್ಮಣರು, ಪ್ರಬಲ ಜಾತಿಗಳು & ಅಲ್ಪಸಂಖ್ಯಾತರು: ಎಲ್ಲರಿಗೂ ಲೆವೆಲ್ ಪ್ಲೇಯಿಂಗ್ ಫೀಲ್ಡ್!
ವಿಜಯ್ ಅವರ “ಎಲ್ಲರಿಗೂ ಎಲ್ಲವೂ” ಸಿದ್ಧಾಂತ ಇಲ್ಲೇ ವರ್ಕ್ ಆಗಿರೋದು. ದ್ರಾವಿಡ ರಾಜಕಾರಣದಲ್ಲಿ ಬ್ರಾಹ್ಮಣರಿಗೆ ಸ್ಥಾನ ಸಿಗುವುದು ತೀರಾ ವಿರಳ. ಆದರೆ ಟಿವಿಕೆ ಕ್ಯಾಬಿನೆಟ್‌ ನಲ್ಲಿ ಪಿ. ವೆಂಕಟರಮಣನ್ (ಆಹಾರ ಮತ್ತು ನಾಗರಿಕ ಸರಬರಾಜು) ಮತ್ತು ರಮೇಶ್ (HR&CE) ಅವರಿಗೆ ಮಂತ್ರಿಗಿರಿ ನೀಡಲಾಗಿದೆ. ಹಾಗೆಯೇ, ರಾಜ್ಯದ ಆರ್ಥಿಕತೆಯನ್ನು ಕಂಟ್ರೋಲ್ ಮಾಡುವ ಗೌಂಡರ್, ವನ್ನಿಯಾರ್ ಮತ್ತು ಮುಕ್ಕುಲಥೋರ್ ಸಮುದಾಯಗಳನ್ನೂ ಕರೆಕ್ಟ್ ಆಗಿ ಬ್ಯಾಲೆನ್ಸ್ ಮಾಡಲಾಗಿದೆ. ಗೌಂಡ‌ರ್ ಮುಖಂಡ ಕೆ.ಎ. ಸೆಂಗೊಟ್ಟೆಯನ್ ಅವರಿಗೆ ಕಂದಾಯ ಇಲಾಖೆ, ಡೇಟಾ-ಡ್ರಿವನ್ ಸ್ಟ್ರಾಟಜಿಸ್ಟ್ ಆಧವ್ ಅರ್ಜುನ ಅವರಿಗೆ PWD ಮತ್ತು ಕ್ರೀಡೆ ಮತ್ತು ಯುವ ನಾಯಕ ಸಿ.ಟಿ.ಆರ್.ನಿರ್ಮಲ್‌ಕುಮಾ‌ರ್ ಅವರಿಗೆ ಇಂಧನ ಹಾಗೂ ಕಾನೂನು ಖಾತೆ ನೀಡಲಾಗಿದೆ.

ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಬ್ಯಾಂಕ್ ಈ ಬಾರಿ ಡಿಎಂಕೆಯಿಂದ ಶಿಫ್ಟ್ ಆಗಿ ವಿಜಯ್ ಕೈಹಿಡಿದಿದೆ. ಡಾ. ಎನ್.ಮೇರಿ ವಿಲ್ಸನ್ ಅವರಿಗೆ ರಾಜ್ಯದ ಖಜಾನೆಯ ಕೀಲಿ ಕೈ, ಅಂದರೆ ‘ಹಣಕಾಸು’ (Finance) ಖಾತೆಯನ್ನು ನೀಡಲಾಗಿದೆ!. ಎ.ಎಂ. ಷಹಜಹಾನ್ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಿಕ್ಕಿದೆ.

ಕಡೆಯದಾಗಿ, ಕೇವಲ ಒಬ್ಬ ಸಿನಿಮಾ ಸ್ಟಾರ್ ಆಗಿ ಎಂಟ್ರಿ ಕೊಟ್ಟು, 59 ವರ್ಷದ ದ್ರಾವಿಡ ಕೋಟೆಯನ್ನು ಒಡೆದು, ದಲಿತರು, ಮಹಿಳೆಯರು, ಯುವಕರು, ಅಲ್ಪಸಂಖ್ಯಾತರು ಮತ್ತು ಬ್ರಾಹ್ಮಣರನ್ನು ಒಟ್ಟಿಗೆ ಸೇರಿಸಿ 35 ಮಂದಿಯ ಈ ಯಂಗ್ & ಎನರ್ಜಿಟಿಕ್ ಟೀಮ್ ಕಟ್ಟಿರುವ ವಿಜಯ್ ಅವರ ಈ ನಡೆ ನಿಜಕ್ಕೂ ರಾಜಕೀಯದ ‘ಮಾಸ್ಟರ್ ಸ್ಟೋಕ್. DMK ನಾಯಕರು ಮೈತ್ರಿ ಪಕ್ಷಗಳನ್ನು “ಬಾಗಿದ ತೆಂಗಿನಮರ” ಅಂತ ಲೇವಡಿ ಮಾಡಿದಾಗ, ಟಿವಿಕೆ “ನಮ್ಮ ಪವರ್-ಶೇರಿಂಗ್ ಫಾರ್ಮುಲಾ ನೋಡಿ DMK ಯ ಕೌಟುಂಬಿಕ ರಾಜಕಾರಣಕ್ಕೆ ನಡುಕ ಶುರುವಾಗಿದೆ” ಅಂತ ಸ್ಟ್ರಾಂಗ್ ಕೌಂಟರ್ ಕೊಟ್ಟಿತ್ತು. ಇದು ಟ್ರೆಂಡ್ ಸೆಟ್ಟರ್ ಆಗೋದ್ರಲ್ಲಿ ಡೌಟೇ ಇಲ್ಲ!

Related Articles

ಇತ್ತೀಚಿನ ಸುದ್ದಿಗಳು