ಆಗಸ್ಟ್ 15ರಿಂದ ಆನ್‌ಲೈನ್ ಆರ್ಡರ್‌ ತೆಗೆದುಕೊಳ್ಳುವುದಿಲ್ಲ: ಫುಡ್ ಡೆಲಿವರಿ ಆಪ್‌ಗಳ ಶುಲ್ಕ ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಿದ ಬೆಂಗಳೂರಿನ ಹೋಟೆಲ್ಲುಗಳು

ಬೆಂಗಳೂರು: ಬೆಂಗಳೂರಿನ ರೆಸ್ಟೋರೆಂಟ್‌ಗಳು ಮಹತ್ವದ ನಿರ್ಧಾರ ಕೈಗೊಂಡಿವೆ. ಆಗಸ್ಟ್ 15 ರಿಂದ ಸ್ವಿಗ್ಗಿ, ಜೊಮಾಟೊ ಮತ್ತು ಇತರ ಫುಡ್ ಡೆಲಿವರಿ ಆಪ್‌ಗಳಿಂದ ಆನ್‌ಲೈನ್ ಆರ್ಡರ್‌ಗಳನ್ನು ಸ್ಥಗಿತಗೊಳಿಸುವುದಾಗಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ (BBHA) ಮತ್ತು ಇತರ ರೆಸ್ಟೋರೆಂಟ್ ಗುಂಪುಗಳು ಘೋಷಿಸಿವೆ.

ಫುಡ್ ಡೆಲಿವರಿ ಆಪ್‌ಗಳು ಸಾಮಾನ್ಯ ಕಮಿಷನ್ ಜೊತೆಗೆ ಪಾವತಿ ಗೇಟ್‌ವೇ ಶುಲ್ಕಗಳು, ಪ್ರಚಾರದ ಶುಲ್ಕಗಳು, ಜಾಹೀರಾತು ವೆಚ್ಚಗಳು, ರಿಯಾಯಿತಿಗಳು ಮತ್ತು ಲಾಯಲ್ಟಿ ಪ್ರೋಗ್ರಾಂ ಹೆಸರಿನಲ್ಲಿ ಕಡಿತಗೊಳಿಸುತ್ತಿರುವ ಹಣದಿಂದ ರೆಸ್ಟೋರೆಂಟ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಬಿಎಚ್‌ಎ ಅಧ್ಯಕ್ಷ ಸುಬ್ರಹ್ಮಣ್ಯ ತಿಳಿಸಿದ್ದಾರೆ. ತಮ್ಮ ಅನುಮತಿಯಿಲ್ಲದೆ ವಿಧಿಸಲಾಗುತ್ತಿರುವ ಹೆಚ್ಚುವರಿ ಶುಲ್ಕಗಳ ಕುರಿತು ಸ್ಪಷ್ಟನೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು