60 ರ ದಶಕದಲ್ಲಿ ಸಿಂಗಾಪುರ ಸರ್ಕಾರ “ಹಾಕರ್ಸ್ ಸೆಂಟರ್‌”ಗಳನ್ನು ಕಟ್ಟಿದ್ದು, ಕೃಷ್ಣ ಭೈರೇಗೌಡರು ಗಮನಿಸಬೇಕು

“..ಬೆಂಗಳೂರಿನ ಫುಟ್‌ಪಾತ್ ಸಮಸ್ಯೆಗೆ ಪರಿಹಾರನೇ ಇಲ್ವಾ? ಖಂಡಿತ ಇದೆ. ಇದಕ್ಕಾಗಿ ನಾವು ಜಗತ್ತಿನ ಬೇರೆ ದೇಶಗಳು, ಡೆವಲಪ್ಡ್ ಕಂಟ್ರಿಗಳು ಇಂಥ ಇಶ್ಯೂಗಳನ್ನು ಹೇಗೆಲ್ಲಾ ನಿಭಾಯಿಸುತ್ತವೆ ಅಂತ ನೋಡಬೇಕು..” ಲೇಖಕ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ

ಸರಿ, ನಮಗೂ ಒಳ್ಳೆ ಫುಟ್ ಪಾತ್ ಬೇಕು, ಅವರಿಗೂ ಬದುಕು ಬೇಕು. ಹಾಗಾದ್ರೆ ಇದಕ್ಕೆ ಪರಿಹಾರನೇ ಇಲ್ವಾ? ಖಂಡಿತ ಇದೆ. ಇದಕ್ಕಾಗಿ ನಾವು ಜಗತ್ತಿನ ಬೇರೆ ದೇಶಗಳು, ಡೆವಲಪ್ಡ್ ಕಂಟ್ರಿಗಳು ಇಂಥ ಇಶ್ಯೂಗಳನ್ನು ಹೇಗೆಲ್ಲಾ ನಿಭಾಯಿಸುತ್ತವೆ ಅಂತ ನೋಡಬೇಕು. ಮೊದಲಿಗೆ ಸಿಂಗಾಪುರ್ ಕಡೆ ನೋಡುವುದಾದರೆ; 1960 ರ ದಶಕದಲ್ಲಿ ಸಿಂಗಾಪುರ್ ನಲ್ಲೂ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ವಿಪರೀತವಾಗಿತ್ತು. ಆದರೆ ಅಲ್ಲಿನ ಸರ್ಕಾರ ಅವರನ್ನು ಒದ್ದೋಡಿಸಲಿಲ್ಲ. ಬದಲಾಗಿ “ಹಾಕರ್ ಸೆಂಟರ್ಸ್” ಗಳನ್ನು ಕಟ್ಟಿತು. ಬೀದಿ ಬದಿ ವ್ಯಾಪಾರಿಗಳಿಗೆಂದೇ ಸಪರೇಟ್ ಜಾಗ ಕೊಟ್ಟು, ನೀರು, ಕರೆಂಟ್, ಗ್ಯಾಸ್ ವ್ಯವಸ್ಥೆ ಮಾಡಿಕೊಟ್ಟಿತು. ಇಂದು ಆ ಸಿಂಗಾಪುರದ ಹಾಕರ್ ಕಲ್ಚರ್ ಗೆ ‘UNESCO’ ದ ಮಾನ್ಯತೆ ಸಿಕ್ಕಿದೆ! ಬೀದಿ ವ್ಯಾಪಾರಿಗಳು ಇಂದು ಗೌರವಯುತವಾದ ಬದುಕು ಕಟ್ಟಿಕೊಂಡಿದ್ದಾರೆ, ರಸ್ತೆಗಳೂ ಕ್ಲೀನ್ ಆಗಿವೆ.

ಇನ್ನು ಥೈಲ್ಯಾಂಡ್ ನ ಬ್ಯಾಂಕಾಕ್ ನಗರವನ್ನು ಸ್ಟ್ರೀಟ್ ಫುಡ್ ಕ್ಯಾಪಿಟಲ್ ಅಂತಾರೆ. ಅಲ್ಲಿ ಫುಟ್ ಪಾತ್ ಗಳನ್ನು ಟೈಮ್ ಶೇರಿಂಗ್ ಆಧಾರದ ಮೇಲೆ ಬಳಸುತ್ತಾರೆ. ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಫುಟ್ ಪಾತ್ ಕೇವಲ ಪಾದಚಾರಿಗಳಿಗೆ. ಸಂಜೆ 6 ರ ನಂತರ ಅದೇ ಫುಟ್ ಪಾತ್ ಗಳು ಲೀಗಲ್ ಸ್ಟ್ರೀಟ್ ಫುಡ್ ಮಾರ್ಕೆಟ್ ಆಗಿ ಬದಲಾಗುತ್ತವೆ. ಇದರಿಂದ ಪ್ರವಾಸೋದ್ಯಮ ಹೆಚ್ಚಾಗಿದೆ, ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿದೆ, ಮತ್ತು ಪಾದಚಾರಿಗಳಿಗೂ ತೊಂದರೆ ಆಗುತ್ತಿಲ್ಲ.

ಇನ್ನು ನ್ಯೂಯಾರ್ಕ್. ಅಲ್ಲಿಯೂ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಆದರೆ ಅಲ್ಲಿ ಪಕ್ಕಾ ಲೈಸೆನ್ಸಿಂಗ್ ಸಿಸ್ಟಮ್ ಇದೆ. ಎಲ್ಲಿ ನಿಲ್ಲಬೇಕು, ಎಷ್ಟು ಜಾಗ ಆಕ್ರಮಿಸಬೇಕು, ಕಸವನ್ನು ಹೇಗೆ ವಿಲೇವಾರಿ ಮಾಡಬೇಕು ಅನ್ನೋದಕ್ಕೆ ಕಟ್ಟುನಿಟ್ಟಾದ ರೂಲ್ಸ್ ಇವೆ. ವ್ಯಾಪಾರಿಗಳು ಆ ರೂಲ್ಸ್ ಫಾಲೋ ಮಾಡ್ತಾರೆ, ಸರ್ಕಾರ ಅವರಿಗೆ ಭದ್ರತೆ ಕೊಡುತ್ತೆ.

ಲ್ಯಾಟಿನ್ ಅಮೇರಿಕಾದ ಬೊಗೋಟಾದಂತಹ ನಗರಗಳಲ್ಲಿ ಈ ವ್ಯಾಪಾರಿಗಳಿಗಾಗಿ ವಿಶೇಷ ಮೈಕ್ರೋ ಫೈನಾನ್ಸ್ ಸ್ಕೀಮ್ ಗಳನ್ನು ತಂದು, ಅವರು ಸಣ್ಣ ಪುಟ್ಟ ಅಂಗಡಿಗಳನ್ನು ಬಾಡಿಗೆಗೆ ಪಡೆಯುವಂತೆ ಮಾಡಲಾಗಿದೆ. ಅಂದರೆ, ಮುಂದುವರೆದ ದೇಶಗಳು ಸಮಸ್ಯೆಯ ಮೂಲವನ್ನು ಅರಿತು ಪರಿಹಾರ ಹುಡುಕುತ್ತವೆಯೇ ಹೊರತು, ಕೇವಲ ಜೆಸಿಬಿ ತಂದು ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದಿಲ್ಲ!

Related Articles

ಇತ್ತೀಚಿನ ಸುದ್ದಿಗಳು