ವಿಧಾನಸಭೆ ಅಧಿವೇಶನಕ್ಕೆ ಪ್ರಮುಖ ನಾಯಕರ ಗೈರು – ಆಂತರಿಕ ಅಸಮಾಧಾನ ಸ್ಪೋಟ

ಬೆಂಗಳೂರು : ಸ್ಪೀಕರ್ (Speaker ) ಆಯ್ಕೆಯ ನಾಮಪತ್ರ (Nomination ) ಸಲ್ಲಿಕೆ ವೇಳೆ ವ್ಯಕ್ತವಾಗಿದ್ದ ಕಾಂಗ್ರೆಸ್ (Congress ) ಒಳಗಿನ ಆಂತರಿಕ ಅಸಮಾಧಾನ ಇದೀಗ ಮತ್ತಷ್ಟು ತೀವ್ರಗೊಂಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಶಾಸಕರು ವಿಧಾನಸಭೆ ಅಧಿವೇಶನಕ್ಕೂ ಗೈರಾಗುವ ಮೂಲಕ ನಾಯಕತ್ವಕ್ಕೆ ನೇರ ಸವಾಲು ಎಸೆದಿದ್ದಾರೆ.

ಸಚಿವ ಸಂಪುಟ ರಚನೆ ಹಾಗೂ ಪ್ರಮುಖ ಸ್ಥಾನಮಾನಗಳ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ತೀವ್ರ ಅಸಮಾಧಾನವು ಇದೀಗ ಕೇವಲ ಪಕ್ಷದ ಆಂತರಿಕ ಸಭೆಗಳಿಗೆ ಸೀಮಿತವಾಗಿ ಉಳಿದಿಲ್ಲ. ಶಾಸಕರಾದ ಎಂ. ಕೃಷ್ಣಪ್ಪ, ಪ್ರಿಯಾ ಕೃಷ್ಣ, ನಾರಾಯಣಸ್ವಾಮಿ ಹಾಗೂ ಯಶವಂತರಾಯಗೌಡ ಪಾಟೀಲ್ ಸೇರಿದಂತೆ ಪ್ರಮುಖ ನಾಯಕರು ಅಧಿವೇಶನದ ಕಲಾಪಗಳಿಂದಲೂ ದೂರ ಉಳಿಯುವ ಮೂಲಕ ತಮ್ಮ ಬಂಡಾಯದ ಬಾವುಟ ಹಾರಿಸಿದ್ದಾರೆ.

ಸ್ಪೀಕರ್ ಆಯ್ಕೆಯಂತಹ ಪ್ರಮುಖ ಸಂಸದೀಯ ಪ್ರಕ್ರಿಯೆಯಿಂದ ದೂರ ಉಳಿದು ಶಕ್ತಿ ಪ್ರದರ್ಶನ ಮಾಡಿದ್ದ ಈ ಅತೃಪ್ತ ಪಡೆ, ಈಗ ಅಧಿವೇಶನಕ್ಕೂ ಗೈರಾಗುವ ಮೂಲಕ ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಹಿರಿಯ ನಾಯಕರ ಈ ನಡೆ ಕಾಂಗ್ರೆಸ್ ಹೈಕಮಾಂಡ್‌ಗೆ ತೀವ್ರ ತಲೆನೋವಾಗಿ ಪರಿಣಮಿಸಿದ್ದು, ಬಂಡಾಯ ಶಮನಗೊಳಿಸಲು ತಕ್ಷಣದ ಸಂಧಾನ ಕಸರತ್ತು ಆರಂಭಿಸುವಂತೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು