ಮೃತರು ಬೇಟೆಗಾರರು ಎಂದ ಅರಣ್ಯ ಇಲಾಖೆ – ಕುಟುಂಬಸ್ಥರು ಅವರು ಬೇಟೆಗಾರರಲ್ಲ ಎನ್ನುತ್ತಿದ್ದಾರೆ ?

ಚಾಮರಾಜನಗರ : ಕಾವೇರಿ ವನ್ಯಧಾಮದಲ್ಲಿ ನಡೆದ ಎನ್‌ಕೌಂಟರ್ (Hanur encounter) ಪ್ರಕರಣ ಸಾಕಷ್ಟು ಚರ್ಚೆ ಕಾರಣವಾಗಿದ್ದು, ಈ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ  (Forest Department ) ಮಾಲತಿ ಪ್ರಿಯಾ ಪ್ರತಿಕ್ರಿಯೆ ನೀಡಿದ್ದಾರೆ.

ಅರಣ್ಯ ಇಲಾಖೆ (Forest Department) ಎನ್​ಕೌಂಟರ್​ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಆತ್ಮರಕ್ಷಣೆಗಾಗಿ ಬೇಟೆ ಆಡಲು ಬಂದಿದ್ದ ಬೇಟೆಗಾರರನ್ನು ಎನ್​ಕೌಂಟರ್​ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಹೇಳ್ತಿದ್ರೆ, ಆದ್ರೆ, ಮೃತ ಕುಟುಂಬಸ್ಥರು ಅವರು ಬೇಟೆಗಾರರಲ್ಲ ಅಂತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಹೇಳಿದ್ದೇನು?

ಬೇಟೆಗಾರರು ನಮ್ಮ ಸಿಬ್ಬಂದಿ ಮೇಲೆ ಮೊದಲು ದಾಳಿ ನಡೆಸಿದ್ದಾರೆ. ನಮ್ಮ ಸಿಬ್ಬಂದಿ ಪ್ರತಿ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಎರಡು ಬಂದೂಕು, ಮಾಂಸ ಸಿಕ್ಕಿದೆ. ಸ್ಥಳದಲ್ಲಿ ಸಿಕ್ಕ ಸಾಕ್ಷಿಗಳ ಆಧಾರದ ಮೇಲೆ ಅವರು ಬೇಟೆಗಾರರು ಎಂಬುದು ಖಚಿತವಾಗಿದೆ. ಆಗಸ್ಟ್ 15 ರಿಂದ ಇಲ್ಲಿಯವರೆಗೂ ಕೂಡ ಶೋಧ ಕಾರ್ಯ ಮಾಡಿದ್ದೇವೆ. ಯಾವುದೇ ಹಸು ಪತ್ತೆಯಾಗಿಲ್ಲ, ಅದರ ಕಳೇಬರ ಕೂಡ ಪತ್ತೆಯಾಗಿಲ್ಲ, ಈಗಲೂ ಕೂಡ ಶೋಧ ಕಾರ್ಯ ಮುಂದುವರಿದಿದೆ. ಅರಣ್ಯಕ್ಕೆ ಪ್ರವೇಶ ಮಾಡಿದ್ದವರು ಬೇಟೆಗಾರರೆಂಬುದು ಖಚಿತವಾಗಿದೆ ಎಂದು ಹೇಳಿದರು.

8 ಕಳ್ಳಬೇಟೆ ತಡೆ ಶಿಬಿರ, 9 ವಸತಿ ಗೃಹ ಧ್ವಂಸವಾಗಿವೆ. 2 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಕಳೆದ 10 ವರ್ಷದ ಅವಧಿಯಲ್ಲಿ ಚಾಮರಾಜನಗರ ವೃತ್ತದಲ್ಲಿ 3289 ಅರಣ್ಯ ಅಪರಾಧ ಪ್ರಕರಣ ದಾಖಲಾಗಿದೆ. ಈ ಪೈಕಿ 777 ವನ್ಯಜೀವಿ, 370 ಕಳ್ಳಬೇಟೆ, 66 ಫೈರಿಂಗ್ ಪ್ರಕರಣ ದಾಖಲಾಗಿದೆ. ಮೃತಪಟ್ಟವರ ಮೇಲೆ ಯಾವುದೇ ಹಳೆಯ ಕೇಸ್ ಇಲ್ಲ, ನಾಪತ್ತೆಯಾಗಿರುವ ಮಹಿಮಾ ದಾಸ್ ಮೇಲೆ ಅಕ್ರಮ ಮೀನುಗಾರಿಕೆ ಪ್ರಕರಣವಿದೆ ಎಂದು ಮಾಲತಿ ಪ್ರಿಯಾ ಅವರು ಮಾಹಿತಿ ನೀಡಿದರು.

ಪ್ರಕರಣದ ಪ್ರಮುಖ ಸಾಕ್ಷಿ ಮಹಿಮಾ ದಾಸ್ ನಾಪತ್ತೆ!

ಪ್ರಕರಣದ ಪ್ರಮುಖ ಸಾಕ್ಷಿ ಮಹಿಮಾ ದಾಸ್ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರತ್ಯಕ್ಷದರ್ಶಿಯ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಮಾ ದಾಸ್ ಅವರ ಪುತ್ರಿಯರ ಪ್ರಕಾರ, ಆಗಸ್ಟ್ 14ರಂದು ಅವರು ತಂದೆಯನ್ನು ಕೊನೆಯ ಬಾರಿ ನೋಡಿದ್ದರು. ಬಳಿಕ ಹಸು ಹುಡುಕಲು ತೆರಳಿದ್ದ ಅವರು ಅಸ್ವಸ್ಥರಾಗಿದ್ದು, ಆಗಸ್ಟ್ 15ರಂದು ಚಿಕಿತ್ಸೆಗಾಗಿ ಮೈಸೂರಿಗೆ ಕರೆತರಲಾಗಿತ್ತು ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೇರಿದಂತೆ ಚಿಕಿತ್ಸೆ ನಡೆದಿದ್ದು, ನಂತರ ಅವರನ್ನು ಯಾರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿದ್ದಾರೆ ಎಂಬುದು ಕುಟುಂಬಕ್ಕೆ ತಿಳಿದಿಲ್ಲ ಎಂದು ಪುತ್ರಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು