ಚಾಮರಾಜನಗರ ಪ್ರಕರಣ: ಮೂವರ ಸಾವಿನ ಪ್ರಕರಣದ ತನಿಖಾಧಿಕಾರಿಗೆ ಮಹತ್ವದ ಸಾಕ್ಷ್ಯ ಹಸ್ತಾಂತರಿಸಿದ ಅರಣ್ಯ ಇಲಾಖೆ

ಚಾಮರಾಜನಗರ: ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯು ತನಿಖಾಧಿಕಾರಿಗಳಿಗೆ ಮಹತ್ವದ ಸಾಕ್ಷ್ಯಗಳನ್ನು ಹಸ್ತಾಂತರಿಸಿದೆ.

ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾದ ಎರಡು ರೈಫಲ್‌ಗಳು ಹಾಗೂ ಜಿಂಕೆ ಮಾಂಸವಿದ್ದ ಎರಡು ಬ್ಯಾಗ್‌ಗಳನ್ನು ತನಿಖಾ ತಂಡಕ್ಕೆ ಒಪ್ಪಿಸಲಾಗಿದೆ. ಇದರ ಜತೆಗೆ ಹೆಡ್ ಟಾರ್ಚ್, ಮಾದಕ ವಸ್ತು ಎಂದು ಶಂಕಿಸಲಾದ ಪುಡಿ, ಪೆಲೆಟ್‌ಗಳು, ಪಾತ್ರೆಗಳು, ಚಪ್ಪಲಿ, ಚಾಕು ಹಾಗೂ ಇತರೆ ಅಡುಗೆ ಸಾಮಗ್ರಿಗಳ ಛಾಯಾಚಿತ್ರಗಳನ್ನು ಸಹ ಬಿಡುಗಡೆ ಮಾಡಲಾಗಿದೆ.

ಪ್ರಕರಣದ ತನಿಖಾಧಿಕಾರಿಯಾಗಿರುವ ಕೊಳ್ಳೇಗಾಲ ಉಪವಿಭಾಗಾಧಿಕಾರಿ (ಎಸಿ) ದಿನೇಶ್ ಕುಮಾರ್ ಮೀನಾ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು, ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಕೈಸೇರಿದ ನಂತರ ಸಮಗ್ರ ತನಿಖಾ ವರದಿ ಸಿದ್ಧಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು