Friday, June 14, 2024

ಸತ್ಯ | ನ್ಯಾಯ |ಧರ್ಮ

ಇಂದು ಕೋಟಿಗಾನಹಳ್ಳಿ ರಾಮಯ್ಯ ರಚನೆಯ ನಾಟಕ ಪ್ರದರ್ಶನ: “ಗಂಗಮ್ಮ ನೀರಿನಾಗೆ ಜಡೆ ಹೆಣಿತಾ ಅವ್ಳೆ”

ಬೆಂಗಳೂರು: ಅಕ್ಟೋಬರ್ 2 ರಂದು ಗಾಂಧೀ ಜಯಂತಿಯ ವಿಶೇಷವಾಗಿ ಕೋಟಿಗಾನಹಳ್ಳಿ ರಾಮಯ್ಯ ರವರು ಸಂವಿಧಾನ ಆಶಯವನ್ನು ಉದ್ದೇಶಿಸಿ ರಚಿಸಿರುವ “ಗಂಗಮ್ಮ ನೀರಿನಾಗೆ ಜಡೆ ಹೆಣಿತಾ ಅವ್ಳೆ” ಎಂಬ ಅದ್ಭುತ ನಾಟಕ ಪ್ರದರ್ಶನವಾಗುತ್ತಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಗಂಗಮ್ಮ ನೀರಿನಾಗೆ ಜಡೆ ಹೆಣಿತಾ ಅವ್ಳೆ” ಎಂಬ ನಾಟಕ ಪ್ರದರ್ಶನವು ಅಕ್ಟೋಬರ್ 2 ರಂದು ದೊಮ್ಮಲೂರಿನ ‘ಬೆಂಗಳೂರು ಅಂತರಾಷ್ಟ್ರೀಯ ಕೇಂದ್ರ’ ದಲ್ಲಿ ಸಂಜೆ 5 ರಿಂದ 7 ಗಂಟೆಯ ವರೆಗೆ ನಡೆಯಲಿದ್ದು, ಕನ್ನಡದಲ್ಲಿ ಪ್ರದರ್ಶನವಾಗುತ್ತಿರುವ ಈ ನಾಟಕ ಸುಮಾರು ಒಂದು ಗಂಟೆ ಹತ್ತು ನಿಮಿಷ ನಾಟಕದ ಕಾಲಾವಧಿಯಾಗಿದೆ.

ಈ ನಾಟಕವು ಪ್ರಸ್ತುತ ಕಾಲಘಟ್ಟದಲ್ಲಿ ಮರು ಹುಟ್ಟು ಪಡೆಯುತ್ತಿರುವ ಅಸ್ಪೃಶ್ಯತೆ, ತಾರತಮ್ಯ ಮುಂತಾಗಿ ಮಾನವೀಯತೆಯನ್ನು ಮರೆ ಮಾಚಲು ಹೊರಡುತ್ತಿರುವ ಸಮಾಜಕ್ಕೆ ವಿರೋಧವಾಗಿದ್ದು, ಸಂವಿಧಾನ ಆಶಯಗಳ ಉಲ್ಲಂಘನೆ ಮಾಡುವುದು ಕಾನೂನು ರೀತಿಯಲ್ಲಿ ದಂಡನಾರ್ಹ ಅಪರಾಧ ಎಂದು ಸಮಾಜದ ಜನರಿಗೆ ಅರಿವು ಮೂಡಿಸುವುದು ನಾಟಕದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಪ್ರದರ್ಶನವು ಕೇವಲ ಕಾಲ್ಪನಿಕ ಬರಹವಲ್ಲವಾದ್ದರಿಂದ ಇದು ವಿಶೇಷವಾಗಿದ್ದು, ಬದಲಾಗಿ ಈವರೆಗೆ ದಿನಪತ್ರಿಕೆ, ಟಿವಿ ವಾಹಿನಿಗಳಲ್ಲಿ ಪ್ರಕಟಿಸಿದ ಸಮಾಜದ ವಾಸ್ತವ್ಯವನ್ನು ತೋರಿಸಲಿದೆ. ಕೋಟಿಗಾನಹಳ್ಳಿ ರಾಮಯ್ಯ ಬರೆದಿರುವ “ಗಂಗಮ್ಮ ನೀರಿನಾಗೆ ಜಡೆ ಹೆಣಿತಾ ಅವ್ಳೆ” ಎಂಬ ನಾಟಕವನ್ನು ರಾಷ್ಟೀಯ ನಾಟಕ ಶಾಲೆಯ ಸಿ.ಬಸವಲಿಂಗಯ್ಯ ಎಂಬುವವರು ನಿರ್ದೇಶನ ಮಾಡಿದ್ದಾರೆ.

ಮೈಸೂರಿನ ಗೊಲ್ಲಹಳ್ಳಿ ಶ್ರೀನಿವಾಸ್ ಎಂಬುವವರ ಸಂಗೀತದಲ್ಲಿ ಈ ನಾಟಕ ಪ್ರದರ್ಶನ ಗೊಳ್ಳಲಿದ್ದು, ಕೋಲಾರದ ತೇರಳ್ಳಿ ಬೆಟ್ಟದ ಮೇಲೆ ರಾಮಯ್ಯನವರು ಸ್ಥಾಪಿಸಿರುವ ಬುದ್ದಿ ದೀಪ ಶಾಲೆಯವರು ನಾಟಕದ ಕಲಾವಿದರಾಗಿದ್ದಾರೆ.

ನಾಟಕ ಪ್ರದರ್ಶನಕ್ಕೆ ಯಾವುದೇ ಟಿಕೆಟ್ ಗಳಿಲ್ಲದೆ ಉಚಿತ ಪ್ರವೇಶವಾಗಿದ್ದು ಎಲ್ಲರಿಗೂ ಸ್ವಾಗತವನ್ನು ಕೋರಿದ್ದಾರೆ. ಹಾಗೆಯೇ ನಾಟಕದ ಕುರಿತು ಏನಾದರೂ ಪ್ರಶ್ನೆಗಳನ್ನು ಕೇಳಲು, ಪರಿಶೀಲಿಸಲು, ನಾಟಕ ತಂಡದವರನ್ನು ಸಂದರ್ಶನ ಮಾಡಲು 9880755875 ಮತ್ತು 8892323521 ಮೊಬೈಲ್ ಸಂಖ್ಯೆಗಳಿಗೆ ನಮ್ಮನ್ನು ಸಂಪರ್ಕ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು