ಎಸ್‌ಐಆರ್‌ ಗೊಂದಲ ನಿವಾರಿಸಿ ಎಂದು ಕೇಳಲು ಹೋದ ಜಾಗೃತ ಕರ್ನಾಟಕ ಕಾರ್ಯಕರ್ತರ ಬಂಧನ

ಎಸ್‌ಐಆರ್‌ ಪ್ರಕ್ರಿಯೆಯಿಂದ ರಾಜ್ಯದಲ್ಲಿ ಲಕ್ಷಾಂತರ ಮತದಾರರು ಮತ್ತು ಸಾವಿರಾರು ಬಿಎಲ್‌ಓಗಳು ಆತಂಕದಲ್ಲಿದ್ದು, ವಿಪರೀತ ಗೊಂದಲದ ಸ್ಥಿತಿ ಏರ್ಪಟ್ಟಿದೆ. ಇದರ ಬಗ್ಗೆ ಸತತವಾಗಿ ಮನವಿ ಕೊಟ್ಟರೂ ಪ್ರಯೋಜನವಾಗದ್ದರಿಂದ, ಜಾಗೃತ ಕರ್ನಾಟಕದ ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟಗಾರರ ಮುಖಗಳಿದ್ದ ಚಿತ್ರಗಳನ್ನು ಧರಿಸಿ, ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ತೆರಳಿದ್ದರು.

ಈಗಾಗಲೇ ತಳಮಟ್ಟದಲ್ಲಿ ಏರ್ಪಟ್ಟಿರುವ ಗೊಂದಲಗಳಿಗೆ ಚುನಾವಣಾ ಆಯೋಗದ ವೆಬ್‌ಸೈಟಿನಲ್ಲಿ ಅಧಿಕೃತವಾಗಿ ಪರಿಹಾರಗಳೇನು ಎಂಬುದನ್ನು ಬರೆಯಿರಿ ಎಂದಷ್ಟೇ ಹೋರಾಟಗಾರರ ಒತ್ತಾಯವಾಗಿತ್ತು.

ಆದರೆ, ಚುನಾವಣಾ ಆಯೋಗದ ಅಧಿಕಾರಿಗಳು ಪೊಲೀಸರಿಗೆ ಪತ್ರ ಬರೆದು, ಭಾರೀ ಬಿಗಿ ಭದ್ರತೆ ಏರ್ಪಡಿಸಿಕೊಂಡಿದ್ದಲ್ಲದೇ, ಒಳಗೆ ಹೋಗಲೇ ಬಿಡದೆ ಎಲ್ಲರನ್ನೂ ವಶಕ್ಕೆ ಪಡೆದರು. ಎರಡನೇ ಕಂತಿನಲ್ಲಿ ಇನ್ನಷ್ಟು ಜನ ಕಾರ್ಯಕರ್ತರೂ ಅಲ್ಲಿಗೆ ಬಂದು ಪ್ರತಿಭಟನೆ ಮಾಡಿದ್ದರಿಂದ ಅವರನ್ನೂ ಬಂಧಿಸಿದ್ದಾರೆ. ಎಲ್ಲರನ್ನೂ ಮೈಸೂರು ರಸ್ತೆಯ ಸಿಎಆರ್‌ ಕೇಂದ್ರಸ್ಥಾನದ ಮೈದಾನದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು