Monday, June 17, 2024

ಸತ್ಯ | ನ್ಯಾಯ |ಧರ್ಮ

ರಾಹುಲ್‌ ಗಾಂಧಿ ಜೊತೆಗಿನ ಸಂವಾದಕ್ಕೆ ಕರೆದು ಅಪಮಾನ: ಕರವೇ ಆಕ್ರೋಶ

ಮೈಸೂರು: ಭಾರತ ಐಕ್ಯತಾ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜೊತೆಗಿನ ಸಂವಾದದಲ್ಲಿ ಆಹ್ವಾನಿತರಿಗೆ ಮಾತನಾಡಲು ಅವಕಾಶ ನೀಡದೆ ಅಪಮಾನ ಎಸಗಲಾಗಿದೆ.


ಇಂದು ರಾಹುಲ್‌ ಗಾಂಧಿಯವರು ಯುವಜನರೊಂದಿಗೆ ಸಂವಾದ ನಡೆಸುವ ಹಿನ್ನೆಲೆಯಲ್ಲಿ ಆಯ್ದ ಗಣ್ಯರನ್ನು ರಾಜ್ಯದ ಹಲವು ಭಾಗಗಳಿಂದ ಕರೆಯಿಸಿಕೊಳ್ಳಲಾಗಿತ್ತು. ಆದರೆ ಸಂವಾದವನ್ನು ನಿರ್ವಹಿಸುತ್ತಿದ್ದ ಮಾಜಿ ಅಧಿಕಾರಿ ಶಶಿಕಾಂತ್‌ ಸೆಂಥಿಲ್‌, ತಮಗೆ ಬೇಕಾದವರಿಗೆ ಮಾತ್ರ ಮಾತನಾಡಲು ಅವಕಾಶ ನೀಡಿ, ಆಹ್ವಾನಿತರನ್ನು ಅಪಮಾನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.


ಸಂವಾದಕ್ಕೆ ಆಹ್ವಾನಿತರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ತೋಡಿಕೊಂಡಿದ್ದಾರೆ. ಪೀಪಲ್‌ ಮೀಡಿಯಾ ಜೊತೆಯಲ್ಲಿ ಮಾತನಾಡಿದ ಅವರು, ಆಯ್ದ ಕೆಲವರನ್ನೇ ಮಾತನಾಡಿಸುವುದು ಸಂಘಟಕರ ಉದ್ದೇಶವಾಗಿದ್ದರೆ ನಮ್ಮನ್ನು ಕರೆಯಿಸುವ ಅಗತ್ಯವಾದರೂ ಏನಿತ್ತು? ಸಂಘಟಕರಿಗೆ ತಮ್ಮ ಅಜೆಂಡಾಗಳಿಗೆ ಸಂಬಂಧಿಸಿದ ವಿಷಯಗಳಷ್ಟೇ ಚರ್ಚೆ ಆಗಬೇಕು ಎಂಬ ಕಾರ್ಯಸೂಚಿ ಇತ್ತೇನೋ, ಹೀಗಾಗಿ ಅವರಿಗೆ ಬೇಕಾದವರನ್ನು ಮಾತ್ರ ಮಾತನಾಡಲು ಕರೆದರು ಎಂದು ಆರೋಪಿಸಿದ್ದಾರೆ.

ಅರುಣ್‌ ಜಾವಗಲ್‌ ಅವರು ಮಾತ್ರವಲ್ಲದೆ ಪತ್ರಕರ್ತ ಟಿ.ಗುರುರಾಜ್‌, ಯುವಕವಿ ರಾಜೇಂದ್ರ ಪ್ರಸಾದ್‌ ಸೇರಿದಂತೆ ಹಲವರಿಗೆ ಸಂವಾದದಲ್ಲಿ ಪಾಲ್ಗೊಳ್ಳಲು ನಿರಾಕರಿಸಲಾಯಿತು.

https://m.facebook.com/story.php?story_fbid=pfbid0PE977R5yfDg89TvXcfuuoDHfwwnpHX8sozLigCKLHe2LPAAiTn9ENs8tJk8p8K68l&id=100001487623623

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ:ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯ ನೇಮಕಾತಿ ಸಂಬಂಧಿಸಿದಂತೆ ಕನ್ನಡ ವಿಷಯ ಪರೀಕ್ಷೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ದೇವನಹಳ್ಳಿಯ ಪರೀಕ್ಷಾ ಕೇಂದ್ರದ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಬಳ್ಳಾಪುರ ಘಟಕ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಯುಜಿಸಿ ಮರುಪರೀಕ್ಷೆ ನಡೆಸಲು ಒಪ್ಪಿಕೊಂಡು ಆದೇಶ ನೀಡಿತು.

♦️ peepal TV YouTube ಚಾನಲ್ ಅನ್ನು Subscribe ಮಾಡಿ ಬೆಲ್ ಐಕಾನ್ ಒತ್ತಿ

https://fb.watch/fTL-f_yt_Z/

Related Articles

ಇತ್ತೀಚಿನ ಸುದ್ದಿಗಳು