4 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ – ಔಷಧಿ ಸಂಪೂರ್ಣ ನಿಷೇಧ

ನವದೆಹಲಿ : ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕ್ಲೋರ್‌ಫೆನಿರಮೈನ್ ಮೇಲೀಯೇಟ್ ಮತ್ತು ಫಿನೈಲ್ಫ್ರೈನ್ ಹೈಡ್ರೋಕ್ಲೋರೈಡ್ (Chlorpheniramine Maleate and Phenylephrine Hydrochloride) ಔಷಧೀಯ ಸಂಯೋಜನೆ ಹೊಂದಿರುವ ಕಾಂಬಿನೇಷನ್ ಸಿರಪ್ (Syrup) ಹಾಗೂ ಮಾತ್ರೆಗಳನ್ನು (Tablets) ನೀಡಬಾರದು ಎಂದು ಕೇಂದ್ರ ಸರ್ಕಾರ (Central Government) ಕಟ್ಟುನಿಟ್ಟಿನ ಸೂಚನೆ (Big News) ನೀಡಿದೆ. ತಜ್ಞರ ಸಮಿತಿ ಹಾಗೂ ಡ್ರಗ್ಸ್ ತಾಂತ್ರಿಕ ಸಲಹಾ ಮಂಡಳಿಯ (DTAB) ಶಿಫಾರಸುಗಳನ್ನು ಆಧರಿಸಿ ಕೇಂದ್ರ ಆರೋಗ್ಯ ಸಚಿವಾಲಯ ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಪುಟ್ಟ ಮಕ್ಕಳ ಆರೋಗ್ಯದ ಮೇಲಾಗುವ ಸಂಭಾವ್ಯ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಈ ಔಷಧಗಳಿಂದ ಮಕ್ಕಳಿಗೆ ಸಮಸ್ಯೆ

ಸಾಮಾನ್ಯವಾಗಿ ಮಕ್ಕಳಿಗೆ ಬರುವ ಶೀತ, ಕೆಮ್ಮು ಮತ್ತು ಜ್ವರದ ಪರಿಹಾರಕ್ಕಾಗಿ ಈ ರೀತಿಯ ಫಿಕ್ಸ್ಡ್ ಡೋಸ್ ಕಾಂಬಿನೇಷನ್ (FDC) ಔಷಧಗಳನ್ನು ವೈದ್ಯರು ನೀಡುತ್ತಿದ್ದರು. ಆದರೆ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಈ ರಾಸಾಯನಿಕ ಸಂಯೋಜನೆಯ ಔಷಧಗಳು ಅಪಾಯವನ್ನು ತಂದೊಡ್ಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಈ ವಯಸ್ಸಿನ ಮಕ್ಕಳಿಗೆ ಇದಕ್ಕಿಂತಲೂ ಸುರಕ್ಷಿತವಾದ ಪರ್ಯಾಯ ಔಷಧಗಳು ಲಭ್ಯವಿರುವುದರಿಂದ, ಅಪಾಯಕಾರಿ ಕಾಂಬಿನೇಷನ್ ಬಳಕೆಯನ್ನು ತಕ್ಷಣವೇ ತಡೆಯಲು ಸರ್ಕಾರ ನಿರ್ಧರಿಸಿದೆ. ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ 1940ರ ಸೆಕ್ಷನ್ 26A ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.

ಇದರೊಂದಿಗೆ ದೇಶದ ಎಲ್ಲಾ ಔಷಧ ತಯಾರಿಕಾ ಕಂಪನಿಗಳಿಗೆ (Pharmaceutical Companies) ಸರ್ಕಾರ ಸ್ಪಷ್ಟ ಹಾಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ರಾಸಾಯನಿಕ ಸಂಯೋಜನೆ ಹೊಂದಿರುವ ಪ್ರತಿಯೊಂದು ಔಷಧದ ಪ್ಯಾಕೇಜಿಂಗ್, ಬಾಕ್ಸ್ ಒಳಗಿರುವ ಮಾಹಿತಿ ಪತ್ರ (Package Insert) ಹಾಗೂ ಜಾಹೀರಾತುಗಳಲ್ಲಿ “ಈ ಔಷಧವನ್ನು 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಬಾರದು” ಎಂಬ ಎಚ್ಚರಿಕೆಯ ಸಂದೇಶವನ್ನು ಪ್ರಮುಖವಾಗಿ ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು